'ಹಳ್ಳಿ ಪವರ್' ರಿಯಾಲಿಟಿ ಷೋ ಸ್ಪರ್ಧಿ ಸ್ನೇಹಾ ದಿಢೀರ್​ ಕಣ್ಮರೆ! ರಾತ್ರಿಯೆಲ್ಲಾ ಹುಡುಕಾಟ: ಕೊನೆಗೆ ಏನಾಯ್ತು

Published : Oct 03, 2026, 06:20 PM IST

ಜೀ ಕನ್ನಡದ 'ಹಳ್ಳಿ ಪವರ್ ರಿಲೋಡೆಡ್' ಶೋನಿಂದ ಸ್ಪರ್ಧಿ ಸ್ನೇಹಾ ಗೌಡ ದಿಢೀರ್ ಕಣ್ಮರೆಯಾಗಿದ್ದು ಆತಂಕ ಸೃಷ್ಟಿಸಿತ್ತು. ಇದು ಟಿಆರ್​ಪಿ ಗಿಮಿಕ್ ಎಂದು ವೀಕ್ಷಕರು ಭಾವಿಸಿದ್ದರು. ಆದರೆ ಕೊನೆಗೆ ಅವರು ಅಳುತ್ತಾ ವಾಪಸ್ ಬಂದು ಕ್ಷಮೆ ಯಾಚಿಸಿದ್ದಾರೆ.

PREV
16
ದಿಢೀರ್​ ಕಣ್ಮರೆ

ಜೀ ಕನ್ನಡದ 'ಹಳ್ಳಿ ಪವರ್ ರಿಲೋಡೆಡ್' (Halli Power Reloaded) ರಿಯಾಲಿಟಿ ಶೋ ಆರಂಭವಾಗಿದ್ದು, ಕೆಲವು ವಾರಗಳಾಗಿವೆ. ಇದ್ದಕ್ಕಿದ್ದಂತೆಯೇ ಇದರಲ್ಲಿರುವ ಸ್ಪರ್ಧಿ ಸ್ನೇಹಾ ಗೌಡ ದಿಢೀರ್​ ಕಣ್ಮರೆಯಾಗಿ ಆತಂಕ ಸೃಷ್ಟಿಯಾಗಿತ್ತು.

26
ಹುಡುಕಿದರೂ ಸಿಗಲಿಲ್ಲ

ಸ್ನೇಹಾ ಷೋ ಅನ್ನು ಮಧ್ಯೆಯೇ ಬಿಟ್ಟು ಹೋಗಿದ್ದರು. ನಿರ್ಮಾಪಕರು ಮತ್ತು ಸಹ ಸ್ಪರ್ಧಿಗಳ ಜೊತೆ ನಡೆದ ಮಾತಿನ ಚಕಮಕಿ ಹಾಗೂ ಕೋಪದಿಂದಾಗಿ ಸ್ನೇಹಾ ಗೌಡ ಸೆಟ್‌ನಿಂದ ಹೊರಟುಹೋಗಿದ್ದಾರೆ. ಅವರನ್ನು ಎಲ್ಲಿ ಹುಡುಕಿದರೂ ಅವರು ಸಿಕ್ಕಿರಲಿಲ್ಲ.

36
ಷೋ ಬಿಟ್ಟು ಹೋಗಿದ್ದ ಸ್ನೇಹಾ

ತಮ್ಮ ಮೇಲೆ ಬಂದ ಆರೋಪ, ಒತ್ತಡ ಮತ್ತು ತಮ್ಮ ಪೋಷಕರ ಗೌರವದ ಬಗ್ಗೆಯಿದ್ದ ಚಿಂತೆಯಿಂದಾಗಿ ಸ್ನೇಹಾ ಅವರು ಕೋಪದಿಂದ ಷೋ ಬಿಟ್ಟು ಹೊರಟಿದ್ದರು.ಅವರು ಕಣ್ಮರೆಯಾದ ಹಿನ್ನೆಲೆಯಲ್ಲಿ ಶೋನ ನಿರೂಪಕ ಅಕುಲ್ ಬಾಲಾಜಿ, ತಂಡದವರು ಹಾಗೂ ಸ್ಥಳೀಯ ಗ್ರಾಮಸ್ಥರು ರಾತ್ರಿ ವೇಳೆ ಐಹೊಳೆ ಸುತ್ತಮುತ್ತ ಹಾಗೂ ಬಸ್ ನಿಲ್ದಾಣದ ಕಡೆಗಳಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಅವರು ಎಲ್ಲಿಯೂ ಸಿಕ್ಕಿರಲಿಲ್ಲ.

46
ರಿಯಾಲಿಟಿ ಷೋ ಅಂದ್ರೆ...

ಹೇಳಿ ಕೇಳಿ ರಿಯಾಲಿಟಿ ಷೋ. ಅದರಲ್ಲಿ ಇರುವ ರಿಯಾಲಿಟಿ ಬಗ್ಗೆ ಈಗಿನ ವೀಕ್ಷಕರಿಗೆ ತಿಳಿದದ್ದೇ. ಒಂದು ಷೋ ಟಿಆರ್​ಪಿ ಕಡಿಮೆಯಾದರೆ ಅಥವಾ ಇನ್ನಾವುದೋ ಷೋಗಿಂತ ಕಡಿಮೆ ವ್ಯೂವ್ಸ್​ ಬರುತ್ತಿದ್ದರೆ, ಏನೆಲ್ಲಾ ಗಿಮಿಕ್​ ಮಾಡ್ತಾರೆ ಎನ್ನೋದು ತಿಳಿಯದ ಪೆದ್ದು ಅಂತೂ ವೀಕ್ಷಕರು ಅಲ್ಲ. ಇದೇ ಕಾರಣಕ್ಕೆ ಒಂದು ವೇಳೆ ನಿಜವಾಗಿ ನಾಪತ್ತೆಯಾಗಿದ್ದರೂ ಅದು ಟಿಆರ್​ಪಿ ಗಿಮ್ಮಿಕ್ಕೇ ಎನ್ನುವಷ್ಟರ ಮಟ್ಟಿಗೆ ರಿಯಾಲಿಟಿ ಷೋಗಳು ಅನ್ನಿಸಿಕೊಂಡಿವೆ.

56
ಪ್ರಚಾರದ ಗಿಮಿಕ್​?

ಇದೇ ಕಾರಣಕ್ಕೆ, ಸ್ನೇಹಾ ಗೌಡ ಅವರು ನಾಪತ್ತೆ ಆಗಿದ್ದನ್ನು ವಾಹಿನಿ ಪದೇ ಪದೇ ಪ್ರಸಾರ ಮಾಡುತ್ತಿದ್ದದ್ದನ್ನು ನೋಡಿ, ಇದು ಕೂಡ ಟಿಆರ್​ಪಿ ಗಿಮ್ಮಿಕ್ಕೇ ಎಂದುಕೊಂಡವರು ಬಹಳಷ್ಟು ಮಂದಿ. ಇದು ಪ್ರಮೋಷನ್​ಗಾಗಿ ಮಾಡ್ತಿರೋ ಗಿಮಿಕ್​ ಎಂದೇ ಕಮೆಂಟ್​ನಲ್ಲಿ ಹೇಳಲಾಗಿತ್ತು.

66
ಅಳುತ್ತಾ ವಾಪಸ್​

ಅದೇನೇ ಇದ್ದರೂ ಕೊನೆಗೆ ಸ್ನೇಹಾ ಅಳುತ್ತಾ ವಾಪಸ್​ ಬಂದಿದ್ದಾರೆ. ಕೊನೆಗೆ ಅಕುಲ್​ ಅವರು ಕೇಳಿದ ಪ್ರಶ್ನೆಗೆ ಅಳುತ್ತಾ, ನಿರೂಪಕ ಹಾಗೂ ತಂಡದ ಮುಂದೆ ಕಣ್ಣೀರಿಟ್ಟು ಕ್ಷಮೆ ಯಾಚಿಸಿದ್ದಾರೆ. ನಾನು ಒತ್ತಡದಿಂದ ಹಾಗೆ ಮಾಡಿದೆ. ನಾನು ಮಾಡಿದ್ದು ತಪ್ಪು ಎಂದು ತಿಳಿಯಿತು. ಅದಕ್ಕಾಗಿ ವಾಪಸ್​ ಬಂದಿದ್ದೇನೆ ಎಂದಿದ್ದಾರೆ. ಒಟ್ಟಿನಲ್ಲಿ ಸದ್ಯ ಈ ಬೆಳವಣಿಗೆಯಿಂದಾಗಿ ಷೋ ಸ್ವಲ್ಪ ಪ್ರಚಾರಕ್ಕೆ ಬಂದು, ಸ್ನೇಹಾ ಗೌಡ ಯಾರು, ಈ ಷೋ ಏನು ಎನ್ನೋದನ್ನು ಕಂಡುಕೊಂಡರು ವೀಕ್ಷಕರು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories