ಬಿಗ್‌ಬಾಸ್ ಸೀಸನ್ 12ರ ಫಿನಾಲೆಗೆ ಸ್ಪರ್ಧಿ ಸತೀಶ್ ಕೆಡಬಾಮ್ಸ್ 20 ಲಕ್ಷ ರೂಪಾಯಿ ಮೌಲ್ಯದ ಡ್ರೆಸ್ ಧರಿಸಿ ಬಂದಿದ್ದಾರೆ. ಜೊತೆಗೆ, ಸಹ ಸ್ಪರ್ಧಿ ಕಾಕ್ರೋಚ್ ಸುಧಿಗೆ 10 ಲಕ್ಷ ರೂಪಾಯಿ ಬೆಲೆಯ ಜಾಕೆಟ್ ನೀಡಿದ್ದಾಗಿ ಹೇಳಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಂದು ಸಂಜೆ ಕನ್ನಡ ಬಿಗ್‌ಬಾಸ್ ಸೀಸನ್ 12ರ ಫಿನಾಲೆ ಸಂಚಿಕೆ ಪ್ರಸಾರವಾಗಲಿದೆ. ವಿಶೇಷವಾಗಿ ಸೀಸನ್ 12ರ ಎಲ್ಲಾ ಸ್ಪರ್ಧಿಗಳನ್ನು ಫಿನಾಲೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತದೆ. ಶ್ವಾನ ಪ್ರೇಮಿ ಮತ್ತು ಮಾರಾಟಗಾರ ಸತೀಶ್ ಕೆಡಬಾಮ್ಸ್ ಮನೆಯಿಂದ ಹೊರಗೆ ಬಂದ್ಮೇಲೆಯೂ ಹೆಚ್ಚು ಸದ್ದು ಮಾಡಿರುವ ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿ.
25
ಲಕ್ಷಾಂತರ ಮೌಲ್ಯದ ಬಟ್ಟೆ
ಬಿಗ್‌ಬಾಸ್ ಮನೆಯಿಂದ ಹೊರಬರುವ ಸ್ಪರ್ಧಿಗಳನ್ನು ಮಾಧ್ಯಮಗಳು ಸಂದರ್ಶನ ಮಾಡುತ್ತವೆ. ಸಂದರ್ಶನದ ವೇಳೆ ಸತೀಶ್ ಅವರು ತಾವು ಲಕ್ಷಾಂತರ ಮೌಲ್ಯದ ಬಟ್ಟೆ ಧರಿಸುತ್ತದ್ದೆ ಎಂದು ಹೇಳಿಕೊಂಡಿದ್ದರು. ಇದಾದ ಬಳಿಕ ಹೋದಲ್ಲಿ ಬಂದಲ್ಲಿಯೂ ತಾನು ಧರಿಸಿದ್ದು ಲಕ್ಷ ಲಕ್ಷ ಬೆಲೆಯ ಶರ್ಟ್ ಎಂದು ಹೇಳಿಕೊಳ್ಳುತ್ತಿದ್ದರು. ಸತೀಶ್ ಅವರ ಈ ಎಲ್ಲ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದವು.
35
ಒಟ್ಟು 20 ಲಕ್ಷ ರೂಪಾಯಿ ಮೌಲ್ಯದ ಬಟ್ಟೆ
ಇದೀಗ ಸತೀಶ್ ಬಿಗ್‌ಬಾಸ್ ಫಿನಾಲೆ ಕಾರ್ಯಕ್ರಮಕ್ಕೆ ಒಟ್ಟು 20 ಲಕ್ಷ ರೂಪಾಯಿ ಮೌಲ್ಯದ ಡ್ರೆಸ್ ಧರಿಸಿಕೊಂಡು ಬಂದಿರೋದಾಗಿ ಹೇಳಿಕೊಂಡಿದ್ದಾರೆ. ಸತೀಶ್ ಜೊತೆಯಲ್ಲಿ ಆರ್‌ಜೆ ಅಮಿತ್ ಮತ್ತು ಕಾಕ್ರೋಚ್ ಸುಧಿ ವಿಡಿಯೋ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕಾಕ್ರೋಚ್ ಧರಿಸಿದ್ದ ಜಾಕೆಟ್ ತೋರಿಸುತ್ತಾ ಇದರ ಬೆಲೆ 10 ಲಕ್ಷ ರೂಪಾಯಿ ಎಂದು ಸತೀಶ್ ಹೇಳುತ್ತಾರೆ. ಇದಕ್ಕೆ ಅವರಾಗಿಯೇ ಕೊಟ್ಟಿದ್ದು, ನಾನು 3 ಸಾವಿರ ರೂಪಾಯಿ ಜಾಕೆಟ್ ಹಾಕಿಕೊಂಡು ಬಂದಿದ್ದೆ. 10 ಲಕ್ಷದ ಜಾಕೆಟ್ ಬದಲಾಗಿ 2 ಲಕ್ಷ ರೂಪಾಯಿ ಕ್ಯಾಶ್ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕಾಕ್ರೋಚ್ ಸುಧಿ ತಮಾಷೆ ಮಾಡುತ್ತಾರೆ.
ಇವರಿಬ್ಬರ ಮಾತುಗಳನ್ನು ಕೇಳಿಸಿಕೊಂಡ ಆರ್‌ಜೆ ಅಮಿತ್, ಕಷ್ಟ ಅಂತಾನೇದ್ರು ಇದ್ರೆ ಈ ಜಾಕೆಟ್ ಎತ್ತಾಕೊಂಡು ಹೋಗೋಣ, ಒಂದಿಷ್ಟು ಲಕ್ಷ ಹಣನಾದ್ರು ಸಿಗುತ್ತೆ ಎಂದು ಹೇಳುತ್ತಾರೆ. ಇತ್ತ ಕಾಕ್ರೋಚ್ ಸುಧಿ, ನನಗೆ ಇದರ ಬೆಲೆ ಎಷ್ಟು ಅಂತ ಗೊತ್ತಿಲ್ಲ. 10 ಲಕ್ಷ ಅಂತ ಹೇಳಿದ್ದಕ್ಕೆ ಹಾಕಿಕೊಂಡು ನೋಡ್ತಿದ್ದೇನೆ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.