ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಸ್ಪರ್ಧಿ ಗಿಲ್ಲಿ ನಟ ‘ದಿ ಡೆವಿಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಇಂದು ಈ ಸಿನಿಮಾ ರಾಜ್ಯದಾದ್ಯಂತ 1000 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದೆ. ಬೆಳಗ್ಗೆ 6 ಗಂಟೆಯಿಂದ ಶೋ ಶುರುವಾಗಿದೆ. ದೊಡ್ಮನೆಯೊಳಗಡೆ ಇರುವ ಗಿಲ್ಲಿ ನಟನಿಗೆ ಇದ್ಯಾವುದರ ಅರಿವೇ ಇಲ್ಲದಂತಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಮುಂದಿನ ವಾರ ಉಳಿದುಕೊಳ್ಳಲು ಏನು ಮಾಡಬೇಕು? ಟ್ರೋಫಿ ಹೊಡೆಯಲು ಏನು ಮಾಡಬೇಕು ಎಂದು ಗಿಲ್ಲಿ ನಟ ಯೋಚನೆ ಮಾಡುತ್ತಿರುತ್ತಾರೆ, ಸ್ಪರ್ಧಿಗಳ ಜೊತೆ ಜಗಳ ಆಡಿಕೊಂಡು, ಈ ವಾರ ಯಾರು ನಮಗೆ ಕಳಪೆ ಕೊಡಬಹುದು? ಯಾರು ಉತ್ತಮ ಕೊಡ್ತಾರೆ? ಕಿಚ್ಚ ಸುದೀಪ್ ಬಳಿ ವೀಕೆಂಡ್‌ನಲ್ಲಿ ನನಗೆ ಕ್ಲಾಸ್ ಇದೆಯಾ? ಯಾರು ನಾಮಿನೇಟ್ ಮಾಡಬಹುದು ಎಂದೆಲ್ಲ ಯೋಚನೆಗಳು ಓಡಾಡುತ್ತಿರುತ್ತವೆ.
25
‘ದಿ ಡೆವಿಲ್’ ಸಿನಿಮಾ ರಿಲೀಸ್
ಬಿಗ್ ಬಾಸ್ ಮನೆಯಲ್ಲಿರುವ ಗಿಲ್ಲಿ ನಟ ಅವರಿಗೆ ‘ದಿ ಡೆವಿಲ್’ ಸಿನಿಮಾ ರಿಲೀಸ್ ಆಗಲಿದೆ ಎಂದು ನೆನಪು ಇರುವುದೋ ಏನೋ. ಒಂದು ವಾರ ಕಳೆಯಿತು ಎಂದಷ್ಟೇ ಗೊತ್ತಿರುತ್ತದೆ ಬಿಟ್ಟರೆ ಡೇಟ್, ವಾರಗಳೆಲ್ಲ ಅಷ್ಟಾಗಿ ಗೊತ್ತಾಗೋದಿಲ್ಲ. ಅಲ್ಲಿ ಟಿವಿಯೂ ಇಲ್ಲ, ಮೊಬೈಲ್ ಇಲ್ಲ, ಕ್ಯಾಲೆಂಡರ್ ಕೂಡ ಇಲ್ಲ, ಗಡಿಯಾರವಂತೂ ಇಲ್ಲವೇ ಇಲ್ಲ.
35
ಹೊರಗಡೆ ಪ್ರಪಂಚದ ಅರಿವೇ ಇಲ್ಲ
ಕಾಮಿಡಿ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಗಿಲ್ಲಿ ನಟನಿಗೆ ನಟ ದರ್ಶನ್ ಅವರಂಥ ಸ್ಟಾರ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಇದು ಅವರ ಪಾಲಿಗೆ ಭಾಗ್ಯದ ಬಾಗಿಲು. ಈ ಸಿನಿಮಾ ಹೇಗೆ ಓಡುತ್ತಿದೆ? ಜನರಿಗೆ ಇಷ್ಟ ಆಯ್ತಾ? ಇಲ್ಲವಾ ಎಂಬ ತಳಮಳ ಇರುವುದು. ಹೊರಗಡೆ ಪ್ರಪಂಚದ ಅರಿವೇ ಇಲ್ಲದೆ ದೊಡ್ಮನೆಯಲ್ಲಿರುವ ಗಿಲ್ಲಿ ನಟನಿಗೆ ‘ದಿ ಡೆವಿಲ್’ ಅಬ್ಬರದ ಸುಳಿವು ಕೂಡ ಸಿಕ್ಕಿರೋದಿಲ್ಲ.
ಅಂದಹಾಗೆ ‘ದಿ ಡೆವಿಲ್’ ಸಿನಿಮಾದಲ್ಲಿ ಗಿಲ್ಲಿ ಅವರು ಅತಿ ಮುಖ್ಯವಾದ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಮೊದಲೇ ಸಿನಿಮಾ ತಂಡ ಹೇಳಿತ್ತು. ಅದರಂತೆ ಗಿಲ್ಲಿ ನಟನ ಲುಕ್ ಕೂಡ ಭರ್ಜರಿಯಾಗಿದೆ. ಅಂದಹಾಗೆ ಸಿನಿಮಾ ನೋಡಿದವರು ಗಿಲ್ಲಿ ನಟನ ಕಾಮಿಡಿಗೆ ಸಿಕ್ಕಾಪಟ್ಟೆ ನಕ್ಕಿದ್ದಾರೆ.
55
ಗಿಲ್ಲಿ ನಟನ ಪಾತ್ರವೇನು?
ಸಿನಿಮಾ ನೋಡಿದವರು, ಗಿಲ್ಲಿ ನಟ ಮಾತ್ರ ಎಣ್ಣೆಯಲ್ಲಿ ಮುಖ ತೊಳೆದುಕೊಂಡಿದ್ದಾರೆ” ಎಂದು ಹೇಳಿದ್ದಾರೆ. ಅದರಂತೆ ಗಿಲ್ಲಿ ನಟ ಅವರು ಬಾರ್‌ನಲ್ಲಿ ಮಾತನಾಡೋದು, ಎಣ್ಣೆಗೋಸ್ಕರ ಡಿಮ್ಯಾಂಡ್ ಮಾಡುವ ಸಂಭಾಷಣೆ ಈಗ ವೈರಲ್ ಆಗ್ತಿದೆ. ಕೊಟ್ಟಿರೋದು ಸಣ್ಣ ಪಾತ್ರವಾದರೂ ಕೂಡ, ಅದನ್ನು ಸರಿಯಾಗಿ ನಿಭಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ನಟ ದರ್ಶನ್ ಜೊತೆಗೆ ಗಿಲ್ಲಿ ನಟನ ಕಾಂಬಿನೇಶನ್ ವರ್ಕ್ ಆಗಿದೆ ಎನ್ನಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ‘ದಿ ಡೆವಿಲ್ʼ ಸಿನಿಮಾದ ದೃಶ್ಯ ವೈರಲ್ ಆಗ್ತಿದೆ.