ಅಣ್ಣಯ್ಯ ಧಾರಾವಾಹಿಯಲ್ಲಿ ಒಂದೆಡೆ ಸೀನಾ ಪಿಂಕಿ ಪ್ರೀತಿಯ ಗುಟ್ಟು ರಶ್ಮಿ ಮುಂದೆ ಬಯಲಾಗಿದೆ, ಮತ್ತೊಂದೆಡೆ ಪಾರು ಮುಂದೆ ತನ್ನ ತಂದೆಯ ನಿಜ ರೂಪ ಅನಾವರಣವಾಗಿದೆ. ರಶ್ಮಿ ಮತ್ತು ಗುಂಡಮ್ಮ ಮುಂದೇನು ಮಾಡ್ತಾರೆ ಅನ್ನೋದನ್ನು ಕಾದು ನೋಡಬೇಕು.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಅಣ್ಣಯ್ಯದಲ್ಲಿ (Annayya serial) ಭರ್ಜರಿ ಟ್ವಿಸ್ಟ್ ಗಳು ಸಿಕ್ಕಿವೆ. ಒಂದರ ಮೇಲೆ ಒಂದು ತಿರುವು ಸಿಕ್ಕಿದೆ. ಒಂದೆಡೆ ಪಾರು ಅಪ್ಪನ ಸತ್ಯವನ್ನು ಅರಸಿ ಹೋಗಿದ್ದರೆ, ಮತ್ತೊಂದೆಡೆ ರಶ್ಮಿ ಮುಂದೆ ಗಂಡನ ಪ್ರೀತಿಯ ಅನಾವರಣ ಆಗಿದೆ.
27
ಪಾರು ಕಣ್ಣೆದುರು ಸತ್ಯದ ಅನಾವರಣ
ಪಾರುಗೆ ತನ್ನ ತಂದೆ ಕರೆದುಕೊಂಡು ಬಂದ ಹೆಂಗಸಿನ ಮೇಲೆ ಸಂಶಯ ಮೂಡಿದೆ. ಹಾಗಾಗಿ ಅದನ್ನು ಪತ್ತೆ ಹಚ್ಚಲು, ತೋಟದ ಮನೆಯ ಕಡೆಗೆ ಕಳ್ಳ ಹೆಜ್ಜೆ ಇಟ್ಟಿದ್ದಾಳೆ ಪಾರು. ಮನೆಯಿಂದ ಊಟ ತಯಾರಾಗಿ ಊಟ ಎಲ್ಲಿಗೆ ಬರುತ್ತಿದೆ ಎನ್ನುವುದನ್ನು ಪತ್ತೆ ಹಚ್ಚಲು ಮುಂದಾದ ಪಾರುಗೆ ಅಲ್ಲಿ ದೊಡ್ಡ ಶಾಕ್ ಕಾದಿದೆ.
37
ಸೀನಾ ಮನೆಯಲ್ಲಿ ಪಿಂಕಿ
ಇನ್ನೊಂದೆಡೆ ಸೀನಾ ಅಮ್ಮ ಪಿಂಕಿ ಮತ್ತು ಸೀನನನ್ನು ಹೇಗಾದರು ಒಂದು ಮಾಡಬೇಕೆಂಡು ಪ್ರಯತ್ನಿಸಿ, ಅದಕ್ಕಾಗಿ ಮನೆಯಲ್ಲಿಯೇ ಎಲ್ಲಾ ಸಿದ್ಧತೆ ಮಾಡಿಟ್ಟಿದ್ದಾರೆ. ಒಂದು ಕಡೆ ಗಂಡನನ್ನು, ರಶ್ಮಿಯನ್ನು, ಮಗಳನ್ನು ಮನೆಯಿಂದ ಹೊರಗೆ ಕಳುಹಿಸಿ, ಮನೆಗೆ ಪಿಂಕಿಯನ್ನು ಕರೆಯಿಸಿ ಸೀನಾ ಸರ್ಪ್ರೈಸ್ ಕೊಡಲು ತಯಾರಿ ನಡೆಸಿದ್ದಾಳೆ.
