ಬಿಗ್ ಬಾಸ್ ಕಪ್ ಯಾರಿಗೆ ಎನ್ನುವ ಉತ್ತರ ಇನ್ನೇನು ಕಲೆವೇ ಗಂಟೆಗಳಲ್ಲಿ ಸಿಗಲಿದೆ. ಕಪ್ ಗಿಲ್ಲಿ ನಟನಿಗೆ ಅಂತ ಫ್ಯಾನ್ಸ್ ಅನಧಿಕೃತವಾಗಿ ಘೋಷಣೆ ಮಾಡಿಯಾಗಿದೆ. ನಿನ್ನೆ ದಾಖಲೆ ಮಟ್ಟದಲ್ಲಿ ಗೆಲ್ಲುವ ಅಭ್ಯರ್ಥಿಗೆ ಮತ ಬಿದ್ದಿದೆ. 37 ಕೋಟಿ ಮತ ಈಗಾಗಲೇ ಬಂದಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಅತಿ ಹೆಚ್ಚು ವೋಟ್ ಪಡೆದು, ದಾಖಲೆ ಬರೆದು ವಿನ್ ಆಗ್ತಿರುವ ಸ್ಪರ್ಧಿ ಯಾರು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
27
ಮಾಸ್ಟರ್ ಆನಂದ್ ಪ್ರಕಾರ ಗೆಲ್ಲೋರು ಯಾರು?
ಬಿಗ್ ಬಾಸ್ ಗೆಲ್ಲೋರು ಯಾರು ಅಂತ ಅನೇಕ ಸೆಲೆಬ್ರಿಟಿಗಳು ಊಹೆ ಮಾಡ್ತಿದ್ದಾರೆ. ಕೆಲವರು ತಮ್ಮಿಷ್ಟದ ಅಭ್ಯರ್ಥಿ ಗೆಲ್ಬೇಕು ಅಂತ ಅವರ ಪರ ಪ್ರಚಾರ ಕೂಡ ಮಾಡ್ತಿದ್ದಾರೆ. ಮಾಸ್ಟರ್ ಆನಂದ್ ತಮ್ಮ ಪ್ರಕಾರ ಯಾರು ಗೆಲ್ಲಬೇಕು ಎಂಬುದನ್ನು ನೇರವಾಗಿ ಹೇಳದೆ ಪರೋಕ್ಷವಾಗಿ ಹೇಳಿದ್ದಾರೆ.
37
ಬದಲಾಯ್ತಾ ಆನಂದ್ ಆಯ್ಕೆ?
ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ, ಬಿಗ್ ಬಾಸ್ ಶುರುವಾದ ಒಂದು ತಿಂಗಳ ನಂತ್ರ ಆನಂದ್ ಅವರಿಗೆ ಪ್ರಶ್ನೆ ಮಾಡಿದ್ದರು. ಯಾರು ಟಾಪ್ 5 ನಲ್ಲಿ ಇರ್ತಾರೆ, ಯಾರು ವಿನ್ ಆಗ್ಬೇಕು ಅಂತ ಕೇಳಿದ್ದರು. ಅದಕ್ಕೆ ಆನಂದ್, ಗಿಲ್ಲಿ, ರಕ್ಷಿತಾ, ಕಾವ್ಯಾ, ರಘು ಹಾಗೂ ಮಾಳು, ಸ್ಪಂದನಾ ಹೆಸರನ್ನು ಹೇಳಿದ್ದರು. ಗಿಲ್ಲಿ ಗೆದ್ರೆ ಬಹಳ ಖುಷಿ ಎಂದಿದ್ದರು. ಆದ್ರೀಗ ಗಿಲ್ಲಿ ಹೆಸರನ್ನು ಆನಂದ್ ಹೇಳಿಲ್ಲ.
ಈ ಬಾರಿ ಬಿಗ್ ಬಾಸ್ ಯಾರು ಗೆಲ್ಲಬೇಕು ಎನ್ನುವ ಯಶಸ್ವಿನಿ ಪ್ರಶ್ನೆಗೆ, ಇವರೇ ಗೆಲ್ಲಬೇಕು, ಅವರೇ ಗೆಲ್ಲಬೇಕು ಅಂತ ನಾನು ಹೇಳೋದಿಲ್ಲ ಎಂದಿದ್ದಾರೆ. ಜೊತೆಗೆ ಒಂದು ಉದಾಹಣೆ ಮೂಲಕ ತಮ್ಮಿಷ್ಟದ ವ್ಯಕ್ತಿ ಹೆಸರು ಹೇಳಿದ್ದಾರೆ. ಬಿಗ್ ಬಾಸ್ ವ್ಯಕ್ತಿತ್ವದ ಆಟ ಅನ್ನೋದಾದ್ರೆ ಎನ್ನುತ್ತ ಉದಾಹರಣೆ ಮೂಲಕ ವಿವರಿಸಿದ್ದಾರೆ ಆನಂದ್.
