ಸ್ಲಿಮ್ & ಫಿಟ್ ಆಗಿರುವ ‘ರಾಧಾ ಕಲ್ಯಾಣ’’ ನಟಿ Radhika Rao ಮುದ್ದಾದ ಫ್ಯಾಮಿಲಿ ಫೋಟೊ

Published : Dec 29, 2025, 10:44 AM IST

Radhika Rao: ‘ರಾಧಾ ಕಲ್ಯಾಣ’’ ನಟಿ ರಾಧಿಕಾ ರಾವ್, ಇದೀಗ ಸಿಕ್ಕಾಪಟ್ಟೆ ತೂಕ ಇಳಿಸಿಕೊಂಡು ಸ್ಲಿಮ್ ಮತ್ತು ಫಿಟ್ ಆಗಿದ್ದಾರೆ. ನಟಿ ತಮ್ಮ ಮುದ್ದಾದ ಫ್ಯಾಮಿಲಿ ಜೊತೆ ಫೋಟೋ ಶೇರ್ ಮಾಡಿದ್ದು, ಸದ್ಯ ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

PREV
17
ರಾಧಿಕಾ ರಾವ್

ಕನ್ನಡ ಕಿರುತೆರೆಯ ಜನಪ್ರಿಯ ನಟಿ ‘ರಾಧಿಕಾ ರಾವ್’ ಮದುವೆಯಾಗಿ ಮಗುವಾದ ಬಳಿಕ ನಟನೆಯಿಂದ ದೂರ ಉಳಿದಿದ್ದು, ಸದ್ಯ ಗಂಡ, ಮಗು ಎಂದು ತಮ್ಮ ಸಂಸಾರದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ತಮ್ಮ ಫಿಟ್ನೆಸ್ ಕುರಿತು ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ.

27
ಫ್ಯಾಮಿಲಿ ಫೋಟೊ

ನಟಿಯ ಫ್ಯಾಮಿಲಿ ಫೋಟೊ ಕ್ರಿಸ್ಮಸ್ ಸಮಯದಲ್ಲಿ ರಾಧಿಕಾ ರಾವ್ ತಮ್ಮ ಪತಿ ಆಕರ್ಷ್ ಎಸ್ ಭಟ್ ಮತ್ತು ಮುದ್ದು ಮಗನ ಜೊತೆಗೆ ಒಂದು ಸುಂದರವಾದ ಫೋಟೊ ಶೂಟ್ ಮಾಡಿಸಿದ್ದು, ಆ ಫೋಟೊಗಳನ್ನು ತಮ್ಮ ಇನ್’ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ Joy, love, and peace ಎಂದು ಕ್ಯಾಪ್ಶನ್ ಹಾಕಿದ್ದಾರೆ.

37
ನಟನೆಯಿಂದ ದೂರ

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ರಾಧಿಕಾ ರಾವ್, ಹೆಚ್ಚಾಗಿ ತಮ್ಮ ಫ್ಯಾಮಿಲಿ ಹಾಗೂ ಮಗುವಿನೊಂದಿಗಿನ ಮುದ್ದಾದ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಪುಟ್ಟ ಮಗನಿಗೆ ಅಗಸ್ತ್ಯ ಎಂದು ಹೆಸರಿಟ್ಟಿರುವ ರಾಧಿಕಾ ರಾವ್, ಸದ್ಯ ಸ್ನೇಹಿತರ ಜೊತೆ ವೆಕೇಶನ್ ಎಂಜಾಯ್ ಮಾಡುತ್ತಿದ್ದಾರೆ.

