BBK 12 Grand Finale: ಬಿಗ್‌ಬಾಸ್ ಕನ್ನಡ 12 ಕಿರೀಟ ಯಾರ ಪಾಲು? ಟಾಪ್ 3ರಲ್ಲಿ ಅಚ್ಚರಿ ಅಭ್ಯರ್ಥಿ?

Published : Jan 18, 2026, 12:43 PM IST

ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಹಂತ ತಲುಪಿದ್ದು, ಆರು ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಗಿಲ್ಲಿ ನಟ, ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ಅವರೇ ಟಾಪ್ 3 ಎಂಬ ಚರ್ಚೆ ಜೋರಾಗಿದ್ದು, ಅಭಿಮಾನಿಗಳ ಲೆಕ್ಕಾಚಾರದಂತೆ ವಿನ್ನರ್ ಯಾರು ಎಂಬ ಕುತೂಹಲ ಹೆಚ್ಚಾಗಿದೆ.

PREV
15
ಬಿಗ್‌ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಯಾರು?

ಬಿಗ್‌ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಯಾರು ಎಂದು ತಿಳಿದುಕೊಳ್ಳಲು ಇಡೀ ಕರುನಾಡು ಕಾಯುತ್ತಿದೆ. ಸದ್ಯ ಮನೆಯಲ್ಲಿ ಗಿಲ್ಲಿ ನಟ, ಅಶ್ವಿನಿ ಗೌಡ, ರಘು, ರಕ್ಷಿತಾ ಶೆಟ್ಟಿ, ಧನುಷ್ ಮತ್ತು ಕಾವ್ಯಾ ಶೈವ ಫಿನಾಲೆ ಅಭ್ಯರ್ಥಿಗಳಾಗಿದ್ದಾರೆ. ಈ ಆರು ಸ್ಪರ್ಧಿಗಳಲ್ಲಿ ಯಾರು ವಿನ್ನರ್ ಎಂಬುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

25
ಆರು ಸ್ಪರ್ಧಿಗಳಿಗೆ ಅಭಿಮಾನಿಗಳು

ಈ ಆರು ಸ್ಪರ್ಧಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಸ್ಪರ್ಧಿಗಳ ಹೆಸರಿನಲ್ಲಿ ಫ್ಯಾನ್ಸ್ ಪೇಜ್‌ಗಳು ಕ್ರಿಯೇಟ್ ಆಗಿದ್ದು, ಚುನಾವಣೆನಂತೆ ಅಭಿಮಾನಿಗಳು ಮತಯಾಚನೆ ಮಾಡುತ್ತಿದ್ದಾರೆ. ತಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿದವರಿಗೆ ಫ್ರೀಯಾಗಿ ಟೀ, ತಿಂಡಿ, ಊಟ ಸೇರಿದಂತೆ ವಿವಿಧ ಆಫರ್ ನೀಡಲಾಗುತ್ತಿದೆ.

35
ಮೊದಲಿಗೆ ಹೊರ ಬಂದಿದ್ದು ಕಾವ್ಯಾ ಅಂತೆ?!

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮೊದಲಿಗೆ ಕಾವ್ಯಾ ಶೈವ ಅವರನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಬರಲಾಗಿದೆಯಂತೆ. ಅಂತಿಮವಾಗಿ ಟಾಪ್ 3ರಲ್ಲಿ ಇಬ್ಬರು ಮಹಿಳಾ ಸ್ಪರ್ಧಿ ಮತ್ತು ಒಬ್ಬ ಪುರುಷ ಸ್ಪರ್ಧಿ ಉಳಿದುಕೊಂಡಿದ್ದಾರಂತೆ. ಶನಿವಾರದ ಸಂಚಿಕೆಯಲ್ಲಿ ವಿನ್ನರ್ ಮತ್ತು ರನ್ನರ್ ನಡುವೆ ಮತಗಳ ಅಂತರ ತುಂಬಾ ಕಡಿಮೆ ಎಂದು ಸುದೀಪ್ ಹೇಳಿಕೊಂಡಿದ್ದರು.

45
ಟಾಪ್ 3 ಇವರೇನಾ?

ಸೀಸನ್ 12ರ ಆರಂಭವಾದ ಮೊದಲ ದಿನದಿಂದಲೇ ತಮ್ಮ ಹಾಸ್ಯ ಮತ್ತು ಮಾತುಗಳಿಂದಲೇ ಗಿಲ್ಲಿ ನಟ ಹೊರಗೆ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳಲು ಕಾರಣವಾಗಿತ್ತು. ಅದೇ ರೀತಿ ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿಗೆ ಎದುರಾಳಿಗೆ ನಿಂತು ಟಕ್ಕರ್ ಕೊಟ್ಟಿದ್ದು ಅಶ್ವಿನಿ ಗೌಡ. ಇವರಿಬ್ಬರ ನಡುವೆ ಮಿಂಚಿನಂತೆ ಸುಳಿದಾಡಿದ್ದು ತುಳುನಾಡಿನ ಪುಟ್ಟಿ ರಕ್ಷಿತಾ ಶೆಟ್ಟಿ.

ಇದನ್ನೂ ಓದಿ: BBK 12: ಫಿನಾಲೆಗೆ 10 ಲಕ್ಷ ಮೌಲ್ಯದ ಜಾಕೆಟ್ ಧರಿಸಿ ಬಂದ ಡಾಗ್ ಸತೀಶ್; 2 ಲಕ್ಷ ಕೇಳಿದ ಕಾಕ್ರೋಚ್ ಸುಧಿ

55
ಗಿಲ್ಲಿ ಅಭಿಮಾನಿಗಳ ಲೆಕ್ಕಾಚಾರ ಏನು?

ಈ ಮೇಲಿನ ಕಾರಣದಿಂದ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ ಮತ್ತು ಅಶ್ವಿನಿ ಗೌಡ ಟಾಪ್ 3ರಲ್ಲಿ ಇರಬೇಕು ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಗಿಲ್ಲಿ ಅಭಿಮಾನಿಗಳ ಪ್ರಕಾರ, ವಿನ್ನರ್ ಗಿಲ್ಲಿ ನಟ, ರನ್ನರ್ ರಕ್ಷಿತಾ ಶೆಟ್ಟಿ ಮತ್ತು ಎರಡನೇ ರನ್ನರ್ ಅಶ್ವಿನಿ ಗೌಡ ಆಗಬೇಕೆಂದು ಪೋಸ್ಟ್ ಮಾಡಿಕೊಳ್ಳುತ್ತಿದ್ದಾರೆ. ಈ ಸೀಸನ್ ವಿನ್ನರ್ ಯಾರು ಎಂಬುವುದು ಇಂದಿನ ಸಂಚಿಕೆಯಲ್ಲಿ ರಿವೀಲ್ ಆಗಲಿದೆ.

ಇದನ್ನೂ ಓದಿ: Gilli Nata: ದರ್ಶನ್ ಜೊತೆ ಗಿಲ್ಲಿಯನ್ನು ಹೋಲಿಕೆ ಮಾಡಿದ ಅಭಿಮಾನಿಗಳು; ಇದು ಬೇಕಿತ್ತಾ ಎಂದ ಡೆವಿಲ್ ಫ್ಯಾನ್ಸ್?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories