Bigg Boss Kannada Season 12 ಆಫರ್‌ ಬಂದಿದೆ: ಯುಟ್ಯೂಬರ್‌ ಸಮೀರ್‌ ಬಿಗ್‌ ಬಾಸ್‌ಗೆ ಹೋಗ್ತಾರಾ?

Published : Sep 14, 2025, 09:57 PM IST

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಶುರುವಾಗೋ ಟೈಮ್‌ ಹತ್ತಿರದಲ್ಲಿದೆ. ಯಾರು ಯಾರು ದೊಡ್ಮನೆ ಪ್ರವೇಶ ಮಾಡ್ತಾರೆ ಎಂಬ ಕುತೂಹಲ ಶುರುವಾಗಿದೆ. ಹೀಗಿರುವಾಗ ಯುಟ್ಯೂಬರ್‌ ಸಮೀರ್‌ ಹೆಸರು ಕೂಡ ಸೌಂಡ್‌ ಮಾಡ್ತಿದೆ. 

PREV
15

ಕನ್ನಡದ ಯುಟ್ಯೂಬರ್‌ ಸಮೀರ್‌ ಸ್ಯಾಮ್‌ ಅವರು ಬಿಗ್‌ ಬಾಸ್‌ ಮನೆಗೆ ಹೋಗ್ತಾರೆ ಎನ್ನಲಾಗ್ತಿದೆ. ಕೆಲ ಸೀಸನ್‌ಗಳಿಂದಲೂ ಸಮೀರ್‌ ಅವರು ಬಿಗ್‌ ಬಾಸ್‌ ಮನೆಗೆ ಹೋಗ್ತಾರೆ ಎನ್ನಲಾಗ್ತಿದೆ. ಈ ಪ್ರಶ್ನೆಗೆ ಅವರು Asianet Suvarna News ಜೊತೆಗೆ ನೀಡಿದ ಸಂದರ್ಶನದಲ್ಲಿ ಉತ್ತರ ನೀಡಿದ್ದಾರೆ.

25

“ನನಗೆ ಬಿಗ್‌ ಬಾಸ್‌ ಆಫರ್‌ ಬಂದಿದೆ. ಆದರೆ ಆ ಫೋನ್‌ ಸತ್ಯವೋ ಸುಳ್ಳೋ ಎಂದು ಗೊತ್ತಿಲ್ಲ” ಎಂದು ಸ್ಯಾಮ್‌ ಸಮೀರ್‌ ಹೇಳಿದ್ದಾರೆ. “ಬನ್ನಿ, ಒಂದು ಮೀಟಿಂಗ್‌ ಮಾಡೋಣ ಎಂದು ಕೂಡ ಹೇಳಿದರು. ಆದರೆ ನಾನು ಆಸಕ್ತಿ ತೋರಿಸಲಿಲ್ಲ” ಎಂದಿದ್ದಾರೆ.

35

“ಬಿಗ್‌ ಬಾಸ್‌ ಶೋ ನನಗಲ್ಲ, ಅವಕಾಶ ಬೇಕಿದ್ದವರಿಗೆ ಈ ಶೋ ಸಿಗಲಿ. ಬಿಗ್‌ ಬಾಸ್‌ ಶೋಗೆ ಹೋದರೆ ಬೇರೆಯವರ ಅವಕಾಶವನ್ನು ಕಿತ್ಕೋತೀನಿ ಎಂದು ಅನಿಸುತ್ತದೆ” ಎಂದು ಸಮೀರ್‌ ಹೇಳಿದ್ದಾರೆ.

45

ಬಿಗ್‌ ಬಾಸ್‌ ಶೋಗೆ ಹೋಗೋದಿಲ್ಲ ಎಂದು ಹೇಳಿದವರು ಕೂಡ, ಬಿಗ್‌ ಬಾಸ್‌ ಮನೆಗೆ ಹೋದ ಉದಾಹರಣೆ ಇದೆ. ಹೀಗಾಗಿ ಶೋ ಶುರುವಾಗೋ ಮುನ್ನ ಏನೂ ಹೇಳೋಕೆ ಆಗದು.

55

ಸೆಪ್ಟೆಂಬರ್‌ 28ರಂದು ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಶುರುವಾಗಲಿದೆ. ಕಿಚ್ಚ ಸುದೀಪ್‌ ಅವರು ಈ ಶೋ ನಿರೂಪಣೆ ಮಾಡಲಿದ್ದಾರೆ.

Read more Photos on
click me!

Recommended Stories