ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!

Published : Dec 11, 2025, 07:44 PM IST

'ಕಾಟೇರ' ಖ್ಯಾತಿಯ ನಟಿ ಶ್ವೇತಾ ಆರ್ ಪ್ರಸಾದ್ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಭೀಕರ ಬಸ್ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಕೆಟ್ಟ ಫೋನ್ ಕರೆಯಿಂದ ಮಾನಸಿಕವಾಗಿ ವಿಚಲಿತರಾಗಿ ರಸ್ತೆ ದಾಟುತ್ತಿದ್ದಾಗ ಈ ಘಟನೆ ನಡೆದಿದ್ದು, ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. 

PREV
110

ಕಿರುತೆರೆಯಲ್ಲಿ ರಾಧಾ ಮಿಸ್‌ ಎಂದೇ ಜನರಿಗೆ ಪರಿಚಯವಾಗಿರುವ, ಕಾಟೇರ ಸಿನಿಮಾದಲ್ಲಿನ ಮಹತ್ವದ ಪಾತ್ರದ ಮೂಲಕ ಜನಮನ್ನಣೆ ಪಡೆದ ನಟಿ ಶ್ವೇತಾ ಆರ್‌ ಪ್ರಸಾದ್‌ ಇತ್ತೀಚೆಗೆ ಮೇಜರ್‌ ಅಪಘಾತದಿಂದ ಜಸ್ಟ್‌ ಬಚಾವ್‌ ಆಗಿದ್ದಾರೆ.

210

ಡಿಸೆಂಬರ್‌ 5 ರಂದು ಬೆಂಗಳೂರಿನಲ್ಲಿಯೇ ಈ ಘಟನೆ ನಡೆದಿದ್ದು, ಆ ಬಳಿಕ ಬಳಿಕ ಚೇತರಿಸಿಕೊಳ್ಳಲು ಕೆಲವು ದಿನಗಳು ಹಿಡಿದವು ಎಂದು ಹೇಳಿದ್ದಾರೆ. ಎಲ್ಲೂ ಹೋಗದೆ ಮನೆಯಲ್ಲಿಯೇ ದಿನಗಳನ್ನು ಕಳೆದೆ ಎಂದಿದ್ದಾರೆ.

310

ಆ ದಿನ ಒಂದು ಕೆಟ್ಟ ಕಾಲ್‌ ನನನಗೆ ಬಂದಿತ್ತು. ಇದರಿಂದಾಗಿ ನನ್ನ ಮುಂದಿನ ಎಂಟು ದಿನದ ವೇಳಾಪಟ್ಟಿ ಸಂಪೂರ್ಣ ಅಸ್ತವ್ಯಸ್ಥವಾಗಿತ್ತು. ಈ ಫೋನ್‌ ಕಾಲ್‌ಅನ್ನು ಸಿಟ್ಟಿನಿಂದಲೇ ನಾನು ಕಟ್‌ ಮಾಡಿದ್ದೆ ಎಂದು ಶ್ವೇತಾ ಪ್ರಸಾದ್ ಹೇಳಿದ್ದಾರೆ.

410

ಏನು ಮಾಡೋದು ಅನ್ನೋದು ಗೊತ್ತಿರಲಿಲ್ಲ. ನಾನು ಕಾರ್‌ನಿಂದ ಇಳಿದು ಕಾಫಿ ಶಾಪ್‌ನ ಕಡೆಗೆ ರಸ್ತೆ ದಾಟಲು ಆರಂಭ ಮಾಡಿದ್ದೆ. ಈ ಹಂತದಲ್ಲಿ ನಾನು ಎಲ್ಲಿದ್ದೇನೆ ಅನ್ನೋದೇ ನನಗೆ ತಿಳಿದಿರಲಿಲ್ಲ ಎಂದು ಶ್ವೇತಾ ಹೇಳಿದ್ದಾರೆ.