47
ಡೆಲಿವರಿ ಬಳಿಕ ತೂಕ ಹೆಚ್ಚಳ

ರಾಧಿಕಾ ರಾವ್ 2023ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಡೆಲಿವರಿ ಬಳಿಕ ತೂಕ ಹೆಚ್ಚಿಸಿಕೊಂಡಿದ್ದರು. ತೂಕ ಹೆಚ್ಚಿಸಿಕೊಂಡಾಗ ಹೆಚ್ಚಿನ ಜನರು ತೂಕದ ಬಗ್ಗೆ ಕಾಮೆಂಟ್ ಮಾಡಿದ್ದರಂತೆ, ಇದರಿಂದಾಗಿ ನಟಿ ತೂಕ ಇಳಿಕೆಯ ಬಗ್ಗೆ ಗಮನ ಹರಿಸಿದರು.

57
ಫ್ಯಾಟ್ ಟು ಫಿಟ್

ಎಲ್ಲರೂ ಹೇಳುತ್ತಿದ್ದಾರೆ ಅನ್ನೋದಕ್ಕಿಂತ ನಟಿ, ತನಗೆ ಬೇಕು ಅನಿಸಿದಾಗ ಫ್ಯಾಟ್ ಟು ಫಿಟ್ ಜರ್ನಿ ಕಡೆಗೆ ಗಮನ ಹರಿಸಿದರು. ಮಗುವಿಗೆ ಎರಡು ವರ್ಷ ಕಳೆದ ಮೇಲೆ ನಟಿ ತೂಕ ಇಳಿಸಲು ಆರಂಭಿಸಿದ್ದು, ಈಗ ನೋಡಿದ್ರೆ ನಟಿ ಸಿಕ್ಕಾಪಟ್ಟೆ ಸ್ಲಿಮ್ ಆಗಿ, ಕಾಲೇಜು ಯುವತಿಯರಂತೆ ಕಾಣಿಸುತ್ತಿದ್ದಾರೆ.

67
75 ರಿಂದ 58 ಕೆಜಿಗೆ ಇಳಿಕೆ

ಡೆಲಿವರಿ ಬಳಿಕ 75 ಕೆಜಿ ತೂಕ ಹೆಚ್ಚಿಸಿಕೊಂಡಿದ್ದ ರಾಧಿಕಾ ರಾವ್, ನಂತರ ಎಂಟು ತಿಂಗಳ ಕಠಿಣ ಪರಿಶ್ರಮದ ಮೂಲಕ 58 ಕೆಜಿ ಆಗಿದ್ದಾರೆ. ಅದಕ್ಕಾಗಿ ಅವರು ಸ್ವೀಟ್ಸ್, ಫಾಸ್ಟ್ ಫುಡ್ ಎಲ್ಲವನ್ನೂ ತ್ಯಜಿಸಿ, ಬ್ಯಾಲೆನ್ಸ್ ಆಹಾರ ಸೇವಿಸಿದ್ದಾರೆ.

77
ಡಯಟ್’ನಲ್ಲಿ ಏನೇನಿತ್ತು?

ರಾಧಿಕಾ ಸಸ್ಯಾಹಾರಿಯಾಗಿರುವುದರಿಂದ ತರಕಾರಿ, ಹಣ್ಣುಗಳನ್ನು ಜಾಸ್ತಿ ತಿಂದಿದ್ದಾರೆ. ಯಾರು ಎಷ್ಟೇ ಹೇಳಿದರೂ ಕೂಡ ಜಂಕ್, ಸ್ವೀಟ್‌ ತಿನ್ನಲೇ ಇಲ್ಲ. ಬೆಳಗ್ಗೆ ಹಣ್ಣು, ಮಧ್ಯಾಹ್ನ ಸ್ವಲ್ಪ ಅನ್ನದ ಜೊತೆ ತರಕಾರಿ, ಕಾಳುಗಳು ತಿನ್ನುತ್ತಿದ್ದರಂತೆ, ಅಷ್ಟೇ ಅಲ್ಲದೇ ಎಣ್ಣೆ ಪದಾರ್ಥವನ್ನು ಅವರು ಮುಟ್ಟಿಲ್ಲ ಹೀಗೆ ಫಿಟ್ ಆಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories