12 ಜ್ಯೋತಿರ್ಲಿಂಗ ದರ್ಶನದ ಸಂಕಲ್ಪ ಮಾಡಿರುವ ನಟಿ ಕಾರುಣ್ಯ ರಾಮ್, ಈಗಾಗಲೇ ತ್ರ್ಯಂಬಕೇಶ್ವರ, ಕಾಶಿ ವಿಶ್ವನಾಥ ಮೊದಲಾದ ಜ್ಯೋತಿರ್ಲಿಂಗ ದರ್ಶನ ಪಡೆದು, ಇದೀಗ ಕೇದರನಾಥಕ್ಕೆ ತೆರಳಿದ್ದು, ಅಲ್ಲಿಯ ಜ್ಯೋತಿರ್ಲಿಂಗ ದರ್ಶನ ಪಡೆದು ಬಂದಿದ್ದಾರೆ.
ಸೀನಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಕಾರುಣ್ಯ ರಾಮ್ (Karunya Ram), ನಂತರ ಒಂದಷ್ಟು ಸಿನಿಮಾದಲ್ಲಿ ಗುರುತಿಸಿಕೊಂಡು, ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಕನ್ನಡ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು ಇವರು.
27
ಜ್ಯೋತಿರ್ಲಿಂಗ ದರ್ಶನ
ಸದ್ಯ ಸಿನಿಮಾದಿಂದ ದೂರ ಇರುವ ಕಾರುಣ್ಯ, ಸಿನಿಮಾ ಈವೇಂಟ್ ಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಜೊತೆಗೆ ಇವರು ತಮ್ಮ ಸ್ಪಿರೀಚುವಲ್ ಜರ್ನಿಗೂ ಕೂಡ ಹೆಸರುವಾಸಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಟಿ ಹೆಚ್ಚಾಗಿ, ವಿವಿಧ ದೈವೀಕ ತಾಣಗಳಿಗೆ ಪ್ರವಾಸ ತೆರಳುತ್ತಲೇ ಇರುತ್ತಾರೆ.
37
ಕೇದರನಾಥಕ್ಕೂ ಭೇಟಿ
ನಟಿ ಕಾರುಣ್ಯ ರಾಮ್ 12 ಜ್ಯೋತಿರ್ಲಿಂಗ ದರ್ಶನದ ಸಂಕಲ್ಪ ಮಾಡಿದ್ದು, ಈಗಾಗಲೇ ತ್ರ್ಯಂಬಕೇಶ್ವರ, ಕಾಶಿ ವಿಶ್ವನಾಥ ಮೊದಲಾದ ಜ್ಯೋತಿರ್ಲಿಂಗ ದರ್ಶನ ಮಾಡಿದ್ದಾರೆ. ಜೊತೆಗೆ ಶಕ್ತಿ ಪೀಠಗಳ ದರ್ಶನ ಕೂಡ ಮಾಡಿದ್ದಾರೆ. ಇದೀಗ ಕೇದರನಾಥಕ್ಕೂ ಭೇಟಿ ನೀಡಿದ್ದಾರೆ.
ತಮ್ಮ ಗೆಳತಿ ಜೊತೆ ಕೇದರನಾಥಕ್ಕೆ ತೆರಳಿರುವ ಕಾರುಣ್ಯ ರಾಮ್ ಕ್ಷೇತ್ರದ ಮುಂದೆ ನಿಂತು ಫೋಟೊ ತೆಗೆಸಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಅಲ್ಲಿಗೆ ತಲುಪವ ಜರ್ನಿ ಕುರಿತು ಸಹ ತಮ್ಮ ಅನುಭವಗಳನ್ನು ನಟಿ ಬಿಚ್ಚಿಟ್ಟಿದ್ದಾರೆ.
57
ಚಳಿ, ಮಳೆ ಲೆಕ್ಕಿಸದೆ ಟ್ರೆಕ್ಕಿಂಗ್
ಸುಮಾರು 8 ಕೆಜಿಯ ಬ್ಯಾಗ್ ಹೊತ್ತುಕೊಂಡು, 22 ಕಿಮೀ ಟ್ರೆಕ್ಕಿಂಗ್ ಮಾಡಿ, ಕೇದರನಾಥನ ದರ್ಶನ ಪಡೆಯುವುದು ನಿಜಕ್ಕೂ ದೈವೀಕ ಅನುಭವವಾಗಿತ್ತು. ಈ ಜರ್ನಿಯು ಇಲ್ಲಿ ಕಾಣುವಷ್ಟು ಸುಲಭವಾಗಿರಲಿಲ್ಲ. ತುಂಬಾನೆ ಕಷ್ಟವಾಗಿತ್ತು, 5 ಕಿ. ಮೀ ತಲುಪುವಷ್ಟರಲ್ಲಿ ಜೋರಾದ ಮಳೆ, ಚಳಿಯಿಂದ ಆಸೆ ಬಿಟ್ಟಿದ್ದೆವು, ಆದರೆ ಓಂ ನಮಃ ಶಿವಾಯ ಮಂತ್ರ ನಮಗೆ ಮತ್ತೆ ಹೊಸ ಹುರುಪು ನೀಡಿತ್ತು.
67
ಕೇದರನಾಥ ದರ್ಶನದಿಂದ ಆನಂದ ಭಾಷ್ಪ
ಕೊನೆಗೆ ಇನ್ನೇನು 7 ಕಿ. ಮೀ ಇರುವಾಗ ನಡೆಯೋದಕ್ಕೂ ಶಕ್ತಿ ಇಲ್ಲದೇ ಇದ್ದಾಗ, ಇವರ ಜೊತೆ ಸೇರಿದ ಇಬ್ಬರು ಜೋಡಿಗಳು, ಮತ್ತೆ ಉತ್ಸಾಹ ತುಂಬಿ ಕೊನೆಗೆ ಬೆಳಗ್ಗಿನ ಜಾವ 4 ಗಂಟೆಗೆ ಕೇದರನಾಥನ ದರ್ಶನ ಪಡೆಯುವಂತೆ ಮಾಡಿದ್ದಾರೆ. ಈ ಜರ್ನಿ ಜೀವನದಲ್ಲಿ ಒಂದು ಬಾರಿಯಾದರು ಮಾಡಲೇಬೇಕು, ಕಣ್ಣಲ್ಲಿ, ಸಂತೋಷದ ಕಣ್ಣಿರು ತುಂಬಿಕೊಂಡಿದೆ ಎಂದು ಹೇಳಿದ್ದಾರೆ.
77
ಸಿನಿಮಾಗಳು
ಕರಿಯರ್ ಬಗ್ಗೆ ಹೇಳೋದಾದರೆ ವಜ್ರಕಾಯ, ಕಿರಿಗೂರಿನ ಗೈಯ್ಯಾಳಿಗಳು, ಮನೆ ಮಾರಾಟಕ್ಕಿದೆ ಮೊದಲಾದ ಜನಪ್ರಿಯ ಸಿನಿಮಾಗಳಲ್ಲಿ ಕುಡ ಕಾರುಣ್ಯ ನಟಿಸಿದ್ದರು. ಅಲ್ಲದೇ ಮನೆ ಮಾರಾಟಕ್ಕಿದೆ ಸಿನಿಮಾಗಾಗಿ ಅತ್ಯುತ್ತಮ ಪೋಷಕ ನಟಿಯಾಗಿ ಸೈಮಾ ಪ್ರಶಸ್ತಿ ಕೂಡ ಗೆದ್ದಿದ್ದರು.