BBK 12: ಗಿಲ್ಲಿ ನಟನ ಮೇಲೆ ರಕ್ಷಿತಾಗೆ ಆಯ್ತು ಕ್ರಶ್? ಬಾಯ್ತಪ್ಪಿ ಸತ್ಯ ಹೇಳಿದ ಪುಟ್ಟಿ

Published : Dec 29, 2025, 08:53 AM IST

ಬಿಗ್‌ಬಾಸ್ ಮನೆಯಲ್ಲಿ 'ಗೌರಿ ಕಲ್ಯಾಣ' ಕಲಾವಿದರ ಮುಂದೆ ರಕ್ಷಿತಾ ಶೆಟ್ಟಿ, ತನಗೆ ಗಿಲ್ಲಿ ನಟನಂತೆಯೇ ಸಂಗಾತಿ ಬೇಕೆಂದು ಬಾಯ್ತಪ್ಪಿ ಹೇಳಿದ್ದಾರೆ. ನಂತರ ಅವರು ಕೇವಲ ಬೆಸ್ಟ್ ಫ್ರೆಂಡ್ಸ್ ಎಂದು ಸ್ಪಷ್ಟನೆ ನೀಡಿದರೂ, ಗಿಲ್ಲಿ ನಟ ತಾನು ಕಮಿಟೆಡ್ ಎಂದು ಹೇಳಿ ಚರ್ಚೆಗೆ ಅಂತ್ಯ ಹಾಡಿದ್ದಾರೆ.

PREV
17
ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ

ಸೀಕ್ರೆಟ್ ರೂಮ್‌ನಿಂದ ಬಂದ ನಂತರ ಗಿಲ್ಲಿ ಜೊತೆಗಿನ ರಕ್ಷಿತಾ ಬಾಂಡಿಂಗ್ ನೋಡಿದ ನೆಟ್ಟಿಗರು ಇಬ್ಬರ ನಡುವೆ ಪ್ರೇಮದ ಹೂ ಅರಳಿದೆಯಾ ಎಂದು ಮಾತನಾಡಿಕೊಳ್ಳುತ್ತಿದ್ರು. ಈ ಸಂಬಂಧ ಕೆಲ ವಿಡಿಯೋ ಕ್ಲಿಪ್‌ಗಳು ಸಹ ವೈರಲ್ ಅಗಿದ್ದವು. ಈ ವೈರಲ್ ಕ್ಲಿಪ್‌ನಲ್ಲಿ ಗಿಲ್ಲಿ ಪಕ್ಕದಲ್ಲಿಯೇ ರಕ್ಷಿತಾ ಕುಳಿತುಕೊಳ್ಳುತ್ತಿದ್ದರು.

27
ಅಂದ್ಕೊಂಡಿದ್ದು ನಿಜ ಆಯ್ತಾ?

ಈ ವೈರಲ್ ಕ್ಲಿಪ್ ನೋಡಿದ ವೀಕ್ಷಕರು, ರಕ್ಷಿತಾ ಶೆಟ್ಟಿಗೆ ನಿಧಾನವಾಗಿ ಗಿಲ್ಲಿ ನಟನ ಮೇಲೆ ಆಕರ್ಷಣೆಯಾಗುತ್ತಿದೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಇದೀಗ ಈ ಸಂಬಂಧ ರಕ್ಷಿತಾ ಶೆಟ್ಟಿ ಮಾತೊಂದನ್ನು ಹೇಳಿದ್ದು, ವೀಕ್ಷಕರು ನಾವು ಅಂದ್ಕೊಂಡಿದ್ದು ನಿಜ ಎಂದು ಕಮೆಂಟ್ ಮಾಡುತ್ತಿದ್ದಾರೆ.

37
ಬಾಯ್ತಪ್ಪಿ ಸತ್ಯ ಹೇಳಿದ ಪುಟ್ಟಿ

ಬಿಗ್‌ಬಾಸ್ ಮನೆಗೆ 'ಗೌರಿ ಕಲ್ಯಾಣ' ಧಾರಾವಾಹಿಯ ಕಲಾವಿದರು ಆಗಮಿಸಿದ್ದು, ಈ ಸಂದರ್ಭದಲ್ಲಿ ಮದುವೆ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದರು. ಮನೆಗೆ ಆಗಮಿಸಿದ್ದ ಅತಿಥಿ ಮೋನಿಕಾ ಜೊತೆ ಗಿಲ್ಲಿ ನಟ ತಮಾಷೆ ಮಾಡುತ್ತಿದ್ದರು. ಈ ವೇಳೆ ರಕ್ಷಿತಾ ಶೆಟ್ಟಿ ಬಾಯ್ತಪ್ಪಿ ಸತ್ಯ ಹೇಳಿ, ನಂತರ ತಮ್ಮ ಮಾತುಗಳಿಗೆ ತೇಪೆ ಹಚ್ಚುವ ಕೆಲಸವನ್ನು ಮಾಡಿದ್ದಾರೆ.

47
ಸಂಗಾತಿ ಹೇಗಿರಬೇಕು ?

ಗೌರಿ ಕಲ್ಯಾಣ ಸೀರಿಯಲ್ ಕಲಾವಿದರು ತಮ್ಮ ಸಂಗಾತಿ ಹೇಗಿರಬೇಕೆಂದು ಹೇಳುತ್ತಿರುತ್ತಾರೆ. ನಾಯಕ ನಟನನ್ನು ಉದ್ದೇಶಿಸಿ ಮಾತನಾಡಿದ ಅನುಪಮಾ ಗೌಡ, ನಿಮ್ಮೊಂದಿಗೆ ಮೂವರು ನಾಯಕಿಯರು ಮತ್ತು ಇಲ್ಲಿ ರಕ್ಷಿತಾ ಶೆಟ್ಟಿಯನ್ನು ಪರಿಗಣಿಸಿ ನಿಮ್ಮ ಆಯ್ಕೆ ಯಾರು ಎಂದು ತಿಳಿಸುವಂತೆ ಕೇಳುತ್ತಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ರಕ್ಷಿತಾ ಶೆಟ್ಟಿ, ನನ್ನನ್ನು ಈ ಆಟಕ್ಕೆ ಪರಿಗಣಿಸಬೇಡಿ ಅಂತಾರೆ.

57
ಗಿಲ್ಲಿ ಹಾಗಿರಬೇಕು ಎಂದ ರಕ್ಷಿತಾ ಶೆಟ್ಟಿ

ರಕ್ಷಿತಾ ಶೆಟ್ಟಿ ಮಾತಿಗೆ ಉತ್ತರಿಸಿದ ಅನುಪಮಾ ಗೌಡ, ಹಾಗಾದ್ರೆ ನೀನು ಮದುವೆ ಹುಡುಗ ಹೇಗಿರಬೇಕು ಎಂದು ಕೇಳುತ್ತಾರೆ. ಇದಕ್ಕೆ ಒಂದು ಕ್ಷಣವೂ ಯೋಚಿಸದೇ ಗಿಲ್ಲಿ ಹಾಗಿರಬೇಕು ಎಂದು ರಕ್ಷಿತಾ ಶೆಟ್ಟಿ ಹೇಳುತ್ತಾರೆ. ಈ ಮಾತು ಕೇಳುತ್ತಿದ್ದಂತೆ ಮನೆಮಂದಿಯೆಲ್ಲಾ ಓ... ಎಂದು ತಮಾಷೆ ಮಾಡುತ್ತಾರೆ.

67
ಬೆಸ್ಟ್ ಫ್ರೆಂಡ್ಸ್

ಮನೆಯ ಸದಸ್ಯರ ಪ್ರತಿಕ್ರಿಯೆ ಗಮನಿಸಿ ಅಲರ್ಟ್ ಆದ ರಕ್ಷಿತಾ ಶೆಟ್ಟಿ, ಗಿಲ್ಲಿ ಹಾಗಿರಬೇಕು, ಆದ್ರೆ ಗಿಲ್ಲಿ ಅಲ್ಲ. ಗಿಲ್ಲಿ ಮತ್ತು ನಾನು ಬೆಸ್ಟ್ ಫ್ರೆಂಡ್ಸ್ ಎಂದು ತಮ್ಮ ಮಾತುಗಳಿಗೆ ಸ್ಪಷ್ಟನೆ ನೀಡುವ ಪ್ರಯತ್ನವನ್ನು ಮಾಡುತ್ತಾರೆ. ಈ ವೇಳೆ ಎಂಟ್ರಿ ಕೊಟ್ಟ ಕಾವ್ಯಾ, ಯಾಕೆ ಗಿಲ್ಲಿ ಆಗಬಾರದು ಎಂದು ಪ್ರಶ್ನಿಸುತ್ತಾರೆ

ಇದನ್ನೂ ಓದಿ: BBK 12: ಕ್ಯಾಪ್ಟನ್ ಗಿಲ್ಲಿ ನಟ ಹೇಳಿದ ಈ ರೂಲ್ಸ್ ಮನೆಯಲ್ಲಿ ಎಷ್ಟು ಜನ ಫಾಲೋ ಮಾಡ್ತಾರೆ?

77
ನಾನು ಕಮಿಟೆಡ್ ಎಂದ ಗಿಲ್ಲಿ ನಟ

ಇದೆಲ್ಲವನ್ನು ಕೇಳಿಸಿಕೊಂಡ ಗಿಲ್ಲಿ ನಟ, ದಯವಿಟ್ಟು ನನ್ನನ್ನು ಬಿಟ್ಟು ಬಿಡಿ. ನಾನು ಕಮಿಟೆಡ್ ಎಂದು ಹೇಳಿ ಕೈ ಮುಗಿಯುತ್ತಾರೆ. ಸದ್ಯ ರಕ್ಷಿತಾ ಶೆಟ್ಟಿಯವರ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಹಿಂದೆ ಧನುಷ್ ಸಹ ಗಿಲ್ಲಿ ಜೊತೆ ಕಾವ್ಯಾ, ಸ್ಪಂದನಾ ಇರೋದನ್ನು ರಕ್ಷಿತಾ ಸಹಿಸಲ್ಲ ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ: BBK 12: ಬದಲಾಯ್ತು ಕ್ಯಾಪ್ಟನ್ ಗಿಲ್ಲಿ ನಟನ ನಡವಳಿಕೆ, ಕನಿಕರವೇ ಇಲ್ವಾ? ಬಯಲಾಯ್ತು ಅಸಲಿ ಮುಖ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories