ರಾಗಿಣಿ ಎಂಎಂಎಸ್ ರಿಟರ್ನ್ಸ್, ಪ್ಯಾರ್ ಕಾ ಪಂಚನಾಮಾ 2, ಉಜ್ದಾ ಚಮನ್ ಮತ್ತು ಹಮ್‌ನಲ್ಲಿನ ಅಭಿನಯಕ್ಕಾಗಿ ಹೆಸರುವಾಸಿಯಾಗಿರುವ ನಟಿ ಕರಿಷ್ಮಾ ಶರ್ಮಾ ಬುಧವಾರ ಭಾರೀ ಅಪಘಾತದಿಂದ ಪಾರಾಗಿದ್ದಾರೆ.
210
ಈ ಬಗ್ಗೆ ನಟಿ ತಮ್ಮ ಅಭಿಮಾನಿಗಳಿಗೆ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕರಿಷ್ಮಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, ಮುಂಬೈ ಲೋಕಲ್ ರೈಲಿನಲ್ಲಿ ಚರ್ಚ್ ಗೇಟ್ ಗೆ ಪ್ರಯಾಣಿಸುತ್ತಿದ್ದ ವೇಳೆ ಚಲಿಸುತ್ತಿದ್ದ ರೈಲಿನಿಂದ ಹೊರಗೆ ಬಿದ್ದಿದ್ದಾಗಿ ಹೇಳಿಕೊಂಡಿದ್ದಾರೆ. ಬಳಿಕ ನಟಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
310
"ನಿನ್ನೆ, ಚರ್ಚ್‌ಗೇಟ್‌ಗೆ ಶೂಟಿಂಗ್‌ಗೆ ಹೋಗುತ್ತಿದ್ದಾಗ, ನಾನು ಸೀರೆ ಧರಿಸಿ ರೈಲನ್ನು ಹತ್ತಲು ನಿರ್ಧರಿಸಿದೆ. ನಾನು ಹತ್ತುವಾಗ, ರೈಲು ವೇಗವನ್ನು ಪಡೆದುಕೊಳ್ಳಲು ಪ್ರಾರಂಭಿಸಿತು' ಎಂದು ಬರೆದುಕೊಂಡಿದ್ದಾರೆ.
ನಾನು ಮತ್ತು ನನ್ನ ಸ್ನೇಹಿತರು ಟ್ರೇನ್‌ಅನ್ನು ಹಿಡಿಯಲು ಸಾಧ್ಯವಾಗೋದಿಲ್ಲ ಅನ್ನೋದನ್ನು ನಾನು ಗಮನಿಸಿ, ಜಿಗಿದೆ. ಆದರೆ, ಅದೃಷ್ಟ ಸರಿ ಇರಲಿಲ್ಲ. ಜಾರಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡೆ ಎಂದು ಕರೀಷ್ಮಾ ಬರೆದುಕೊಂಡಿದ್ದಾರೆ.
510
ಮತ್ತಷ್ಟು ಬರೆದುಕೊಂಡಿರುವ ಆಕೆ "ನನ್ನ ಬೆನ್ನಿಗೆ ಗಾಯವಾಗಿದೆ, ನನ್ನ ತಲೆ ಊದಿಕೊಂಡಿದೆ ಮತ್ತು ನನ್ನ ಮೇಲೆ ಮೂಗೇಟುಗಳು ಬಿದ್ದಿವೆ ಎಂದಿದ್ದಾರೆ.
610
ವೈದ್ಯರು ಎಂಆರ್‌ಐ ಮಾಡಿಸುವಂತೆ ಸಲಹೆ ನೀಡಿದರು ಮತ್ತು ತಲೆಗೆ ಆದ ಗಾಯ ತೀವ್ರವಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಒಂದು ದಿನದ ಅಬ್ಸರ್ವೇಷನ್‌ನಲ್ಲಿ ಇರಿಸಿದ್ದಾರೆ' ಎಂದು ಬರೆದುಕೊಂಡಿದ್ದಾರೆ.
710
ನಿನ್ನೆಯಿಂದ ನನಗೆ ನೋವು ಕಾಡುತ್ತಿದೆ, ಆದರೆ ನಾನು ದೃಢವಾಗಿದ್ದೇನೆ. ದಯವಿಟ್ಟು ಬೇಗ ಗುಣಮುಖವಾಗುವಂತೆ ನಿಮ್ಮ ಪ್ರಾರ್ಥನೆಯಲ್ಲಿ ನನ್ನನ್ನು ಇರಿಸಿ ಮತ್ತು ನಿಮ್ಮ ಪ್ರೀತಿಯನ್ನು ನನಗೆ ಕಳುಹಿಸಿ. ಇದೇ ನನಗೆ ಶಕ್ತಿ ತುಂಬುತ್ತದೆ ಎಂದು ಬರೆದುಕೊಂಡಿದ್ದಾರೆ.
810
ಕರಿಷ್ಮಾ ಅವರ ಸ್ನೇಹಿತರೊಬ್ಬರು ಆಸ್ಪತ್ರೆಯಲ್ಲಿ ನಟಿ ಇರುವ ಚಿತ್ರವನ್ನು ಹಂಚಿಕೊಂಡು, ಈ ಘಟನೆ ಆಗಿದ್ದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನನ್ನ ಸ್ನೇಹಿತೆ ರೈಲಿನಿಂದ ಬಿದ್ದಿದ್ದಾಳೆ. ಹಾಗೂ ಅವಳಿಗೆ ಘಟನೆಯ ನೆನಪಿಲ್ಲ ಎಂದು ಬರೆದಿದ್ದಾರೆ.
910
ರೈಲಿನ ಫ್ಲಾಟ್‌ಫಾರ್ಮ್‌ನಲ್ಲಿ ಆಕೆ ಬಿದ್ದಿದ್ದನ್ನು ಕಂಡು ಆಸ್ಪತ್ರೆಗೆ ಕರೆದೊಯ್ದೆವು. ವೈದ್ಯರು ಇನ್ನೂ ಪರಿಶೀಲನೆ ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.