BBK 12 ಬಿಗ್‌ಬಾಸ್ ಮನೆಯಲ್ಲಿ ಅನಿರೀಕ್ಷಿತ ತಿರುವು; ಜಾನ್ವಿ ಹೇಳಿದ ಮಾತು ಸತ್ಯ ಎಂದ ನೆಟ್ಟಿಗರು

Published : Dec 29, 2025, 09:56 AM IST

ಬಿಗ್‌ಬಾಸ್ ಮನೆಯಿಂದ 13ನೇ ವಾರದಲ್ಲಿ ಸೂರಜ್ ಸಿಂಗ್ ಮತ್ತು ಮಾಳು ನಿಪನಾಳ ಹೊರಬಂದಿದ್ದಾರೆ. ಸ್ಪಂದನಾ ಸೋಮಣ್ಣ ಅವರಿಗಿಂತ ಮಾಳು ಹೆಚ್ಚು ಯೋಗ್ಯರಾಗಿದ್ದರೂ ಅವರನ್ನು ಉಳಿಸಿಕೊಳ್ಳದ ಕಾರಣ, ನೆಟ್ಟಿಗರು ಕಲರ್ಸ್ ಕನ್ನಡ ವಾಹಿನಿಯನ್ನು ಟ್ರೋಲ್ ಮಾಡುತ್ತಿದ್ದಾರೆ.

PREV
15
ನೆಟ್ಟಿಗರಿಂದ ಟ್ರೋಲ್

13ನೇ ವಾರದ ಅಂತ್ಯಕ್ಕೆ ಬಿಗ್‌ಬಾಸ್ ಮನೆಯಿಂದ ಸ್ಪರ್ಧಿಗಳಾದ ಸೂರಜ್ ಸಿಂಗ್‌ ಮತ್ತು ಮಾಳು ನಿಪನಾಳ ಹೊರ ಬಂದಿದ್ದಾರೆ. ಈ ಇಬ್ಬರು ಸ್ಪರ್ಧಿಗಳು ಹೊರ ಹೋಗಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆ ಶುರುವಾಗಿದೆ. ಅದರಲ್ಲೂ ಮಾಳು ಎಲಿಮಿನೇಟ್ ಆಗಿದ್ದಕ್ಕೆ ನೆಟ್ಟಿಗರು ಕಲರ್ಸ್ ಕನ್ನಡ ವಾಹಿನಿಯನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ.

25
ಇಬ್ಬರಲ್ಲಿ ಯಾರು ಯೋಗ್ಯರು?

ಶನಿವಾರ ಸೂರಜ್ ಸಿಂಗ್ ಬಿಗ್‌ಬಾಸ್ ಮನೆಗೆ ವಿದಾಯ ಹೇಳಿದ್ದರು. ಭಾನುವಾರ ಅಂತಿಮವಾಗಿ ಮಾಳು ನಿಪನಾಳ ಮತ್ತು ಸ್ಪಂದನಾ ಸೋಮಣ್ಣ ನಡುವೆ ಯಾರು ಮನೆಯಲ್ಲಿ ಉಳಿಯಬೇಕೆಂದು ಸ್ಪರ್ಧಿಗಳನ್ನು ಬಿಗ್‌ಬಾಸ್ ಕೇಳುತ್ತಾರೆ. ಇದಕ್ಕೆ ಧನುಷ್ ಮತ್ತು ಕಾವ್ಯಾ ಹೊರತುಪಡಿಸಿ ಉಳಿದೆಲ್ಲಾ ಸ್ಪರ್ಧಿಗಳು ಇಬ್ಬರಲ್ಲಿ ಮಾಳು ಮನೆಯಲ್ಲಿ ಉಳಿಯಲು ಯೋಗ್ಯರು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅಂತಿಮವಾಗಿ ಸ್ಪಂದನಾ ಸೋಮಣ್ಣ ಸೇವ್ ಆಗ್ತಾರೆ.

35
ಯಾರು ಉತ್ತಮರು?

