'ನಾ ನಿನ್ನ ಬಿಡಲಾರೆ' ಧಾರಾವಾಹಿಯಿಂದ ದಿಢೀರ್ ಕಾಣೆಯಾದ ನಟಿ? ಎಲ್ಲಿ ಹೋದ್ರು?
ಜೀ ಕನ್ನಡದ 'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಶರತ್ ಮತ್ತು ದುರ್ಗಾ ಮದುವೆಯ ನಂತರ ಮಾಳವಿಕಾ ಪಾತ್ರ ಕಾಣೆಯಾಗಿದೆ. ಮಾಳವಿಕಾ ಎಲ್ಲಿ ಎಂದು ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಧಾರಾವಾಹಿಯ ಮುಂದಿನ ತಿರುವುಗಳೇನು ಎಂಬುದು ಕುತೂಹಲ ಮೂಡಿಸಿದೆ.

ನಾ ನಿನ್ನ ಬಿಡಲಾರೆ
ಜೀ ಕನ್ನಡ ವಾಹಿನಿಯ 'ನಾ ನಿನ್ನ ಬಿಡಲಾರೆ' ಸೀರಿಯಲ್‌ನಲ್ಲಿ ದೇವಿಯ ಆಟದಂತೆ ಶರತ್ ಮತ್ತು ದುರ್ಗಾ ಮದುವೆಯಾಗಿದೆ. ತನ್ನ ಇಚ್ಛೆಗೆ ವಿರುದ್ಧವಾಗಿ ಕಣ್ಮುಂದೆ ಶರತ್ ಮದುವೆಯಾಗುತ್ತಿದ್ದರೂ ಅದನ್ನು ತಡೆಯುವಲ್ಲಿ ಮಾಳವಿಕಾ ವಿಫಲವಾಗಿದ್ದಳು.
ಮಾಳವಿಕಾ ಪಾತ್ರ
ಈ ಧಾರಾವಾಹಿಯಲ್ಲಿ ಮಾಳವಿಕಾ ಪಾತ್ರ ತುಂಬಾ ಪ್ರಾಮುಖ್ಯತೆಯನ್ನು ಹೊಂದಿದೆ. ಅಮ್ಮನನ್ನು ಅಮರಳನ್ನಾಗಿ ಮಾಡಲು ಅಘೋರಿ ಜೊತೆ ಸೇರಿ ಮಾಳವಿಕಾ ಮಾಡಬಾರದ ಕೆಲಸಗಳನ್ನು ಮಾಡುತ್ತಿದ್ದಾಳೆ. ಮಾಯಾಳನ್ನು ತನ್ನ ಆಟಿಕೆಯಂತೆ ಮಾಡಿಕೊಂಡಿದ್ದ ಮಾಳವಿಕಾಗೆ ತಾಯಿ ಜಗನ್ಮಾಥೆ ಮುಂದೆ ಸೋಲಾಗಿದೆ.
ಮಾಳವಿಕಾ ಎಲ್ಲಿ?
ಶರತ್ ಮತ್ತು ದುರ್ಗಾ ಮದುವೆ ನಂತರ ಕೋಪಗೊಂಡ ಮಾಳವಿಕಾ ಕಲ್ಯಾಣ ಮಂಟಪದಿಂದ ಹೊರಡುತ್ತಾಳೆ. ಈ ಮದುವೆ ಬಳಿಕ ಸೀರಿಯಲ್‌ನಲ್ಲಿ ಮಾಳವಿಕಾ ಪಾತ್ರ ಕಾಣೆಯಾಗಿದೆ. ದಿಢೀರ್ ಮಾಳವಿಕಾ ಕಾಣಿಸಿಕೊಳ್ಳದಿರೋದು ವೀಕ್ಷಕರಲ್ಲಿ ಗೊಂದಲವನ್ನುಂಟು ಮಾಡಿದೆ. ಸೀರಿಯಲ್ ಪ್ರೋಮೋಗಳಿಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಮಾಳವಿಕಾ ಎಲ್ಲಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಮದುವೆ ಹೇಗಾಯ್ತು?
ಶರತ್ ಮತ್ತು ದುರ್ಗಾಗೆ ತಮ್ಮ ಮದುವೆ ಹೇಗಾಯ್ತು ಎಂಬುದರ ಬಗ್ಗೆ ಇಬ್ಬರಿಗೂ ಸ್ಪಷ್ಟತೆ ಇಲ್ಲ. ಈ ಮದುವೆಯಿಂದಾಗಿ ಹಿತಾ ಸಹ ಕೋಪ ಮಾಡಿಕೊಂಡಿದ್ದಾಳೆ. ಮಗಳ ಒಲೈಕೆಗಾಗಿ ದುರ್ಗಾಗೆ ಡಿವೋರ್ಸ್ ಕೊಡಲು ಶರತ್ ಮುಂದಾಗಿದ್ದಾನೆ.
ಮಾಯಾ ಕಣ್ಣೀರು?
ನಾ ನಿನ್ನ ಬಿಡಲಾರೆ ಸೀರಿಯಲ್‌ನಲ್ಲಿ ಮಾಯಾ ಮತ್ತು ಮಾಳವಿಕಾ ಪ್ರಮುಖ ವಿಲನ್ ಪಾತ್ರಗಳು. ಮದುವೆ ಬಳಿಕ ಮಾಳವಿಕಾ ಎಲ್ಲಿ ಎಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಇತ್ತ ಮಾಯಾಳನ್ನು ಸಹ ಮನೆಯಿಂದ ಹೊರಗೆ ಹೋಗಿ ಹೊಸ ಬದುಕು ಕಟ್ಟಿಕೊಳ್ಳುವಂತೆ ಶರತ್ ಹೇಳಿದ್ದಾನೆ. ಶರತ್ ಮಾತಿನಿಂದ ಗೊಂದಲಕ್ಕೆ ಸಿಲುಕಿರೋ ಮಾಯಾ, ಮನೆ ಬಿಟ್ಟು ಹೋಗಲ್ಲ ಎಂದು ಕಣ್ಣೀರು ಹಾಕಿದ್ದಾಳೆ.
ಇದನ್ನೂ ಓದಿ: ರಿಯಲ್ ಅಮ್ಮನ ಜೊತೆ ನಾ ನಿನ್ನ ಬಿಡಲಾರೆ ಹಿತಾ ಭರ್ಜರಿ ಡಾನ್ಸ್: ವಿವಿಧ ರೂಪದಲ್ಲಿ ಕಾಣಿಸಿಕೊಂಡ ಪುಟಾಣಿ
ನಿರ್ದೇಶಕರಿಗೆ ವೀಕ್ಷಕರ ಮನವಿ
ಇಬ್ಬರು ವಿಲನ್ ಮನೆಯಿಂದ ಹೊರಗೆ ಹೋದ್ರೆ ಧಾರಾವಾಹಿ ಮುಂದಿನ ಕಥೆ ಏನು ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ. ಆದಷ್ಟು ಬೇಗ ಮಾಳವಿಕಾ ಪಾತ್ರವನ್ನು ತೆರೆಮೇಲೆ ತರುವಂತೆ ನಿರ್ದೇಶಕರಿಗೆ ವೀಕ್ಷಕರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ದೆವ್ವ ಆದ್ಮೇಲೆ ಊಟ-ತಿಂಡಿ ಇಲ್ಲದೇ ಸಣ್ಣ ಆದೆ: ನೀತಾ ಅಶೋಕ್