Amruthadhaare Serial: ಭೂಮಿಕಾಗೆ ಪ್ರಜ್ಞೆ ಬಂದಾಯ್ತು! ಶಕುಂತಲಾ ನಿಂತ ನೆಲವೇ ಕುಸಿದೋಯ್ತು

Published : Oct 03, 2026, 08:16 PM IST

ಅಮೃತಧಾರೆ ಧಾರಾವಾಹಿಯಲ್ಲಿ ಭಾರಿ ಟ್ವಿಸ್ಟ್ ಎದುರಾಗಿದ್ದು, ಪ್ರಜ್ಞೆ ಬಂದ ಅಸಲಿ ಭೂಮಿಕಾ ಮನೆಗೆ ಕರೆ ಮಾಡಿದ್ದಾಳೆ. ಈ ವಿಷಯ ತಿಳಿದು ಶಕುಂತಲಾ ಮತ್ತು ಜೈದೇವ್ ಆತಂಕಗೊಂಡಿದ್ದಾರೆ. ಅಸಲಿ ಭೂಮಿಕಾ ವಾಪಸ್ ಬಂದರೆ ಇವರ ಕುತಂತ್ರ ಬಯಲಾಗಲಿದೆಯೇ ಎಂಬ ಕುತೂಹಲ ಮೂಡಿದೆ.

PREV
16
ಭಾರಿ ಟ್ವಿಸ್ಟ್​

ಅಮೃತಧಾರೆ ಸೀರಿಯಲ್​ (Amruthadhaare Serial)ನಲ್ಲಿ ಈಗ ಭಾರಿ ಟ್ವಿಸ್ಟ್​ ಸಿಕ್ಕಿದೆ. ಭೂಮಿಕಾಗೆ ಪ್ರಜ್ಞೆ ಬಂದಿದ್ದು, ಅವಳು ಲ್ಯಾಂಡ್​ಲೈನ್​ಗೆ ಕಾಲ್​ ಮಾಡಿದ್ದಾಳೆ. ಆಗ ನಕಲಿ ಭೂಮಿಕಾ ಅರ್ಥಾತ್​ ದೀಪಿಕಾ ಅದನ್ನು ರಿಸೀವ್​ ಮಾಡಿದ್ದಾಳೆ.

26
ಶಕುಂತಲಾಗೆ ವಿಷ್ಯ ಹೇಳಿದ ದೀಪಿಕಾ

ಈ ವಿಷ್ಯವನ್ನು ಶಕುಂತಲಾಗೆ ದೀಪಿಕಾ ಹೇಳಿದ್ದಾಳೆ. ಅವಳಿಗೆ ಅಸಲಿ ವಿಷ್ಯನೇ ಗೊತ್ತಿಲ್ಲ. ಆದ್ದರಿಂದ ಭೂಮಿಕಾಗೆ ಪ್ರಜ್ಞೆ ಬಂದಿರೋದು ಅವಳಿಗೆ ತುಂಬಾ ಖುಷಿ ಕೊಟ್ಟಿದೆ.

36
ನಿಂತ ನೆಲವೇ ಕುಸಿದು ಹೋಯ್ತು

ಆದರೆ, ಈ ವಿಷಯ ಕೇಳುತ್ತಲೇ ಶಕುಂತಲಾ ನಿಂತ ನೆಲವೇ ಕುಸಿದು ಹೋಗಿದೆ. ಏನು ಮಾಡಬೇಕು ಎಂದು ತೋಚುತ್ತಿಲ್ಲ. ಈಗ ಶಕುಂತಲಾ ಮತ್ತು ಜೈದೇವ್​ ಸೇರಿ ಏನು ಮಾಡುತ್ತಾರೆ ಎನ್ನೋದನ್ನು ಕಾದು ನೋಡಬೇಕಿದೆ.

46
ಸುಮ್ಮನೇ ಬಿಡಲ್ಲ ದೀಪಿಕಾ

ಅಷ್ಟಕ್ಕೂ ದೀಪಿಕಾ ತುಂಬಾ ಒಳ್ಳೆಯವಳು ಎಂದು ತೋರಿಸಲಾಗಿದೆ. ಅವಳಿಗೆ ಶಕುಂತಲಾ ಮತ್ತು ಜೈದೇವರ ಕುತಂತ್ರ ಗೊತ್ತಿಲ್ಲ. ಒಂದು ವೇಳೆ ಅಸಲಿ ವಿಷ್ಯ ಅವಳಿಗೆ ಗೊತ್ತಾದರೆ ಅವಳು ಕೂಡ ಸುಮ್ಮನೇ ಬಿಡುವವಳಲ್ಲ.

56
ಭೂಮಿಕಾ ವಾಪಸ್​ ಬಂದರೆ ಏನಾಗುತ್ತದೆ

ಆದರೆ, ಇದೀಗ ಅಸಲಿ ಭೂಮಿಕಾ ವಾಪಸ್​ ಬಂದರೆ ಏನಾಗುತ್ತದೆ? ಶಕುಂತಲಾ ಮತ್ತು ಜೈದೇವ್​ ಆಕೆಯನ್ನು ವಾಪಸ್​ ಬರಲು ಕೊಡ್ತಾರಾ ಅಥವಾ ಇನ್ನೇನೋ ಕಿತಾಪತಿ ಮಾಡ್ತಾರಾ ಎನ್ನೋದನ್ನು ನೋಡಬೇಕಿದೆ.

66
ಕಥೆ ಮುಗಿದಂತೆ

ಒಂದು ವೇಳೆ ಕಿತಾಪತಿ ತಿಳಿದರೆ, ಅಲ್ಲಿಗೆ ಶಕುಂತಲಾ ಮತ್ತು ಜೈದೇವನ ಅಸಲಿ ಮುಖ ಬಯಲಾಗುತ್ತದೆ. ಹೀಗಾದರೆ ಅಲ್ಲಿಗೆ ಇಬ್ಬರ ಕಥೆಯೂ ಮುಗಿದಂತೆ. ಮತ್ತೆ ಹೊಸ ಟ್ವಿಸ್ಟ್​ ಸೇರಿಸಲೇಬೇಕು. ಆದ್ದರಿಂದ ಏನಾಗುವುದೋ ಎಂದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories