ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?

Published : Dec 11, 2025, 09:37 PM IST

ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಯಲ್ಲಿ ಕಥೆ ಅನಿರೀಕ್ಷಿತ ತಿರುವು ಪಡೆದಿದೆ. ಸತ್ತುಹೋದ ಸಂಧ್ಯಾಗೆ ನ್ಯಾಯ ಕೊಡಿಸಲು ಹೋರಾಡುತ್ತಿದ್ದ ಭಾರ್ಗವಿಗೆ, ಸಂಧ್ಯಾಳೇ ಜೀವಂತವಾಗಿ ಕೋರ್ಟ್‌ನಲ್ಲಿ ಎದುರಾಗಿದ್ದಾಳೆ. ಅಷ್ಟೇ ಅಲ್ಲದೆ, ಭಾರ್ಗವಿಯ ವಿರುದ್ಧವೇ ಆರೋಪ ಮಾಡಿ ಎಲ್ಲರಿಗೂ ಆಘಾತ ನೀಡಿದ್ದಾಳೆ.

PREV
17
ಟ್ವಿಸ್ಟ್‌ ಮೇಲೆ ಟ್ವಿಸ್ಟ್‌

ಭಾರ್ಗವಿ ಎಲ್‌ಎಲ್‌ಬಿ (Bhagavi LLB) ಇದೀಗ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಪಡೆದುಕೊಂಡಿದೆ. ಮಾವನನ್ನೇ ಎದುರು ಹಾಕಿಕೊಂಡು ಸತ್ತುಹೋದ ಸಂಧ್ಯಾಗೆ ನ್ಯಾಯ ಕೊಡಿಸಲು ಭಾರ್ಗವಿ ಮುಂದಾಗಿದ್ದಾಳೆ.

27
ಸಂಧ್ಯಾಗೆ ನ್ಯಾಯ

ಸಂಧ್ಯಾಗೆ ನ್ಯಾಯ ಕೊಡಿಸಬೇಕು ಎನ್ನುವ ಕಾರಣಕ್ಕೆ, ತನ್ನ ಸಂಪೂರ್ಣ ಜೀವವನ್ನೇ ಬಲಿಕೊಟ್ಟಿದ್ದಾಳೆ. ಪತಿಯೊಂದಿಗೆ ಜಗಳವಾಡಿದ್ದಾಳೆ. ಇಡೀ ಕುಟುಂಬವನ್ನು ಎದುರು ಹಾಕಿಕೊಂಡಿದ್ದಾಳೆ.

37
ಭಾರಿ ಶಾಕಿಂಗ್‌

ಆದರೆ ಈಗ ಆಗಿದ್ದೇ ಭಾರಿ ಶಾಕಿಂಗ್‌. ಯಾವ ಸಂಧ್ಯಾಳಿಗೆ ನ್ಯಾಯ ಕೊಡಲು ತನ್ನ ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದಾಳೋ ಭಾರ್ಗವಿ, ಅದೇ ಸಂಧ್ಯಾ ಜೀವಂತವಾಗಿ ಬಂದಿದ್ದಾಳೆ, ಆದರೆ ಭಾರ್ಗವಿಯ ವಿರುದ್ಧವಾಗಿ!

47
ಸೀರಿಯಲ್‌ ಟ್ವಿಸ್ಟ್‌

ಹೌದು. ಸೀರಿಯಲ್‌ನಲ್ಲಿ ಭಾರಿ ಟ್ವಿಸ್ಟ್‌ ಸಿಕ್ಕಿದೆ. ಮೊದಲಿಗೆ ಅರ್ಜುನ್‌ ಆ ಬಳಿಕ ಅವನ ಅಮ್ಮನನ್ನು ಜೈಲಿಗೆ ಕಳುಹಿಸಲು ಭಾರ್ಗವಿ ರೆಡಿಯಾಗಿದ್ದರೆ, ಇದೀಗ ಇಡೀ ಕೇಸೇ ಉಲ್ಟಾ ಹೊಡೆದಿದೆ.

57
ಕೋರ್ಟ್‌ಗೆ ಬಂದ ಸಂಧ್ಯಾ!

ಯುವತಿಯೊಬ್ಬಳನ್ನು ಬೃಂದಾ ಕರೆದುಕೊಂಡು ಕೋರ್ಟಿಗೆ ಬಂದಿದ್ದಾಳೆ. ಆ ಹುಡುಗಿ ಮಾಸ್ಕ್‌ ತೆರೆದಾಗ ಎಲ್ಲರೂ ಶಾಕ್‌. ಏಕೆಂದರೆ ಅವಳೇ ಈ ಸತ್ತುಹೋದ ಸಂಧ್ಯಾ!

67
ಭಾರ್ಗವಿ ವಿರುದ್ಧ ಆರೋಪ

ಕೋರ್ಟ್ ಕಟಕಟೆ ಏರಿದ ಈ ಸಂಧ್ಯಾ, ಭಾರ್ಗವಿ ಪಿತೂರಿ ಮಾಡಿ ಅರ್ಜುನ್‌ ಮತ್ತು ಅವರ ಕುಟುಂಬದ ವಿರುದ್ಧ ಕೇಸ್‌ ಹಾಕಿದ್ದಾರೆ. ಮೋಸ ಮಾಡುವ ಉದ್ದೇಶ ಅವರದ್ದು ಎಂದು ನ್ಯಾಯಾಧೀಶರ ಎದುರು ಹೇಳಿದ್ದಾಳೆ!

77
ಯಾರೀ ಸಂಧ್ಯಾ?

ಹಾಗಿದ್ದರೆ ಈ ಸಂಧ್ಯಾ ಯಾರು? ಸತ್ತವಳು ಬದುಕಿ ಬಂದದ್ದು ಹೇಗೆ, ಅಥವಾ ಇವಳು ನಕಲಿ ಸಂಧ್ಯಾನಾ? ಅವಳನ್ನೇ ಹೋಲುವವಳನ್ನು ಬೃಂದಾ ಕರೆಸಿದ್ದಾಳಾ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories