ಧಾರಾವಾಹಿಯಲ್ಲಿ ಸೀರೆಗೆ ಬೆಂಕಿ ಬೀಳುವ ದೃಶ್ಯದ ಶೂಟಿಂಗ್ ಹೇಗೆ ಮಾಡ್ತಾರೆ? ಮೇಕಿಂಗ್ ವಿಡಿಯೋ

Published : May 16, 2026, 10:20 AM IST

ಸೀರಿಯಲ್‌ಗಳಲ್ಲಿ ಸೀರೆಗೆ ಬೆಂಕಿ ತಗುಲುವ ಅಪಾಯಕಾರಿ ದೃಶ್ಯಗಳನ್ನು ಹೇಗೆ ಚಿತ್ರೀಕರಿಸುತ್ತಾರೆ ಎಂಬುದನ್ನು ಈ ಲೇಖನ ವಿವರಿಸುತ್ತದೆ. ನಟಿ ಎಸ್.ಕೆ.ಗಾಯಿತ್ರಿ ಅಭಿನಯದ ದೃಶ್ಯದ ಮೇಕಿಂಗ್ ವಿಡಿಯೋ ವೈರಲ್ ಆಗಿದೆ.

PREV
15
ಸೀರಿಯಲ್ ಶೂಟಿಂಗ್

ಸೀರಿಯಲ್ ಅಂದ್ರೆ ಸುದೀರ್ಘವಾದ ಡ್ರಾಮಾ ಅಂತ ಹೇಳಬಹುದು. ಕೆಲವೊಂದು ಸನ್ನಿವೇಶಗಳು ಕೇವಲ ಕಲ್ಪನೆಗೆ ಮಾತ್ರ ಸೀಮಿತವಾಗಿರುತ್ತವೆ. ಇಂದು ಸೀರಿಯಲ್‌ನಲ್ಲಿ ಸೀರೆಗೆ ಬೆಂಕಿ ಬೀಳುವ ದೃಶ್ಯದ ಚಿತ್ರೀಕರಣ ಹೇಗೆ ಮಾಡಲಾಗುತ್ತೆ ಎಂದು ನೋಡೋಣ ಬನ್ನಿ.

25
ಮೇಕಿಂಗ್ ವಿಡಿಯೋ

ನಟ ಪಂದಿ ಕಮಲ್ ಎಂಬವರು ಚಿತ್ರೀಕರಣದ ಮೇಕಿಂಗ್ ಕ್ಲಿಪ್‌ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಟಿ ಎಸ್.ಕೆ.ಗಾಯಿತ್ರಿ ಅವರ ನಟನೆಗೆ ಪಂದಿ ಕಮಲ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಮರ್ಪಣಾ ಕಲಾವಿದೆ (Dedication Artist) ಎಂದು ಹಾಡಿಹೊಗಳಿದ್ದಾರೆ. ಈ ಮೇಕಿಂಗ್‌ ವಿಡಿಯೋ ಯಾವ ಸಿನಿಮಾ ಅಥವಾ ಯಾವ ಸೀರಿಯಲ್ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

35
ಶೂಟಿಂಗ್ ಹೇಗೆ ಮಾಡ್ತಾರೆ?

ಇಂದು ಯಾವುದೇ ಅಪಾಯಕಾರಿ ದೃಶ್ಯಗಳ ಚಿತ್ರೀಕರಣಕ್ಕೂ ಮುನ್ನ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ವೈರಲ್ ಆಗಿರುವ ವಿಡಿಯೋ ಕ್ಲಿಪ್‌ನಲ್ಲಿ ಮೊದಲಿಗೆ ಸೀರೆ ಮೇಲೆ ಕೆಲ ಕೆಮಿಕಲ್ ಹಾಕುತ್ತಾರೆ. ಈ ಕೆಮಿಕಲ್ ಹಾಕಿರುವ ಸ್ಥಳದಲ್ಲಿ ಮಾತ್ರ ಬೆಂಕಿ ಕಾಣಿಸಿಕೊಳ್ಳುತ್ತದೆ. ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಕೇವಲ 30 ರಿಂದ 40 ಸೆಕೆಂಡ್‌ಗಳಲ್ಲಿಯೇ ನಂದಿಸಲಾಗುತ್ತದೆ. ಈ ಸಂದರ್ಭದಲ್ಲಿ ಕಲಾವಿದರ ಪಕ್ಕದಲ್ಲಿಯೇ ಬೆಂಕಿ ನಂದಿಸಲು ಸಿಬ್ಬಂದಿ ನಿಂತಿರುತ್ತಾರೆ.

45
5 ಮಿಲಿಯನ್‌ಗೂ ಅಧಿಕ ವ್ಯೂವ್ ಬಂದಿವೆ

ಈ ಮೇಕಿಂಗ್ ಕ್ಲಿಪ್‌ಗೆ 24 ಗಂಟೆಯೊಳಗೆ 5 ಮಿಲಿಯನ್‌ಗೂ ಅಧಿಕ ವ್ಯೂವ್ ಬಂದಿವೆ. ಈ ವಿಡಿಯೋ ನೋಡಿದ ನಟಿಯ ಅಭಿಮಾನಿಗಳು, ಅಬ್ಬಾ, ಆದ್ರೂ ಅದು ಬೆಂಕಿ ಅಲ್ಲವಾ? ಯಾರಿಗೆ ಆಗಲಿ ಒಂದು ಕ್ಷಣ ಭಯವಾಗುತ್ತದೆ. ಆದ್ರೂ ನಟಿಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

55
ಕ್ವೀನ್ಸ್ ಆಫ್ ಮದ್ರಾಸ್

ಕೆಲ ಬಳಕೆದಾರರು, ethirneechal ಸೀರಿಯಲ್‌ಗೆ ನೀವು ಯಾವಾಗ ಬರ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ನಟಿ ಗಾಯಿತ್ರಿ ಅವರು ತಮಿಳು ಸಿನಿಮಾ ಮತ್ತು ಸೀರಿಯಲ್‌ಗಳಲ್ಲಿಯೂ ನಟಿಸಿದ್ದಾರೆ. ಕ್ವೀನ್ಸ್ ಆಫ್ ಮದ್ರಾಸ್ ಇವರಿಗೆ ದೊಡ್ಡ ಪ್ರಮಾಣದ ಜನಪ್ರಿಯತೆಯನ್ನು ತಂದುಕೊಟ್ಟ ಶೋ ಆಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories