Annayya Serial: ಮೂರನೇ ಕಣ್ಣು ಬಿಟ್ಟ ಶಿವ... ರೌದ್ರಾವತಾರ ನೋಡಿ ಕೋಟಿಗೊಬ್ಬ ವಿಷ್ಣುದಾದ ನೆನಪಾದ್ರು

Published : Sep 30, 2025, 12:26 PM IST

Annayya Serial: ಅಣ್ಣಯ್ಯ ಧಾರಾವಾಹಿಯ ಬಹುದೊಡ್ಡ ಟ್ವಿಸ್ಟ್ ಎದುರಾಗಿದೆ. ಇಲ್ಲಿವರೆಗೂ ಮುಗ್ಧನಂತೆ ತಾನಾಯ್ತು, ತನ್ನ ಕೆಲಸ ಆಯ್ತು ಎನ್ನುತ್ತಿದ್ದ ಶಿವಣ್ಣನ ಇನ್ನೊಂದು ಮುಖದ ಅನಾವರಣ ಆಗಿದೆ. ಇದನ್ನು ನೋಡಿ ಜನ ಕೋಟಿಗೊಬ್ಬ ಸಿನಿಮಾ ವಿಷ್ಣು ದಾದ ನೆನಪಿಸಿದ್ರು.

PREV
17
ಅಣ್ಣಯ್ಯ ಧಾರಾವಾಹಿ

ಅಣ್ಣಯ್ಯ ಧಾರಾವಾಹಿ  (Annayya serial) ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ. ಈ ಧಾರಾವಾಹಿಯಲ್ಲಿ ಶಿವಣ್ಣನ ಪಾತ್ರದ ಬಗ್ಗೆ ಜನರಿಗೆ ತುಂಬಾನೆ ಕುತೂಹಲ ಇತ್ತು. ಶಿವಣ್ಣ ಇಷ್ಟೊಂದು ಮುಗ್ಧನಾಗಿರೋದು ಯಾಕೆ? ಯಾವಾಗ್ಲೂ ತಾನಾಯ್ತು ತನ್ನ ಅಂಗಡಿ ಎಂದಿರುತ್ತಿದ್ದ ಶಿವು, ಮಾವನ ಕಪಟ ಮುಖವನ್ನು ಸಹ ಗುರುತಿಸುತ್ತಿಲ್ಲ. ಯಾಕೆ ಹೀಗೆ ಎನ್ನುವ ಸಂಶಯ ಎಲ್ಲರಿಗೂ ಇತ್ತು.

27
ಶಿವು ಬಾಳಲ್ಲಿ ಮಹಾತಿರುವು

ಈ ಹಿಂದೆ ಶಿವು ಹಿಂದೆ ಹೀಗೆ ಇದ್ದಿಲ್ಲ, ಜೈಲು ಸೇರಿದ್ದ ಅನ್ನೋದನ್ನು ತೋರಿಸಿದ್ದರು. ಇದೀಗ ಶಿವನ ಮೂರನೇ ಕಣ್ಣು ತೆರೆದಿದ್ದು, ರುದ್ರಾವತರಾದ ದರ್ಶನವಾಗಿದೆ. ನಿಜಕ್ಕೂ ಶಿವು ಹೀಗಿದ್ದನಾ ಎನ್ನುವಷ್ಟು ಕುತೂಹಲ ಮೂಡಿಸಿದೆ ಹೊಸದಾಗಿ ರಿಲೀಸ್ ಆಗಿರುವ ಪ್ರೊಮೋ.

37
ಏನಾಗ್ತಿದೆ ಕಥೆಯಲ್ಲಿ?

ರತ್ನ ಗೆಳತಿಯೊಬ್ಬಳಿಗೆ ಮೆರಿಟ್ ಅಲ್ಲಿ ಸೀಟ್ ಸಿಕ್ಕಿದ್ದು, ಅದನ್ನು ಕೇಳೋದಕ್ಕೆ ಸರ್ಕಾರಿ ಕಚೇರಿಗೆ ಹೋದ್ರೆ, ಅಲ್ಲಿ ಅಧಿಕಾರಿ, ಕೆಟ್ಟದಾಗಿ ಮಾತನಾಡಿ, ನಾನು ಹೇಳಿದ್ದನ್ನು ಮಾಡಿದ್ರೆ ಮಾತ್ರ ಕೆಲಸ ಕೋಡೋದು ಅಂದಿದ್ದಾನೆ. ಇದರಿಂದ ರತ್ನ ಗೆಳತಿ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ.

47
ರೌದ್ರಾವತಾರ ತಾಳಿದ ಶಿವು

ಸಮಸ್ಯೆಯನ್ನು ಬಗೆಹರಿಸಲು ಕಚೇರಿಗೆ ಹೋಗುವ ಶಿವಣ್ಣನಿಗೆ ಅಲ್ಲಿನ ಅಧಿಕಾರಿ ಏನು ರೌಡಿಸಂ ಮಾಡ್ತಿಯಾ, ನಾನು ರೌಡಿಗಳನ್ನು ಕರೆಯಿಸುತ್ತೇನೆ, ಎನ್ನುತ್ತಾ ಹಲವು ರೌಡಿಗಳನ್ನು ಕರೆಸುತ್ತಾರೆ. ಅಲ್ಲಿ ಬಂದ ರೌಡಿಗಳು ಶಿವಣ್ಣನನ್ನು ನೋಡಿ ಮಂಡಿಯೂರಿ ಕೂರುತ್ತಾರೆ. ಇದನ್ನ ನೋಡಿ ಅಧಿಕಾರಿಯೆ ನಡುಗುತ್ತಾನೆ.

57
ಮತ್ತೆ ಹಳೆ ಕಥೆ ರಿವೀಲ್

ಇನ್ನು ಸದ್ಯದಲ್ಲೇ ಶಿವು ಹಳೆಯ ಕಥೆ ರಿವೀಲ್ ಆಗಲಿದೆ. ಶಿವು ಈ ಮೊದಲು ಮುಂಬೈನಲ್ಲಿದ್ದು, ಅಲ್ಲಿ ಏನು ಮಾಡುತ್ತಿದ್ದ? ಹಿಂದೆ ರೌಡಿಯಾಗಿದ್ದವ ಈಗ ಬದಲಾಗಿ ಇಷ್ಟೊಂದು ಮುಗ್ಧ ಆಗಿರೋದಾದರೂ ಯಾಕೆ? ಎಲ್ಲಾ ಕಥೆ ಸದ್ಯದಲ್ಲೇ ರಿವೀಲ್ ಆಗಲಿದೆ. ಅದಕ್ಕಾಗಿಯೇ ಜನ ಕಾಯುತ್ತಿದ್ದಾರೆ. ಅಂದಹಾಗೆ ಈ ಸೀನ್ ನೋಡಿ ಜನ ವಿಷ್ಣುದಾದನ ನೆನಪಿಸಿದ್ದಾರೆ.

67
ಕೋಟಿಗೊಬ್ಬ ಸಿನಿಮಾ ವಿಷ್ಟುವರ್ಧನ್ ನೆನಪಿಸಿದ ಜನತೆ

ಜನರು ಈ ಪ್ರೊಮೋ ನೋಡಿ, ವಿಷ್ಣುವರ್ಧನ್ (Vishnuvardhan)  ಅವರ ಕೋಟಿಗೊಬ್ಬ ಸಿನಿಮಾ ನೆನಪು ಮಾಡಿಕೊಂಡಿದ್ದಾರೆ. ಕೋಟಿಗೊಬ್ಬ ಸಿನಿಮಾದಲ್ಲಿ ಎಲ್ಲರೆದುದು ಕೇವಲ ಆಟೊ ಡ್ರೈವರ್ ಆಗಿ ಕಾಣಿಸಿಕೊಳ್ಳುತ್ತಿದ್ದ ವಿಷ್ಣುವರ್ಧನ್ ಹಿಂದೊಮ್ಮೆ ರೌಡಿ ಶೀಟರ್ ಗಳೇ ನಡುಗುವಂತಹ ಡಾನ್ ಆಗಿದ್ದರು. ಇಲ್ಲೂ ಸಹ ಶಿವು ಹಿಂದೆ ರೌಡಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ರೌಡಿಯಾಗಿದ್ದ.

77
ಜನ ಏನು ಹೇಳ್ತಿದ್ದಾರೆ?

ಈ ಪ್ರೊಮೊ ನೋಡಿ ಖುಷಿ ಪಟ್ಟ ವೀಕ್ಷಕರು, ಕೊನೆಗೂ ನಮ್ಮ ಶಿವು ಅಣ್ಣನ ನಿಜಾ ರೂಪ ಅನಾವರಣ ಆಯ್ತು. ಶಿವಣ್ಣ ನಿನ್ನ ಆಕ್ಟಿಂಗ್ ನೋಡಿ ಮತ್ತೆ ವಿಷ್ಣು ಸರ್ ಕೋಟಿಗೊಬ್ಬ ಮೂವಿ ಮತ್ತೆ ನೆನಪಾಯ್ತು ಸೂಪರ್ ಬಿಡಣ್ಣ ನಿನ್ನ ಆಕ್ಟಿಂಗ್ ಎಂದಿದ್ದಾರೆ. ಶಿವಣ್ಣನ ನಟನೆಯನ್ನು ಜನರು ಮೆಚ್ಚಿಕೊಂಡಿದ್ದಾರೆ.

Read more Photos on
click me!

Recommended Stories