- Home
- Entertainment
- Shravani Subramanya ಫಸ್ಟ್ ನೈಟ್‌ನಲ್ಲಿ ರೊಮಾನ್ಸ್ ಮಾಡುವ ವಿಧಾನವನ್ನು ಸೆಟ್‌ನಲ್ಲಿ ಹೀಗೆ ಕಲಿಸ್ತಾರೆ ನೋಡಿ!
Shravani Subramanya ಫಸ್ಟ್ ನೈಟ್‌ನಲ್ಲಿ ರೊಮಾನ್ಸ್ ಮಾಡುವ ವಿಧಾನವನ್ನು ಸೆಟ್‌ನಲ್ಲಿ ಹೀಗೆ ಕಲಿಸ್ತಾರೆ ನೋಡಿ!
ಜೀ ಕನ್ನಡದ 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯಲ್ಲಿ ರೀಲ್ ಮದುವೆಯಿಂದ ರಿಯಲ್ ಮದುವೆಯಾದ ಜೋಡಿ ಇದೀಗ ಮೊದಲ ರಾತ್ರಿಯನ್ನೂ ಆಚರಿಸಿಕೊಂಡಿದೆ. ಅಷ್ಟಕ್ಕೂ ಸೀರಿಯಲ್‌ನಲ್ಲಿ ರೊಮಾನ್ಸ್ ಮಾಡುವುದನ್ನು ನಿರ್ದೇಶಕರು ಹೇಳಿ ಕೊಡುವುದು ಹೇಗೆ? ಇಲ್ಲಿದೆ ನೋಡಿ ವೈರಲ್ ವಿಡಿಯೋ…

ರೀಲ್ ಮದ್ವೆಯಿಂದ ರಿಯಲ್ ಮದುವೆ
ಸುಳ್ಳು ಮದುವೆಯಾಗಿ, ಕೊನೆಗೆ ರಿಯಲ್ ಮದ್ವೆಯಾಗಿ ಇದೀಗ ಮೊದಲ ರಾತ್ರಿಯನ್ನೂ ಆಚರಿಕೊಂಡಿರೋ ಜೋಡಿ ಎಂದರೆ ಅದು ಜೀ ಕನ್ನಡದ ಶ್ರಾವಣಿ ಸುಬ್ರಹ್ಮಣ್ಯ (Shravani Subramanya). ಸುಬ್ಬು ಸುಬ್ಬು ಎಂದು ಶ್ರಾವಣಿ ಹೇಳಿದ್ರೆ, ಮೇಡಂ ಮೇಡಂ ಎನ್ನುತ್ತಿದ್ದ ಸುಬ್ಬು. ಅವಳಿಗೆ ಲವ್ ಆದ್ರೂ, ಇವನಿಗೆ ಮೇಡಂ ಎನ್ನೋ ಗೌರವ ಅಷ್ಟೇ. ಅವನ ಮನಸ್ಸಿನಲ್ಲಿ ಪ್ರೀತಿ ಹುಟ್ಟಿಸಲು ಶ್ರಾವಣಿ ಮಾಡಿದ ಶ್ರಮ ಅಷ್ಟಿಷ್ಟಲ್ಲ. ಕೊನೆಗೂ ಆ ಶ್ರಮಕ್ಕೆ ಫಲ ಸಿಕ್ಕಿದೆ.
ಎದುರಾಗಿದ್ದವು ವಿಘ್ನ
ಇದರ ಹೊರತಾಗಿಯೂ ಸಾಕಷ್ಟು ವಿಘ್ನಗಳು ಎದುರಾಗಿದ್ದವು. ಈ ವಿಘ್ನಗಳು ನಿವಾರಣೆಯಾಗಿ ಇದೀಗ ಕೊನೆಗೆ ಎರಡೂ ಮನೆಯವರ ಸಮ್ಮುಖದಲ್ಲಿ ಶ್ರಾವಣಿ-ಸುಬ್ಬು ಮದುವೆ ಸುಸೂತ್ರವಾಗಿ ನೆರವೇರಿದೆ. ಸುಬ್ಬುನ ಮನಸ್ಸಿನಲ್ಲಿಯೂ ಶ್ರಾವಣಿ ಮೇಲೆ ಬೆಟ್ಟದಷ್ಟು ಪ್ರೀತಿ ಇದ್ದರೂ ಅದನ್ನು ತೋರಿಸಲು ಅವನಿಗೆ ಇಷ್ಟವಿಲ್ಲ.
ಲವ್ ಬಗ್ಗೆ ಡೌಟ್
ತಾನು ಆಕೆಯನ್ನು ಪ್ರೀತಿಸುತ್ತಿದ್ದೇನೋ ಇಲ್ಲವೋ ಎಂದು ಆಂಜನೇಯ ಸ್ವಾಮಿಯ ಪ್ರಸಾದ ಮಾಡಿ ನೋಡಿದವ ಸುಬ್ಬು! ಈಗ ಲವ್ ಶುರುವಾಗಿದ್ದರೂ, ಶ್ರಾವಣಿಗೆ ಅವನ ಲವ್ ಮೇಲೆ ಡೌಟು. ಇದರ ನಡುವೆಯೇ ಮದುವೆಯಾಗಿದೆ.
ಮೊದಲ ರಾತ್ರಿಯ ಸಂಭ್ರಮ
ಶ್ರಾವಣಿ- ಸುಬ್ಬು ಮದುವೆಯಾಗಿ, ಸುಬ್ಬು ಮನೆಗೆ ಬಂದಾಗಿದ್ದು, ಮೊದಲ ರಾತ್ರಿಯ ಸಂಭ್ರಮವೂ ನಡೆದಿದೆ. ರೂಮಿಗೆ ಹೋದ ಜೋಡಿಗಳಳಿಗೆ ಎನೋ ತವಕ, ಸುಬ್ಬುಗೆ ತನ್ನ ಮನಸ್ಸಿಲಿರುವ ಪ್ರೀತಿಯನ್ನು ಹೇಳಿಕೊಂಡು ನಿರಾಳವಾಗುಅ ತವಕ, ಆದರೆ ಹೇಳುವ ಧೈರ್ಯ ಇಲ್ಲ. ಹೇಗಪ್ಪಾ ಹೇಳೋದು ಎನ್ನುವ ಭಯ. ಇನ್ನೊಂದೆಡೆ ಶ್ರಾವಣಿಗೆ, ಸುಬ್ಬು ತನ್ನನ್ನು ಪ್ರೀತಿಸುತ್ತಾನೋ ಇಲ್ಲವೋ ಅನ್ನೋದನ್ನು ತಿಳಿದುಕೊಳ್ಳುವ ತವಕ, ಆಕೆಗೂ ಕೇಳೋದಕ್ಕೆ ಧೈರ್ಯ ಇಲ್ಲ.
ಫಸ್ಟ್‌ನೈಟ್ ಸೀನ್
ಇದು ಸೀರಿಯಲ್ ಮಾತಾದರೆ ಈ ಸೀರಿಯಲ್‌ನಲ್ಲಿ ಜೋಡಿ ಫಸ್ಟ್‌ನೈಟ್ ಸೀನ್‌ಗೆ ರೆಡಿ ಆಗುವುದು ಅಷ್ಟು ಸುಲಭದ ಮಾತಲ್ಲ. ಅವರನ್ನು ಶೂಟಿಂಗ್ ಸೆಟ್‌ನಲ್ಲಿ ಹೇಗೆ ರೆಡಿ ಮಾಡುತ್ತಾರೆ ಎನ್ನುವ ವಿಡಿಯೋ ಈಗ ವೈರಲ್ ಆಗಿದೆ.
ಮೇಡಂ, ಮೇಡಂ ಎಂದು ಕರೆಯುವ ಗಂಡ ಸುಬ್ಬು
ಶ್ರಾವಣಿಯನ್ನು ಮದುವೆಯಾದ ಮೇಲೂ ಮೇಡಂ, ಮೇಡಂ ಎಂದು ಕರೆಯುವ ಗಂಡ ಸುಬ್ಬು ಮೇಲೆ ಮೇಂಡಗೆ ಹುಸಿ ಮುನಿಸು, ಅದಕ್ಕಾಗಿಯೇ, ಸುಬ್ಬುನನ್ನು ಬರಸೆಳೆದು, ತನ್ನ ಹೆಸರು ಕರೆಯುವಂತೆ ಸೂಚಿಸಿದ್ದಾಳೆ ಶ್ರಾವಣಿ. ಇಲ್ಲಾಂದ್ರೆ ಬಿಡೋದೆ ಇಲ್ಲ ಎಂದಿದ್ದಾರೆ, ಆಕೆಯಿಂದ ದೂರ ಸರೆಯುವ ಮಾತೆ ಇಲ್ಲ ಎನ್ನುವ ಸುಬ್ಬು ಕೊನೆಗೂ ಮೇಡಂ ಅನ್ನೋದನ್ನು ಬಿಟ್ಟು ಶ್ರಾವಣಿ ಎಂದು ಕರೆದದ್ದು ಆಗಿದೆ. ಇದನ್ನೆಲ್ಲಾ ಹೇಳಿ ಕೊಟ್ಟಿದ್ದಾರೆ ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.