ಹಿತಶತ್ರುಗೆ ಗುನ್ನಾ ಕೊಟ್ಟ ಶ್ರಾವಣಿ: ಮದುವೆಯಾಗಿ ಮನೆಗೆ ಬಂದಾಗ ಇಂದ್ರಮ್ಮ ಬಾಗಿಲು ತೆರೆಯಲು ನಿರಾಕರಿಸುತ್ತಾಳೆ. ಕೋಪಗೊಂಡ ಶ್ರಾವಣಿ ಕಲ್ಲು ಹಿಡಿದು ಇಂದ್ರಮ್ಮಳನ್ನು ಎದುರಿಸುತ್ತಾಳೆ.
ವಿಜಯಾಂಬಿಕಾಳ ಅಡೆತಡೆಗಳನ್ನು ಮೀರಿ ಶ್ರಾವಣಿ ಮತ್ತು ಸುಬ್ರಮಣ್ಯ ಮದುವೆಯಾಗಿದೆ. ನಾಗವಲ್ಲಿ ಪ್ರೀತಿ ತ್ಯಾಗ ಮಾಡಿ ಸುಬ್ಬನನ್ನು ರಕ್ಷಿಸಿದ್ದರಿಂದ ವಿಜಯಾಂಬಿಕಾ ಪ್ಲಾನ್ ಫೇಲ್ ಆಗಿತ್ತು. ಇದೀಗ ಮದುವೆಯಾಗಿ ಬರುತ್ತಿದ್ದಂತೆ ಶ್ರಾವಣಿ, ಹಿತಶತ್ರುಗೆ ಗುನ್ನಾ ಕೊಟ್ಟಿದ್ದಾಳೆ.
25
ಮನೆಗೆ ಮತ್ತೊಂದು ಬೀಗ
ಶ್ರಾವಣಿ-ಸುಬ್ರಮಣ್ಯ ಮದುವೆ ಬಳಿಕ ಮನೆಗೆ ಹಿಂದಿರುಗಿದ್ದಾರೆ. ಆದ್ರೆ ಮನೆಗೆ ಮತ್ತೊಂದು ಬೀಗ ಹಾಕಿ ಇಂದ್ರಮ್ಮ ಎಲ್ಲರನ್ನೂ ರಸ್ತೆಯಲ್ಲಿಯೇ ನಿಲ್ಲಿಸಿದ್ದಾಳೆ. ಸುಬ್ಬು ಪೋಷಕರು ಎಷ್ಟೇ ಮನವಿ ಮಾಡಿಕೊಂಡರೂ ಇಂದ್ರಮ್ಮ ಬಾಗಿಲು ತೆರೆಯಲು ಒಪ್ಪಿರಲಿಲ್ಲ.
35
ಇಂದ್ರಮ್ಮ ಬೈಯ್ಯುತ್ತಾಳೆ
ನನ್ನ ಮಗಳಿಗೆ ಮೋಸ ಮಾಡಿ ಸುಬ್ಬು ಈ ಮದುವೆಯಾಗಿದ್ದಾನೆ. ಇನ್ನು ಶ್ರಾವಣಿ ಮಾತು ಕೇಳಿ ನನ್ನ ಮಗ ನಿಮ್ಮ ಮಗಳಿಗೆ ತಾಳಿ ಕಟ್ಟಿದನು. ಈ ಕುಟುಂಬದಿಂದ ನಮಗೆ ಮೋಸವೇ ಆಗಿದೆ. ನಿಮಗೆಲ್ಲಾ ಹೀಗೆ ಅಗಬೇಕು. ರಸ್ತೆಯಲ್ಲಿಯೇ ನಿಂತ್ಕೊಳ್ಳಿ ಎಂದು ಇಂದ್ರಮ್ಮ ಬಾಗಿಲು ತೆಗೆಯಲು ಒಪ್ಪಲ್ಲ. ಮಗ ಬಂದ ಹೇಳಿದರೂ ಆತನಿಗೂ ಇಂದ್ರಮ್ಮ ಬೈಯ್ಯುತ್ತಾಳೆ.
ಇದನ್ನೆಲ್ಲಾ ನೋಡಿದ ಶ್ರಾವಣಿಯ ತಾಳ್ಮೆ ಕಟ್ಟೆ ಒಡೆದಿದೆ. ದೊಡ್ಡದಾದ ಕಲ್ಲು ತೆಗೆದುಕೊಂಡು ಇಂದ್ರಮ್ಮಳ ಮುಂದೆ ನಿಂತಿದ್ದಾಳೆ. ಕೀ ಕೊಡದಿದ್ದರೆ ಏನಾಯ್ತು ಎಂದು ಹೇಳಿ ಇಂದ್ರಮ್ಮಗೆ ಮಾತಿನಲ್ಲೇ ಗುನ್ನ ಕೊಟ್ಟಿದ್ದಾಳೆ. ಕೀ ಒಡೆದು ಮನೆಯೊಳಗೆ ಹೋಗ್ತಾರಾ ಅನ್ನೋದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಇತ್ತ ತನ್ನ ಎಲ್ಲಾ ಪ್ಲಾನ್ ಫೇಲ್ ಆಗದಕ್ಕೆ ಗಾಯಗೊಂಡ ಹಾವಿನಂತೆ ವಿಜಯಾಂಬಿಕೆ ಮತ್ತು ಮದನ್ ಆಗಿದ್ದಾರೆ. ಮತ್ತೊಂದೆಡೆ ಶ್ರಾವಣಿ ಜೊತೆ ಮದನ್ ಮದುವೆಯಾಗಿಲ್ಲ ಎಂದು ಸಾವಿತ್ರಿ ನಿಟ್ಟುಸಿರು ಬಿಟ್ಟಿದ್ದಾಳೆ. ವಿಜಯಾಂಬಿಕೆ ಮತ್ತು ಮದನ್ ಮುಂದೇನು ಮಾಡ್ತಾರಾ? ನಂದಿನಿ ಎಲ್ಲರ ಮುಂದೆ ಬರೋದು ಯಾವಾಗ ಎಂಬಿತ್ಯಾದಿ ಪ್ರಶ್ನೆಗಳಿಗೆ ಮುಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.