ಇವರಿಬ್ಬರ ನಡುವೆ ಯಾರು ಉತ್ತಮರು ಅಂದ್ರೆ ಮಾಳು ಆಗ್ತಾರೆ. ಆದ್ರೆ ಬಿಗ್‌ಬಾಸ್ ಮಾತ್ರ ಸ್ಪಂದನಾ ಅವರನ್ನು ಉಳಿಸಿಕೊಂಡಿದ್ದಾರೆ. ಇಷ್ಟು ದಿನ ನ್ಯಾಯಸಮ್ಮತವಾಗಿ ನಡೆಯುತ್ತಿದ್ದ ಶೋ ಕೊನೆ ವಾರದಲ್ಲಿ ಅನ್ಯಾಯ ಮಾಡ್ತಿದೆ ಎಂದು ವೀಕ್ಷಕರು ತೀವ್ರ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಏನು ಮಾಡದೇ ಕೇವಲ ಟಾಸ್ಕ್ ಬುಕ್ ಓದಿಕೊಂಡು ಉಳಿದ ಸ್ಪಂದನಾಗೆ ಶುಭಾಶಯಗಳು ಎಂಬ ಪೋಸ್ಟ್‌ಗಳು ವೈರಲ್ ಆಗುತ್ತಿವೆ.

45
ಕಲರ್ಸ್ ಕನ್ನಡ ಮಗಳು

ಇನ್ನು ಈ ಹಿಂದೆ ಸ್ಪಂದನಾ ಸೋಮಣ್ಣ ಅವರು ಕಲರ್ಸ್ ಕನ್ನಡ ವಾಹಿನಿಯ ನಟಿ. ಹಾಗಾಗಿ ಅವರನ್ನು ಮೇಲ್ಕೆತ್ತುವ ಪ್ರಯತ್ನಗಳು ನಡೆದಿರುವ ಬಗ್ಗೆ ಅನುಮಾನ ಜಾನ್ವಿ ವ್ಯಕ್ತಪಡಿಸಿದ್ದರು. ಈ ಬಗ್ಗೆ ವೀಕೆಂಡ್ ಸಂಚಿಕೆಯಲ್ಲಿಯೂ ಸುದೀಪ್ ದೀರ್ಘವಾಗಿ ಚರ್ಚೆ ನಡೆಸಿದ್ದರು. ಈ ಚರ್ಚೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸ್ಪಂದನಾ ಸೋಮಣ್ಣ ಕಲರ್ಸ್ ಕನ್ನಡ ಮಗಳು ಎಂಬ ಮಾತುಗಳು ಕೇಳಿ ಬಂದಿದ್ದವು.

ಇದನ್ನೂ ಓದಿ: BBK 12: ಬದಲಾಯ್ತು ಕ್ಯಾಪ್ಟನ್ ಗಿಲ್ಲಿ ನಟನ ನಡವಳಿಕೆ, ಕನಿಕರವೇ ಇಲ್ವಾ? ಬಯಲಾಯ್ತು ಅಸಲಿ ಮುಖ!

55
ಜಾನ್ವಿ ಹೇಳಿದ ಮಾತು ಸತ್ಯ

ಸ್ಪಂದನಾ ಸೇವ್ ಆಗಿರೋದನ್ನು ಗಮನಿಸಿದ ನೆಟ್ಟಿಗರು ಜಾನ್ವಿ ಹೇಳಿದ ಮಾತು ಸತ್ಯವಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಮಾಳು ಮನೆಯಲ್ಲಿ ಆಟದ ಜೊತೆಯಲ್ಲಿ ಅಡುಗೆ, ಕ್ಲೀನಿಂಗ್ ಕೆಲಸಗಳನ್ನು ಮಾಡುತ್ತಿದ್ದರು. ಆದ್ರೆ ಸ್ಪಂದನಾ ಯಾವ ಆಟವನ್ನು ಆಡಿಲ್ಲ. ಅಡುಗೆ ಮಾಡಿದ್ದನ್ನು ಸಹ ನಾವು ನೋಡಿಲ್ಲ ಎಂದು ನೆಟ್ಟಿಗರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: BBK 12: ಗಿಲ್ಲಿ ನಟನ ಮೇಲೆ ರಕ್ಷಿತಾಗೆ ಆಯ್ತು ಕ್ರಶ್? ಬಾಯ್ತಪ್ಪಿ ಸತ್ಯ ಹೇಳಿದ ಪುಟ್ಟಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories