Shravani Subramanya: ಶ್ರಾವಣಿ ಮತ್ತು ಸುಬ್ರಮಣ್ಯ ಅವರ ಮದುವೆಗೆ ಶ್ರೀವಲ್ಲಿಯೇ ಕಾರಣ ಎಂಬ ವಿಚಾರ ವಿಜಯಾಂಬಿಕಾಗೆ ತಿಳಿದಿದೆ. ಶ್ರೀವಲ್ಲಿಯ ತ್ಯಾಗದಿಂದ ಮದುವೆಯಾಗಿರುವುದನ್ನು ತಿಳಿದು ವಿಜಯಾಂಬಿಕಾಗೆ ಆಘಾತವಾಗಿದೆ. ಶ್ರೀವಲ್ಲಿ ವಿಜಯಾಂಬಿಕಾಗೆ ಎಚ್ಚರಿಕೆ ನೀಡಿದ್ದಾಳೆ.
ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ನಲ್ಲಿ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿದೆ. ಶ್ರೀವಲ್ಲಿಯ ಮಹಾತ್ಯಾಗದಿಂದ ಶ್ರಾವಣಿ-ಸುಬ್ರಮಣ್ಯ ಮದುವೆಯಾಗಿರೋ ವಿಚಾರ ವಿಜಯಾಂಬಿಕೆ ಮತ್ತು ಮದನ್‌ಗೆ ಗೊತ್ತಾಗಿದೆ. ಇಷ್ಟು ಮಾತ್ರವಲ್ಲ ವಿಜಯಾಂಬಿಕೆಗೆ ಶ್ರೀವಲ್ಲಿ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾಳೆ. ಇದರಿಂದಾಗಿ ವಿಜಯಾಂಬಿಕಾಗೆ ಬಿಗ್ ಶಾಕ್ ಎದುರಾಗಿದೆ.
25
ವಣಿ-ಸುಬ್ರಮಣ್ಯ ಮದುವೆಗೆ ಶ್ರೀವಲ್ಲಿಯೇ ಕಾರಣ
ರೌಡಿಗಳಿಂದ ಸುಬ್ರಮಣ್ಯನನ್ನು ರಕ್ಷಿಸಿದ ಶ್ರೀವಲ್ಲಿ ಮದುವೆಗೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡು ಶ್ರೀವಲ್ಲಿಗೆ ವಿಜಯಾಂಬಿಕಾ ಫೋನ್ ಮಾಡಿದ್ದಾಳೆ. ಈ ವೇಳೆ ತಾನೇ ಶ್ರಾವಣಿ-ಸುಬ್ರಮಣ್ಯ ಮದುವೆ ನಡೆಯಲು ಕಾರಣ. ದೇವಸ್ಥಾನದವರೆಗೂ ಬಂದ್ರೂ ಮದುವೆಗೆ ಬರಲಿಲ್ಲ. ನಾನು ಪ್ರೀತಿಯನ್ನು ಬಲವಂತದಿಂದ ಪಡೆದುಕೊಳ್ಳಲು ಹೋಗಿ ಸುಬ್ಬುನಿಂದ ದೂರವಾದೆ ಎಂದು ಶ್ರೀವಲ್ಲಿ ಹೇಳಿದ್ದಾಳೆ.
35
ಭ್ರಮೆಯಿಂದ ಹೊರಬಂದ ಶ್ರೀವಲ್ಲಿ
ಸುಬ್ಬು ಪ್ರೀತಿಯನ್ನು ಹಿಡಿದಿಟ್ಟುಕೊಂಡು ಅವನಿಂದ ತಾಳಿ ಕಟ್ಟಿಸಿಕೊಳ್ಳುತ್ತೀನಿ ಅಂದುಕೊಂಡಿದ್ದು ನಾನು ಮಾಡಿದ ತಪ್ಪು. ನಾನು ಆ ಭ್ರಮೆಯಿಂದ ಆಚೆ ಬಂದಿದ್ದೇನೆ. ನೀವು ಸಹ ಈ ವಿಚಾರಗಳಿಂದ ಹೊರಗೆ ಬಂದು ಅವರಿಬ್ಬರನ್ನು ಬದುಕಲು ಬಿಡಿ ಎಂದು ಶ್ರಾವಣಿ ಹೇಳಿದ್ದಾಳೆ.
ಇನ್ಮುಂದೆ ಅವರ ಮೇಲೆ ದ್ವೇಷ ಸಾಧಿಸೋದು, ಕೆಂಡಕಾರೋದು ಯಾವುದು ಬೇಡ. ನನಗಂತೂ ನಿಮ್ಮ ಸಹವಾಸವೇ ಸಾಕು. ಸುಬ್ಬು ನನ್ನವನಾಗಬೇಕೆಂಬ ದುರಾಸೆಯಿಂದ ನಿಮ್ಮ ಜೊತೆ ಕೈ ಜೋಡಿಸಿದೆ. ನಾನು ಅನ್ಯಾಯದ ದಾರಿ ಹಿಡಿಯದೇ ನ್ಯಾಯವಾಗಿ ನಡೆದುಕೊಂಡಿದ್ರೆ ಸುಬ್ಬು ನನಗೆ ಸಿಗುತ್ತಿದ್ದ. ನಿಮ್ಮಂಥವರ ಸಹವಾಸ ಮಾಡಿ ನಾನು ತಪ್ಪು ಮಾಡಿದೆ ಎಂದು ವಿಜಯಾಂಬಿಕಾ ಮುಖದ ಮೇಲೆ ಹೊಡೆದಂತೆ ಶ್ರೀವಲ್ಲಿ ಹೇಳಿದ್ದಾಳೆ.
ಇಲ್ಲಿ ಯಾರು ವಿಲನ್ ಎಂಬ ವಿಷಯ ಎಲ್ಲರಿಗೂ ಗೊತ್ತಿದೆ. ಶ್ರಾವಣಿ ಮತ್ತು ಸುಬ್ಬು ಮದುವೆಯಾಗಿದ್ದಾರೆ ಎಂಬ ಕೋಪಕ್ಕೆ ಅವರಿಬ್ಬರಿಗೂ ತೊಂದರೆ ಮಾಡುವ ಯೋಚನೆ ಇದ್ರೆ ಅದರಿಂದ ಹೊರಗೆ ಬನ್ನಿ. ಸುಬ್ಬುಗೆ ತೊಂದರೆ ಮಾಡುವ ಯೋಚನೆಯನ್ನೇ ಇಲ್ಲಿಗೆ ಬಿಟ್ಟುಬಿಡಿ. ಅವರಿಬ್ಬರನ್ನು ಕಾಯೋದಕ್ಕೆ ಇನ್ಮುಂದೆ ಶ್ರೀವಲ್ಲಿ ನಿಮಗೆ ಎದುರಾಗಿ ನಿಲ್ಲುತ್ತಾಳೆ ಎಂದು ವಿಜಯಾಂಬಿಕಾಗೆ ಎಚ್ಚರಿಕೆ ನೀಡಿದ್ದಾಳೆ.