ಸರಿಗಮಪ ವಿಜೇತೆ ಪ್ರಗತಿ ಬಡಿಗೇರ್ SSLCಯಲ್ಲಿ ಉತ್ತೀರ್ಣ: ಪಡೆದ ಅಂಕಗಳು ಹೀಗಿವೆ

Published : May 03, 2025, 03:34 PM ISTUpdated : May 03, 2025, 04:01 PM IST

ಸರಿಗಮಪ ಸೀಸನ್ 19ರ ವಿಜೇತೆ ಪ್ರಗತಿ ಬಡಿಗೇರ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ತಂದೆ ಬಸವರಾಜ್ ಬಡಿಗೇರ್ ಸಾಮಾಜಿಕ ಜಾಲತಾಣದಲ್ಲಿ ಮಗಳ ಅಂಕಪಟ್ಟಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

PREV
15
ಸರಿಗಮಪ ವಿಜೇತೆ ಪ್ರಗತಿ ಬಡಿಗೇರ್ SSLCಯಲ್ಲಿ ಉತ್ತೀರ್ಣ: ಪಡೆದ ಅಂಕಗಳು ಹೀಗಿವೆ

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸಂಗೀತ ರಿಯಾಲಿಟಿ ಶೋ ಸರಿಗಮಪ ಸೀಸನ್ 19ರ ವಿನ್ನರ್ ಪ್ರಗತಿ ಬಡಿಗೇರ್ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾದ ಖುಷಿಯಲ್ಲಿದ್ದಾರೆ. ಮಗಳ ಅಂಕಪಟ್ಟಿಯನ್ನು ಬಸವರಾಜ್ ಬಡಿಗೇರ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

25

ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಪ್ರಗತಿ ಬಡಿಗೇರ್ ಸೀಸನ್ 19ರಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ತಮ್ಮ ಸುಮುಧರ ಗಾಯನದಿಂದ ಇಡೀ ರಾಜ್ಯದ ಗಮನ ಸೆಳೆದಿದ್ದ ಪ್ರಗತಿ ಬಡಿಗೇರ್ ವಿನ್ನರ್ ಆಗಿದ್ದರು.

35

ಸರಿಗಮಪ ಸೀಸನ್‌ 19ರ ವಿನ್ನರ್ ಪಟ್ಟ ಮುಡಿಗೇರಿಸಿಕೊಂಡು ಪ್ರಗತಿ ಬಡಿಗೇರ್ ಗಾಯನದ ಜೊತೆಯಲ್ಲಿ ಓದಿನತ್ತ ಸಹ ಗಮನ ಹರಿಸಿದ್ರು. ಇದೀಗ ಪ್ರಗತಿಯವರ ತಂದೆ ಬಸವರಾಜ್ ಬಡಿಗೇರ್ ಮಗಳ ಅಂಕಪಟ್ಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. 

45

ಪ್ರಗತಿ ಬಡಿಗೇರ್ ಪಡೆದ ಅಂಕಗಳು ಹೀಗಿವೆ.

ಕನ್ನಡ: 109, ಇಂಗ್ಲಿಷ್: 93, ಹಿಂದಿ: 99, ಗಣಿತ: 70, ವಿಜ್ಞಾನ: 78, ಸಮಾಜ ವಿಜ್ಞಾನ: 71 ಅಂಕಗಳನ್ನು ಪಡೆದುಕೊಂಡಿದ್ದಾರೆ. ಪ್ರಗತಿ ಬಡಿಗೇರ್ 625ಕ್ಕೆ ಒಟ್ಟು 520 ಅಂಕಗಳನ್ನು ಗಳಿಸಿದ್ದಾರೆ. ಶೇ.83.2 ಅಂಕಗಳೊಂದಿಗೆ ಪ್ರಗತಿ ಬಡಿಗೇರ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

55

ಪ್ರಗತಿ ಅವರ ತಂದೆ ಬಸವರಾಜ್ ಬಡಿಗೇರ್ ಸಹ ಗಾಯಕರಾಗಿದ್ದು, ಸರಿಗಮಪ ಆಡಿಷನ್ ರೌಂಡ್‌ನಲ್ಲಿ ತಮ್ಮ ಗಾಯನದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇನ್ನು ಪ್ರಗತಿಯ ಇಬ್ಬರು ಪುಟ್ಟ ತಂಗಿಯರು ಸಹ ಹಾಡು ಹಾಡುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories