Suraj Singh: ಬಿಗ್ ಬಾಸ್ ಸ್ಪರ್ಧಿ ಸೂರಜ್ ಸಿಂಗ್ ಇದೀಗ ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಮೊದಲ ಧಾರಾವಾಹಿಯಲ್ಲೇ ಅವರು ಸಖತ್ ಆಗಿ ನಟಿಸುತ್ತಿದ್ದು, ಅವರ ನಟನೆಗೆ ವೀಕ್ಷಕರು ಫಿದಾ ಆಗಿದ್ದಾರೆ. ಎಲ್ಲಾ ಇಮೋಶನ್ ಗಳನ್ನು ತೋರಿಸುವ ಸೂರಜ್ ಗೆ ಭೇಷ್ ಎಂದಿದ್ದಾರೆ.
ಜನರಿಗೆ ಸೂರಜ್ ಸಿಂಗ್ ಪರಿಚಿತರಾಗಿದ್ದೆ ಬಿಗ್ ಬಾಸ್ ಮೂಲಕ. ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಭಾಗವಹಿಸಿದ್ದ ಸೂರಜ್ ಸಿಂಗ್ ಅಲ್ಲಿ ಇದ್ದದ್ದು ಸ್ವಲ್ಪ ಸಮಯವಾದರೂ, ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಅಲ್ಲಿಂದ ಹೊರ ಬಂದ ತಕ್ಷಣ ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ನಾಯಕನ ನಟಿಸುವ ಅವಕಾಶವನ್ನು ಸಹ ಪಡೆದರು ಸೂರಜ್.
26
ಏನು ಉದ್ಯೋಗ ಮಾಡುತ್ತಿದ್ದರು ಸೂರಜ್?
ಹ್ಯಾಂಡ್ಸಮ್ ಹಂಕ್ ಸೂರಜ್ ಸಿಂಗ್ ಈ ಹಿಂದೆ ಎಚ್‌ಪಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಜೊತೆಗೆ ಜಿಮ್ ಟ್ರೇನರ್ ಕೂಡ ಆಗಿದ್ದರು. ಒಟ್ಟಿನಲ್ಲಿ ಅವರು ಎರಡು ಉದ್ಯೋಗ ಮಾಡುತ್ತಿದ್ದರು.ಸೋಶಿಯಲ್ ಮೀಡಿಯಾದಲ್ಲಿ ಮಾಡೆಲಿಂಗ್ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಜನಪ್ರಿಯತೆ ಪಡೆದರು.
36
ನಟನೆಯ ಗಂಧ ಗಾಳಿಯೇ ಇಲ್ಲ
ಐಟಿ ಕಂಪನಿಯಲ್ಲಿ ಉದ್ಯೋಗ, ಜಿಮ್, ಮಾಡೆಲಿಂಗ್ ಎಂದು ಬ್ಯುಸಿಯಾಗಿದ್ದ ಸೂರಜ್ ಸಿಂಗ್ ಅವರಿಗೆ ನಟನೆಯ ಗಂಧ ಗಾಳಿ ಇಲ್ಲವಾಗಿತ್ತು. ಆದರೆ ಇದೀಗ ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ಅದ್ಭುತವಾಗಿ ನಟಿಸುವ ಮೂಲಕ, ಜನಮನ ಗೆಲ್ಲುತ್ತಿದ್ದಾರೆ ಸೂರಜ್.
ಮುದ್ದಿನ ತಮ್ಮಯ್ಯ ತಿಲಕ್ ಗೆ ಅಣ್ಣನಾಗಿ ಆರಂಭದಲ್ಲಿ ಅದ್ಭುತವಾಗಿಯೇ ನಟಿಸುತ್ತಿದ್ದರು ಸೂರಜ್, ತಿಲಕ್ ಪಾತ್ರವು ಸತ್ತಾಗ ಅಣ್ಣನಾಗಿ ದೇವ್ ಭಾವುಕರಾಗಿದ್ದು ನೋಡಿ, ವೀಕ್ಷಕರು ಕಣ್ಣಿರಿಟ್ಟಿದ್ದರು, ಅಷ್ಟೊಂದು ಮನತಟ್ಟುವಂತಿದ್ದು ಸೂರಜ್ ಅಭಿನಯ. ಜೊತೆಗೆ ಪವಿತ್ರಳನ್ನು ಕಂಡರೆ ಕಿಡಿಕಾರುವ ಬಾಸ್ ಆಗಿ ಸಹ ಪರ್ಫೆಕ್ಟ್ ಆಗಿ ಅಭಿನಯಿಸಿದ್ದರು.
56
ಇದೀಗ ಪವಿತ್ರ ಗಂಡನಾಗಿ ಪ್ರಬುದ್ಧ ಪಾತ್ರ
ತಮ್ಮ ಪ್ರೀತಿಸಿದ ಹುಡುಗಿಯ ಜೀವನ ಹಾಳಾಗದಂತೆ ತಡೆಯಲು ಆಕೆಯನ್ನು ಮದುವೆಯಾಗಿ, ಆಕೆಯ ದ್ವೇಷದ ನಡುವೆಯೇ ತಮ್ಮನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು, ಆಕೆಯ ಬೆನ್ನೆಲುಬಾಗಿ ನಿಂತು, ಆಕೆಯ ಮನೆಯವರ ಕಷ್ಟಕ್ಕೆ ನೆರವಾಗಿ ಗಂಡ ಅಂದ್ರೆ ಹೀಗೆ ಇರಬೇಕು ಎನ್ನುವುದಕ್ಕೆ ಉದಾಹರಣೆಯಾದರು ದೇವ್. ಇಲ್ಲೂ ತಮ್ಮ ನೈಜ್ಯ ಅಭಿನಯದ ಮೂಲಕ ಮನ ಗೆದ್ದರು.
66
ವೀಕ್ಷಕರು ಏನು ಹೇಳುತ್ತಿದ್ದಾರೆ?
ಪ್ರತಿಯೊಂದು ಇಮೋಶನ್ ಗಳನ್ನು, ಪಾತ್ರಗಳನ್ನು ಅದ್ಭುತವಾಗಿ ನಿರ್ವಹಿಸುತ್ತಿರುವ, ನೈಜ್ಯ ಅಭಿನಯದ ಮೂಲಕ ಪ್ರತಿ ಇಮೋಶನ್ ಗಳಿಗೂ ಜೀವ ತುಂಬುತ್ತಿರುವ ಸೂರಜ್ ಸಿಂಗ್ ಪಾತ್ರವನ್ನು ಜನ ಮೆಚ್ಚಿಕೊಂಡಿದ್ದು, ಮೊದಲ ಧಾರಾವಾಹಿಯಲ್ಲೇ ಬ್ಲಾಕ್ ಬಸ್ಟರ್ ನಟನೆ ಮಾಡಿದ್ದಾರೆ ಎನ್ನುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.