Shravani Subramanya serial plot: ಮದುವೆಯಾಗುವಂತೆ ಒತ್ತಡ ಹಾಕುತ್ತಿದ್ದ ಸಾವಿತ್ರಿಯನ್ನು ಕೊಲ್ಲಲು ಮದನ್ ಸಂಚು ರೂಪಿಸುತ್ತಾನೆ. ಆದರೆ, ಎಲೆಕ್ಟ್ರಿಕ್ ಶಾಕ್ ನೀಡಲು ಹೋಗಿ ಆಕಸ್ಮಿಕವಾಗಿ ತನ್ನ ತಾಯಿ ವಿಜಯಾಂಬಿಕೆಗೇ ಶಾಕ್ ತಗುಲುವಂತೆ ಮಾಡುತ್ತಾನೆ.
ಶ್ರಾವಣಿ ಮತ್ತು ಸುಬ್ರಮಣ್ಯ ಡಿವೋರ್ಸ್‌ಗೆ ಮುಂದಾಗಿರುವ ವಿಷಯ ಪದ್ದುಗೆ ಗೊತ್ತಾಗಿದೆ. ಇತ್ತ ಮನೆಗೆಲಸಕ್ಕೆ ಬಂದಿರುವ ಸಾವಿತ್ರಿಯನ್ನು ಬಳಸಿಕೊಂಡಿದ್ದ ಮದನ್, ಇದೀಗ ಆಕೆಯ ಪ್ರಾಣ ತೆಗೆಯಲು ಮುಂದಾಗಿದ್ದಾನೆ. ಶ್ರಾವಣಿ ಸಿಗದಿದ್ದಕ್ಕೆ ಮದನ್ ಕಣ್ಣು ಸಾವಿತ್ರಿ ಮೇಲೆ ಬಿದ್ದಿತ್ತು.
24
ಸಾವಿತ್ರಿ
ಸಾಲಿಗ್ರಾಮದಿಂದ ಬಂದಿರುವ ಸಾವಿತ್ರಿ, ತಾನಾಯ್ತು ತನ್ನ ಕೆಲಸ ಆಯ್ತು ಅಂತಿದ್ದಳು. ಕಾಮುಕ ಮದನ್ ತನ್ನ ಬಣ್ಣದ ಮಾತುಗಳಿಂದ ಸಾವಿತ್ರಿಯನ್ನು ಒಲಿಸಿಕೊಂಡು ಆಕೆಯನ್ನು ಬಳಸಿಕೊಂಡಿದ್ದನು. ತನ್ನದು ಶುದ್ಧವಾದ ಪ್ರೀತಿ ಅಂತಾನೇ ಸಾವಿತ್ರಿಯನ್ನು ಮದನ್ ನಂಬಿಸಿದ್ದಾನೆ. ಇದೇ ಮಾತುಗಳನ್ನು ಸಾವಿತ್ರಿ ಸಹ ನಂಬಿದ್ದಾಳೆ.
ಸಾಲಿಗ್ರಾಮಕ್ಕೆ ಹೋದರೆ ಮದುವೆ ಮಾಡಿಸಬಹುದು ಎಂದು ಸಾವಿತ್ರಿ ಊರಿಗೆ ತೆರಳದೇ ವೀರೆಂದ್ರನ ಮನೆಯಲ್ಲಿ ಉಳಿದುಕೊಂಡಿದ್ದಾಳೆ. ಸಾವಿತ್ರಿ ಮನೆಯಲ್ಲಿರೋದು ಮದನ್‌ಗೆ ಬಿಸಿ ತುಪ್ಪವಾಗಿದೆ. ತಮ್ಮಿಬ್ಬರ ಪ್ರೀತಿ ವಿಷಯ ಎಲ್ಲರಿಗೂ ತಿಳಿಸಿ ಮದುವೆಯಾಗುವಂತೆ ಮದನ್ ಮೇಲೆ ಸಾವಿತ್ರಿ ಒತ್ತಡ ಹಾಕುತ್ತಿದ್ದಾಳೆ.
ಸಾವಿತ್ರಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಮದನ್ ಆಕೆಯ ಪ್ರಾಣ ತೆಗೆಯಲು ಮುಂದಾಗಿದ್ದಾನೆ. ಎಲೆಕ್ಟ್ರಿಕ್ ಶಾಕ್ ನೀಡಿ ಸಾವಿತ್ರಿಯನ್ನು ಕೊಲ್ಲಲು ಮದನ್ ಸಂಚು ರೂಪಿಸಿದ್ದನು. ಆದ್ರೆ ಈ ಶಾಕ್ ವಿಜಯಾಂಬಿಕೆಗೆ ತಗುಲಿದೆ. ತನಗೆ ಗೊತ್ತಿಲ್ಲದೇ ತಾಯಿಯ ಪ್ರಾಣಕ್ಕೆ ಕುತ್ತು ತಂದಿದ್ದಾನೆ. ಈಗಾಲಾದ್ರೂ ಸಾವಿತ್ರಿಗೆ ಸತ್ಯ ಗೊತ್ತಾಗುತ್ತಾ ಅಂತ ನೋಡಬೇಕಿದೆ.