ಇಷ್ಟಪಟ್ಟು ಮದುವೆಯಾದ ಹೆಂಡ್ತಿ ಗ್ಯಾಸ್‌ ಸ್ಟವ್‌ ಬಿಡದೆ ತಗೊಂಡೋದ್ಳು: ಕರುಣಾಜನಕ ಸ್ಥಿತಿಯಲ್ಲಿ ಪಾರು ಧಾರಾವಾಹಿ ನಟ!

Published : May 03, 2025, 05:20 PM ISTUpdated : May 05, 2025, 11:57 AM IST

ʼಪಾರುʼ, ʼಯಜಮಾನʼ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿರುವ ಶ್ರೀಧರ್‌ ಅವರೀಗ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ. ಗುರುತು ಸಿಗದಷ್ಟು ಅವರು ಸೊರಗಿ ಹೋಗಿದ್ದಾರೆ. ಅಷ್ಟೇ ಅಲ್ಲದೆ ಆರ್ಥಿಕ ಸಹಾಯಕ್ಕಾಗಿ ಮೊರೆ ಇಟ್ಟಿದ್ದರು. ಈಗ ಪತ್ನಿ ಮಾಡಿದ ಮೋಸದ ಬಗ್ಗೆ ವಿಶ್ವವಾಣಿ ಯುಟ್ಯೂಬ್‌ ಚಾನೆಲ್‌ ಜೊತೆ ಮಾತನಾಡಿದ್ದಾರೆ.  

PREV
15
ಇಷ್ಟಪಟ್ಟು ಮದುವೆಯಾದ ಹೆಂಡ್ತಿ ಗ್ಯಾಸ್‌ ಸ್ಟವ್‌ ಬಿಡದೆ ತಗೊಂಡೋದ್ಳು: ಕರುಣಾಜನಕ ಸ್ಥಿತಿಯಲ್ಲಿ ಪಾರು ಧಾರಾವಾಹಿ ನಟ!

“ನಾನು 30 ವರ್ಷದಿಂದ ಒಬ್ಬನೇ ಇದೀನಿ. ಮದುವೆ ಆಗಿ, 11 ವರ್ಷ ಆಗಿತ್ತು. ಮದುವೆ ಲೈಫ್‌ ಚೆನ್ನಾಗಿತ್ತು. ನಾನು ನಟಿಸುತ್ತಿದ್ದೆ, ಆಕ್ಟಿಂಗ್‌ ಕಲಿಸುತ್ತಿದ್ದೆ. ನನ್ನ ದುಡ್ಡಿನಲ್ಲಿ ಜಾಗ ತಗೊಂಡು, ನನ್ನ ಹೆಸರಿಗೆ ಮಾಡಸ್ತೀನಿ ಅಂತ ಹೇಳಿ ಬೇರೆಯವರ ಹೆಸರಿನಲ್ಲಿ ರಿಜಿಸ್ಟರ್‌ ಮಾಡಿಸಿದ್ದಳು. ಮೊದಲೆಲ್ಲ ನಾನು ಮನೆ ಬಿಟ್ಟು ಹೋಗ್ತೀನಿ ಅಂತ ಅವಳು ಹೇಳಿದರೂ ಕೂಡ, ನಾನು ನಂಬಿರಲಿಲ್ಲ” ಎಂದು ಶ್ರೀಧರ್‌ ಹೇಳಿದ್ದಾರೆ.
 

25

“ಒಂದು ದಿನ ಶೂಟಿಂಗ್‌ಗೆ ಹೋದಾಗ ಅವಳು ಗ್ಯಾಸ್‌ ಸ್ಟೋವ್‌ ಕೂಡ ಬಿಡದೆ ಓಡಿ ಹೋದಳು. ಬೇರೆಯವರಿಗೆ ದುಡ್ಡು ಕೊಟ್ಟಿದ್ದೆ, ಕೊರೊನಾ ಟೈಮ್‌ನಲ್ಲಿ ಅವರು ಆ ದುಡ್ಡು ತಗೊಂಡು ಓಡಿ ಹೋದರು. ಯಜಮಾನಿ ಧಾರಾವಾಹಿ ಕೂಡ ಸಮಸ್ಯೆ ಆಯ್ತು. ಮೂವತ್ತು ವರ್ಷದ ಬಳಿಕ ನನ್ನ ತಾಯಿ ನನ್ನ ನೋಡೋಕೆ ಬಂದಿದ್ದಾರೆ” ಎಂದು ಶ್ರೀಧರ್‌ ಹೇಳಿದ್ದಾರೆ. 
 

35

“ಬೇಜಾರಾದೆಗಲ್ಲ ಊಟ ಬಿಟ್ಟಿದೀನಿ. ಮನಸ್ಸಿಗೂ ಹಚ್ಚಿಕೊಂಡಿದ್ದೆ. ಮೋಶನ್‌ ಆಗ್ತಿಲ್ಲ ಅಂತ ಆಯುರ್ವೇದ ಔ಼ಷಧಿ ತಗೊಂಡಿದ್ದೆ. ಅದನ್ನು ತಗೊಂಡ್ಮೇಲೆ ನನಗೆ ಒಂದು ಮೆಟ್ಟಿಲು ಹತ್ತಿ ನಡೆಯೋಕೆ ಆಗ್ಲಿಲ್ಲ. ನನ್ನ ಸಹಕಲಾವಿದರು ನನ್ನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ವಿಕ್ಟೋರಿಯಾದಲ್ಲಿ ಹದಿನೈದು ದಿನ ಅಡ್ಮಿಟ್‌ ಆದೆ, ಊಟ ಚೆನ್ನಾಗಿ ಮಾಡಿ ಅಂತ ನನಗೆ ಹೇಳಿದರು. ಆದರೆ ಅವರಿಗೆ ಸಮಸ್ಯೆ ಏನು ಅಂತ ಗೊತ್ತಾಗಲೇ ಇಲ್ಲ” ಎಂದು ಶ್ರೀಧರ್‌ ಹೇಳಿದ್ದಾರೆ. 
 

45

“ನನ್ನ ತಾಯಿ ರಾಗಿಗಂಜಿ ಕುಡಿ ಅಂತ ಪದೇ ಪದೇ ಹೇಳ್ತಿದ್ದರು. ರಾಗಿ ಗಂಜಿಯನ್ನು ಎಷ್ಟು ಅಂತ ಕುಡಿಯೋದು? ಅದರಲ್ಲಿ ಏನಿರತ್ತೆ? ಹುಚ್ಚ ಸಿನಿಮಾ ಥರ ನನ್ನ ತಲೆ ಕೂದಲು ಬೋಳಿಸಿ ಈ ರೀತಿ ಮಾಡಿಟ್ಟಿದ್ದಾರೆ. ದೇವರು ನನ್ನ ಕೈಹಿಡಿದ. ಇಲ್ಲಿಗೆ ಬಂದು ಒಳ್ಳೆಯದಾಯ್ತು” ಎಂದು ಶ್ರೀಧರ್‌ ಹೇಳಿದ್ದಾರೆ.
 

55

“ನನ್ನನ್ನು ನೋಡೋಕೆ ತುಂಬ ಜನ ಬರುತ್ತಿದ್ದಾರೆ. ಒಂದೊಂದು ರೂಪಾಯಿ ಕೂಡ ಕೊಡ್ತಿದ್ದಾರೆ. ತುಂಬ ಜನರು ಸಹಾಯ ಮಾಡ್ತಿದ್ದಾರೆ. ಅವರು ಯಾರು ಅಂತ ನನಗೆ ಗೊತ್ತಿಲ್ಲ. ಕಲಾವಿದರಿಂದ ಕಡೆಯಿಂದ ಬೇಡಿಕೆ ಇಟ್ಟಿದ್ದಾರೆ, ಮುಂದೆ ಏನಾಗತ್ತೆ ಅಂತ ನೋಡಬೇಕು” ಎಂದು ಶ್ರೀಧರ್‌ ಹೇಳಿದ್ದಾರೆ. 
 

Read more Photos on
click me!

Recommended Stories