Annayya Kannada Serial: ಸೀನನ ಲವರ್ ಪಿಂಕಿಗೆ ಸಖತ್ತಾಗೇ ವಾರ್ನ್ ಮಾಡಿದ್ದಾಳೆ ಗುಂಡಮ್ಮ. ಸದ್ಯ ಅಣ್ಣಯ್ಯನ ತಾಯಿ ಶಾರದಮ್ಮ ಮಾದಪ್ಪನ ಮನೆ ಸೇರಾಗಿದೆ. ಇಲ್ಲಿ ಮಗಳು ರಶ್ಮಿಗೆ ಅಂದರೆ ಗುಂಡುಗೆ ಶಾರದಮ್ಮ ಧೈರ್ಯಗೆಡದಂತೆ ಪರೋಕ್ಷವಾಗಿ ಬುದ್ಧಿಮಾತನ್ನ ಹೇಳುತ್ತಿದ್ದಾಳೆ.
'ಅಣ್ಣಯ್ಯ' ಧಾರಾವಾಹಿಯಲ್ಲಿ ಅಣ್ಣಯ್ಯನ ಇಬ್ಬರು ತಂಗಿಯರಿಗೂ ಮದುವೆಯಾಗಿದ್ದು, ಅವರು ಕಷ್ಟಪಟ್ಟರೆ ವೀಕ್ಷಕರಿಗೂ ಅದನ್ನ ಸಹಿಸೋಕೆ ಆಗಲ್ಲ. ಅದೇ ತಿರುಗಿ ಬಿದ್ದರೆ ಚಪ್ಪಾಳೆ ಸಿಗೋದು ಗ್ಯಾರಂಟಿ. ಸದ್ಯ ಅಣ್ಣಯ್ಯನ ತಂಗಿ ರಾಣಿಯ ಕಷ್ಟ ನೋಡಿದಾಗಲೂ ಮಿಶ್ರಪ್ರತಿಕ್ರಿಯೆ ಬಂದಿತ್ತು. ಇದನ್ನೆಲ್ಲಾ ಈಗೀನ ಕಾಲದಲ್ಲಿ ಯಾರೂ ಸಹಿಸಿಕೊಳ್ತಾರೆ ಹೇಳಿ ಎಂದು ಬೇಸರ ವ್ಯಕ್ತಪಡಿಸಿದ್ದರು.
26
ವೀಕ್ಷಕರ ಆಸೆಯನ್ನ ನಿರಾಸೆ ಮಾಡಿಲ್ಲ
ಇತ್ತ ಅಣ್ಣಯ್ಯನ ಇನ್ನೊಬ್ಬ ತಂಗಿ ಗುಂಡಮ್ಮಗೂ ಆಕೆಯ ಗಂಡ ಸೀನ ಕೈ ಕೊಟ್ಟು ಪಿಂಕಿಯ ಜೊತೆ ಸುತ್ತುವಾಗ ವೀಕ್ಷಕರಿಗೆ ಮತ್ತೆ ಬೇಸರವಾಗಿತ್ತು. ಏನಿದು ಗೋಳು, ಗುಂಡಮ್ಮ ಸುಮ್ಮನಿರುವುದೇಕೆ ಎಂದು ಮುನಿಸಿಕೊಂಡಿದ್ದರು ಅಭಿಮಾನಿಗಳು. ಆದರೆ ವೀಕ್ಷರ ಆಸೆಯನ್ನ ನಿರಾಸೆ ಮಾಡಿಲ್ಲ ನಮ್ಮ ಗುಂಡು.
36
ಪರೋಕ್ಷವಾಗಿ ಬುದ್ಧಿಮಾತು
ಹೌದು, ಸೀನನ ಲವರ್ ಪಿಂಕಿಗೆ ಸಖತ್ತಾಗೇ ವಾರ್ನ್ ಮಾಡಿದ್ದಾಳೆ ಗುಂಡಮ್ಮ. ಸದ್ಯ ಅಣ್ಣಯ್ಯನ ತಾಯಿ ಶಾರದಮ್ಮ ಮಾದಪ್ಪನ ಮನೆ ಸೇರಾಗಿದೆ. ಇಲ್ಲಿ ಮಗಳು ರಶ್ಮಿಗೆ ಅಂದರೆ ಗುಂಡುಗೆ ಶಾರದಮ್ಮ ಯಾರೆಂಬುದು ಗೊತ್ತಿರದಿದ್ದರೂ, ಶಾರದಮ್ಮ ತನ್ನ ಮಗಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾಳೆ. ಅಂದರೆ ಮಗಳು ಧೈರ್ಯಗೆಡದಂತೆ ಪರೋಕ್ಷವಾಗಿ ಬುದ್ಧಿಮಾತನ್ನ ಹೇಳುತ್ತಿದ್ದಾಳೆ.
ಗುಂಡು ಬಳಿ ಶಾರದಮ್ಮ ಮಾತನಾಡುವಾಗ ತನ್ನ ಗಂಡನ ಬಗ್ಗೆ ಅಪಾರ ಪ್ರೀತಿ ವ್ಯಕ್ತಪಡಿಸುತ್ತಾ ಎಂದಿಗೂ ಅವರನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳುತ್ತಿವಾಗಲೇ ಇತ್ತ ಗುಂಡಮ್ಮ ಬೇಸರಿಸಿಕೊಂಡು ಸೀನನ ಬಗ್ಗೆ ಯೋಚನೆ ಮಾಡುತ್ತಿರುವಾಗಲೇ, ಪಿಂಕಿ ಮತ್ತು ಸೀನನ್ನು ರೆಡ್‌ಹ್ಯಾಂಡಾಗಿ ಹಿಡಿದುಕೊಂಡು ಗುಂಡಮ್ಮನ ಅಪ್ಪ, ಮಾದಪ್ಪನ ಮನೆಗೆ ಎಳೆದುಕೊಂಡು ಬಂದಿದ್ದಾನೆ.
56
ಖುಷಿಪಟ್ಟ ಅಪ್ಪ-ಅಮ್ಮ
ರಶ್ಮಿ ಅಂದರೆ ಗುಂಡಮ್ಮನ ಅಪ್ಪ, ಮಾದಪ್ಪನ ಮನೆಯ ಹೊರಗಿನಿಂದ ಕೂಗುವಾಗ ಶಾರದಮ್ಮನಿಗೆ ಗೊತ್ತಾಗುತ್ತದೆ ಅದು ತನ್ನದೇ ಗಂಡನ ಧ್ವನಿ ಎಂದು. ಅಷ್ಟೊತ್ತಿಗೆ ಮನೆಯ ಹೊರಗೆ ಬರುವ ಗುಂಡಮ್ಮ ಪಿಂಕಿ-ಸೀನನ್ನು ಒಟ್ಟಿಗೆ ನೋಡಿ ತನಗೆ ಅವರಿಬ್ಬರ ಲವ್ ವಿಚಾರ ಗೊತ್ತಿದ್ದರೂ ಗೊತ್ತಿಲ್ಲವೆಂಬಂತೆ ನಟಿಸಿ, ಅಪ್ಪನ ಬಳಿ "ನನ್ನ ಗಂಡ ಹೀರೋ ತರಹ ಇದ್ದಾನೆ. ಮಾದಪ್ಪಣ್ಣನ ಮಗ. ನಾಡಿಗಾಗಿ ಹೋರಾಡಿರುವವರ ತಂದೆಯ ಮಗ. ಕಂಡಕಂಡವರ ಜೊತೆ ಓಡಾಡುತ್ತಾನಾ?. ಪಿಂಕಿ ಮುಖ ನೋಡು..ಕಾಯಿಲೆ ಬಂದು ಈಗಲೋ, ಆಗಲೋ ಹೋಗುವವಳ ತರಹ ಇದ್ದಾಳೆ. ನಾನು ಸೀನ ಮಾತ್ರ ಜೋಡಿಯಾಗಲು ಸಾಧ್ಯ. ನೀನು ಅವರಿಬ್ಬರ ಬಗ್ಗೆ ತಪ್ಪು ತಿಳಿದುಕೊಂಡಿದ್ದೀಯಾ" ಎಂದು ಹೇಳುತ್ತಲೇ ಪಿಂಕಿಗೆ ಟಾಂಗ್ ಕೊಡುತ್ತಾಳೆ. ಕೊನೆಗೆ ಪಿಂಕಿ-ಸೀನ ಮುನಿಸಿಕೊಂಡು ಅಲ್ಲಿಂದ ಹೊರನಡೆಯುತ್ತಾರೆ. ರಶ್ಮಿಯ ನಡೆ ಅಪ್ಪ-ಅಮ್ಮನಿಗೆ ಖುಷಿ ತರಿಸಿದೆ.
66
ಖುಷಿಪಟ್ಟ ನೆಟ್ಟಿಗರು
ಸದ್ಯ ಈ ಸಂಚಿಕೆ ನೋಡಿದ ವೀಕ್ಷಕರಿಗೆ, ವಿಶೇಷವಾಗಿ ಗುಂಡು ಅಭಿಮಾನಿಗಳಿಗೆ ಹಾಲು ಕುಡಿದಷ್ಟು ಖುಷಿಯಾಗಿದೆ. ಜೊತೆಗೆ "ಸೂಪರ್ ಕೌಂಟರ್ ಗುಂಡಮ್ಮ ಇದೇ ರೀತಿ ಇರು", " ಒಳ್ಳೆಯದಕ್ಕೇ ಮುಂದೆ ಇದೇ ಮಾರಿಗುಡಿ ಮಾಕಳವ್ವನ ಜಾತ್ರೆ" "ಹೊಡಿರಿ ಚಪ್ಪಾಳೆ ನಮ್ಮ ಗುಂಡುಗೆ" ಎಂದೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡಿರುವುದನ್ನ ನೋಡಿರಬಹುದು.