510

ನಾನು ರಸ್ತೆ ದಾಟುವ ವೇಳೆ ಬಸ್ಸೊಂದು ವೇಗವಾಗಿ ನನ್ನ ಬಳಿಗೆ ಬರುತ್ತಿತ್ತು. ನನ್ನ ಅದೃಷ್ಟ ಚೆನ್ನಾಗಿತ್ತು. ಬಸ್‌ ಡ್ರೈವರ್‌ಗೆ ಸರಿಯಾದ ಸಮಯಕ್ಕೆ ಬ್ರೇಕ್‌ ಹಾಕುವ ಮನಸ್ಸು ಮತ್ತು ಟೈಮ್‌ ಎರಡೂ ಇತ್ತು ಎಂದು ಹೇಳಿದ್ದಾರೆ.

610

ಬಸ್‌ ನನ್ನ ಪಕ್ಕದಲ್ಲಿಯೇ ಬಂದು ನಿಂತಿತ್ತು. ನಾನು ಸ್ಟನ್‌ ಆಗಿ ಹೋಗಿದ್ದ. ಈ ಹಂತದಲ್ಲಿ ಕ್ಯಾಬ್‌ ಚಾಲಕನೊಬ್ಬ ಓಡಿ ಬಂದು ರಸ್ತೆಯಿಂದ ನನ್ನನ್ನು ಹೊರಗೆ ಹಾಕಿದ. ನಾನು ತುಂಬಾ ಶಾಕ್‌ನಲ್ಲಿದ್ದೆ. ಏನು ಪ್ರಕ್ರಿಯೆ ನೀಡಲು ಕೂಡ ನನಗೆ ಸಾಧ್ಯವಾಗಿರಲಿಲ್ಲ ಎಂದಿದ್ದಾರೆ.

710

ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಕೆಟ್ಟದ್ದೇನೂ ಸಂಭವಿಸಿಲ್ಲ ಎನ್ನುವುದಕ್ಕೆ ನಾನು ಆಭಾರಿಯಾಗಿದ್ದೇನೆ. ಆದರೆ ಘಟನೆಯಿಂದ ಹೊರಬರಲು ನನಗೆ ಸ್ವಲ್ಪ ಸಮಯ ತೆಗೆದುಕೊಂಡಿತು ಎಂದಿದ್ದಾರೆ.

810

ರಸ್ತೆಯಲ್ಲಿ ಓಡಾಡುವಾಗ ನಾನು ಸಾಮಾನ್ಯವಾಗಿ ಜಾಗರೂಕಳಾಗಿ ಇರುತ್ತೇನೆ. ಆದರೆ, ಆಕ್ಷಣದಲ್ಲಿ ಇದ್ದ ಅಗಾಧ ಒತ್ತಡ ನನ್ನ ಯೋಚನೆನ್ನು ಮಸುಕಾಗಿಸಿತು ಎಂದಿದ್ದಾರೆ.

910

ನನ್ನ ಮನಸ್ಸು ಬೇರೆ ಯೋಚನೆ ಮಾಡುತ್ತಿತ್ತು. ಈ ಘಟನೆ ಸಂಭವಿಸಿತು ಎಂದು ಇನ್ನೂ ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಒಂದು ದೊಡ್ಡ

1010

ಘಟನೆಯಿಂದ ಪಾರಾದ ರೀತಿ ನೆನೆಸಿಕೊಂಡರೆ ಈಗಲೂ ನಡುಕ ಉಂಟಾಗುತ್ತದೆ ಎಂದು ಶ್ವೇತಾ ಪ್ರಸಾದ್‌ ಹೇಳಿದ್ದಾರೆ. 'ರಾಧಾ ರಮಣ', 'ಶ್ರೀರಸ್ತು ಶುಭಮಸ್ತು' ಮುಂತಾದ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತಗೊಂಡಿರುವ ನಟಿ ಶ್ವೇತಾ ಆರ್ ಪ್ರಸಾದ್ ಮಹೇಶ್ ರವಿಕುಮಾರ್ ಎಂಬುವವರು ನಿರ್ದೇಶನ ಮಾಡಿರುವ 'ಬಂದೂಕ್' ಸಿನಿಮಾದಲ್ಲಿ ಕೊನೆಯ ಬಾರಿಗೆ ಕಾಣಿಸಿದ್ದರು.

Read more Photos on
click me!

Recommended Stories