ಮನೆಗೆ ಬಂದಿರುವ ಪಿಂಕಿ, ಸೀನಾಗಾಗಿ ಕೋಣೆ ಪೂರ್ತಿ ಡೆಕೊರೇಟ್ ಮಾಡಿ, ಕೇಕ್ ತಂದಿರಿಸಿ, ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾಳೆ. ಜೊತೆಗೆ ಸೀನಾಗೆ ಉಂಗುರುವನ್ನು ತೊಡಿಸುತ್ತಾ, ಇನ್ನಾದರೂ ಮತ್ತೆ ಪ್ರೀತಿಸಿ ನನ್ನನ್ನು ಮದುವೆ ಮಾಡಿಕೊಳ್ತಿಯಾ ಎಂದು ಕೇಳಿದ್ದಾನೆ, ಅದಕ್ಕೆ ಸೀನಾ ಕೂಡ ಒಪ್ಪಿಗೆ ಕೊಟ್ಟು ಕೈ ಮುಂದೆ ಮಾಡಿದ್ದಾರೆ.
57
ರಶ್ಮಿ ಮುಂದೆ ಸತ್ಯದ ಅನಾವರಣ
ಆದರೆ ಇದೆಲ್ಲಾ ನಡೆಯುವಾಗ ಅಲ್ಲಿಗೆ ಸಡನ್ ಆಗಿ ಬರುವ ಗುಂಡಮ್ಮ ಸೀನಾ- ಪಿಂಕಿಯ ಪ್ರೀತಿಗೆ ಸಾಕ್ಷಿಯಾಗುತ್ತಾಳೆ. ಇದರಿಂದ ರಶ್ಮಿಗೆ ಶಾಕ್ ಕೂಡ ಆಗುತ್ತೆ. ಸೀನಾನನ್ನು ಈಗಷ್ಟೇ ಪ್ರೀತಿಸಲು ಶುರು ಮಾಡಿ, ಒಂದಲ್ಲ ಒಂದು ದಿನ ನನ್ನನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂದು ಅಂದುಕೊಂಡಿದ್ದ ರಶ್ಮಿಗೆ ಇದು ನುಂಗಲಾರದ ತುತ್ತಾಗುತ್ತದೆ.
67
ಮುಂದೇನು ಮಾಡುತ್ತಾಳೆ ಗುಂಡಮ್ಮ
ಇದೀಗ ಕಣ್ಣ ಮುಂದೆಯೇ ಸತ್ಯ ಬಯಲಾದ ಬಳಿಕ ರಶ್ಮಿ ಮುಂದಿನ ಹೆಜ್ಜೆ ಏನು? ಇದನ್ನು ಮಾವನಿಗೆ ಹೇಳುತ್ತಾಳ? ಸಿಟ್ಟು ಮಾಡಿಕೊಂಡು ಅತ್ತೆ, ಸೀನಾ , ಪಿಂಕಿಯ ಗ್ರಹಚಾರ ಬಿಡಿಸುತ್ತಾಳ ಅಥವಾ ಸೀನಾ ಬಳಿನಿಂದ ತಾನೇ ದೂರ ಉಳಿಯುತ್ತಾಳ? ಕಾದು ನೋಡಬೇಕು.
77
ಪಾತ್ರವರ್ಗ ಹೀಗಿದೆ
ಅಣ್ಣಯ್ಯ ಧಾರಾವಾಹಿ ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು, ನಿಶಾ ರವಿಕೃಷ್ಣನ್, ವಿಕಾಶ್ ಉತ್ತಯ್ಯ, ನಾಗರತ್ನ, ರಾಘವಿ, ಸುಷ್ಮಿತ್ ಜೈನ್, ನಾಗೇಂದ್ರ ಶಾ ಸೇರಿ ಹಲವು ನಟ ನಟಿಯರು ಅಭಿನಯಿಸುತ್ತಿದ್ದಾರೆ. ಟಿಆರ್ಪಿಯಲ್ಲಿ ಸದಾ ಮುಂದಿನ ಸಾಲಿನಲ್ಲೇ ಇರುತ್ತೆ ಈ ಧಾರಾವಾಹಿ.