57
ಇಲ್ಲಿ ಯಾರು ವಿನ್ನರ್?
ಪಂಚಿಂಗ್ ಬ್ಯಾಗ್ ನೀಡಿ ಇದಕ್ಕೆ ಪಂಚ್ ಮಾಡು ಅಂದಾಗ ಏನು ಮಾಡ್ತೀಯಾ ಅಂತ ಯಶಸ್ವಿನಿ ಅವರನ್ನು ಕೇಳಿದ್ದಾರೆ. ಯಶಸ್ವಿನಿ ಅದಕ್ಕೆ ಪಂಚ್ ಮಾಡ್ತೇನೆ ಅಂತಿದ್ದಾರೆ. ಬೆಲ್ ಹೊಡೆಯುವವರೆಗೂ ಪಂಚ್ ಮಾಡಿದ ಮೇಲೆ ನಿನ್ನ ಪ್ರಕಾರ ಗೆಲ್ಲೋರು ಯಾರು ಅಂತ ಕೇಳಿದ್ದಾರೆ. ಆಗ ಯಶಸ್ವಿನಿ, ನಾನು. ಯಾಕೆಂದ್ರೆ ನಾನು ಹೇಳೋವರೆಗೂ ಪಂಚ್ ಮಾಡುತ್ತಾ ಇದ್ದೆ ಎಂದಿದ್ದಾರೆ. ಇದು ನೋಡುವವರ ಮೇಲೆ ಹೋಗುತ್ತದೆ. ಅತಿ ಹೆಚ್ಚು ಪಂಚ್ ಮಾಡಿದ ವ್ಯಕ್ತಿ ಕೆಲವರಿಗೆ ಇಷ್ಟವಾದರೆ, ಪಂಚ್ ತಡೆದುಕೊಂಡ ಬ್ಯಾಗ್ ಮತ್ತೆ ಕೆಲವರಿಗೆ ಇಷ್ಟವಾಗುತ್ತದೆ ಎಂದಿದ್ದಾರೆ. , ನನ್ನ ಪ್ರಕಾರ ನಿನ್ನ ಪಂಚ್ ತಡೆದುಕೊಂಡ ಬ್ಯಾಗ್ ವಿನ್ನರ್ ಅಂತ ಆನಂದ್ ಹೇಳಿದ್ದಾರೆ.
67
ಅಭಿಪ್ರಾಯ ಬದಲಾವಣೆ
ಇದೇ ವೇಳೆ ಮಾಸ್ಟರ್ ಆನಂದ್, ಬಿಗ್ ಬಾಸ್ ಶುರುವಾಗಿ ಒಂದು ತಿಂಗಳಿಗೂ ಈಗ್ಲೂ ನನ್ನ ಅಭಿಪ್ರಾಯ ಬದಲಾಗಿದೆ. ಒಂದುವರೆ ಗಂಟೆ ಬಿಗ್ ಬಾಸ್ ನೋಡಿದ ಮೇಲೆ ನನ್ನ ಅಭ್ಯರ್ಥಿಗಳ ಆಯ್ಕೆಯಲ್ಲಿ ಸ್ವಲ್ಪ ಬದಲಾವಣೆಯಾಗಿದೆ ಎಂದಿದ್ದಾರೆ.
77
ಅಶ್ವಿನಿ ಪರ ಮಾತನಾಡಿದ್ರಾ ಆನಂದ್?
ಆನಂದ್ ಹೇಳಿದ ಪಂಚ್, ಏಟಿನ ಮಾತು ಕೇಳಿದ ಅನೇಕರಿಗೆ ಆನಂದ್, ಅಶ್ವನಿ ಪರ ಮಾತನಾಡ್ತಿದ್ದಾರೆ ಎನ್ನುವ ಅನುಮಾನ ಬಂದಿದೆ. ಅಶ್ವಿನಿ ಗೆಲ್ಲಬೇಕು ಅಂತ ನೇರವಾಗಿ ಹೇಳಿ. ಗಿಲ್ಲಿ ಅಭಿಮಾನಿಗಳಿಗೆ ಹೆದರಬೇಡಿ ಅಂತ ಕಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.