ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿರುವ ನಟಿ ಶೋಭಾ ಶೆಟ್ಟಿ ಹೈದರಾಬಾದ್‌ನ ಐತಿಹಾಸಿಕ ತಾಣ ಚಾರ್ಮಿನಾರ್‌ಗೆ ಭೇಟಿ ನೀಡಿದ್ದಾರೆ. ಈ ವೇಳೆ ಟ್ರೆಂಡಿ ಔಟ್‌ಫಿಟ್‌ನಲ್ಲಿ ಶೋಭಾ ಶೆಟ್ಟಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ.
ಕನ್ನಡದ ಸೂಪರ್ ಹಿಟ್ ಧಾರಾವಾಹಿ 'ಅಗ್ನಿಸಾಕ್ಷಿ' ಮೂಲಕ ಮನೆಮಾತಾದ ನಟಿ ಶೋಭಾ ಶೆಟ್ಟಿ, ನಂತರ ತೆಲುಗಿನ 'ಕಾರ್ತೀಕ ದೀಪಂ' ಧಾರಾವಾಹಿಯ 'ಮೌನಿತಾ' ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದರು. ಶೋಭಾ ತಮ್ಮ ವಿಭಿನ್ನ ಅಭಿನಯದ ಮೂಲಕವೇ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಆ ಬಳಿಕ ‘ಬಿಗ್ ಬಾಸ್’ ಶೋನಲ್ಲಿ ಕಾಣಿಸಿಕೊಂಡು ತಮ್ಮ ಕ್ರೇಜ್ ಅನ್ನು ಮತ್ತಷ್ಟು ಹೆಚ್ಚಿಸಿಕೊಂಡರು.
26
ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಇದೀಗ ಈ ಬ್ಯೂಟಿ ಹೈದರಾಬಾದ್‌ನ ಐತಿಹಾಸಿಕ ತಾಣ ಚಾರ್ಮಿನಾರ್‌ಗೆ ಭೇಟಿ ನೀಡಿದ್ದು, ಅಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ಈ ವೇಳೆ ಶೋಭಾ ಶೆಟ್ಟಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
36
ಟ್ರೆಂಡಿ ಲುಕ್‌ನಲ್ಲಿ ಶೋಭಾ ಶೆಟ್ಟಿ!
ಚಾರ್ಮಿನಾರ್ ಸುತ್ತಮುತ್ತಲಿನ ಬೀದಿಗಳಲ್ಲಿ ಶೋಭಾ ಶೆಟ್ಟಿ ಫೋಟೋಗಳಿಗೆ ಪೋಸ್ ನೀಡಿದ್ದು, ಟ್ರೆಂಡಿ ಔಟ್‌ಫಿಟ್‌ನಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಸಿಂಪಲ್ ಆಗಿದ್ದರೂ ಗ್ಲಾಮರಸ್ ಆಗಿರುವ ಲುಕ್‌ನೊಂದಿಗೆ, ಟ್ರೆಡಿಷನಲ್ ಹ್ಯಾಂಡ್‌ಬ್ಯಾಗ್ ಹಿಡಿದು ಕ್ಯಾಮೆರಾಗೆ ಪೋಸ್ ನೀಡಿರುವ ನಟಿಯ ಫೋಟೋಗಳು ಅಭಿಮಾನಿಗಳ ಗಮನ ಸೆಳೆದಿವೆ.
ಚಾರ್ಮಿನಾರ್‌ನ ಸೌಂದರ್ಯವನ್ನು ಆಸ್ವಾದಿಸುತ್ತಾ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಶೋಭಾ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳು ಪೋಸ್ಟ್ ಆದ ಕೆಲವೇ ಸಮಯದಲ್ಲಿ ಅಭಿಮಾನಿಗಳು ಲೈಕ್ಸ್ ಮತ್ತು ಕಾಮೆಂಟ್‌ಗಳ ಸುರಿಮಳೆಗೈಯಲು ಆರಂಭಿಸಿದ್ದಾರೆ.
56
‘ತುಂಬಾ ಕ್ಯೂಟ್’ ಅಂತಿದ್ದಾರೆ ಫ್ಯಾನ್ಸ್!
ಕಿರುತೆರೆಯಲ್ಲಿ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದಲ್ಲೂ ಸದಾ ಆಕ್ಟಿವ್ ಆಗಿರುವ ಶೋಭಾ ಶೆಟ್ಟಿ, ಆಗಾಗ್ಗೆ ತಮ್ಮ ಹೊಸ ಫೋಟೋಶೂಟ್‌ಗಳು ಮತ್ತು ವೈಯಕ್ತಿಕ ಕ್ಷಣಗಳ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಚಾರ್ಮಿನಾರ್‌ನ ಬೀದಿಗಳಲ್ಲಿ ಅವರು ಮಾಡಿರುವ ಈ ಸಿಂಪಲ್ ಫೋಟೋಶೂಟ್ ಕೂಡ ನೆಟ್ಟಿಗರ ಗಮನ ಸೆಳೆದಿದೆ.
66
'ಸಖತ್ ಸ್ಟೈಲಿಶ್'
ಸದ್ಯ ನಟಿಯ ಸ್ಟೈಲಿಶ್ ಲುಕ್‌ಗೆ ಫಿದಾ ಆಗಿರುವ ಅಭಿಮಾನಿಗಳು 'ತುಂಬಾ ಕ್ಯೂಟ್ ಆಗಿದ್ದೀರಿ', 'ಸಖತ್ ಸ್ಟೈಲಿಶ್' ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಚಾರ್ಮಿನಾರ್ ಹಿನ್ನೆಲೆಯಲ್ಲಿನ ಶೋಭಾ ಶೆಟ್ಟಿಯ ಈ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ನಟಿಯ ಹೊಸ ಲುಕ್‌ಗೆ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.