ಬಿಗ್ಬಾಸ್ 12 ಮುಕ್ತಾಯದ ಹಂತದಲ್ಲಿದ್ದು, ಗಿಲ್ಲಿ ನಟ ಗೆಲ್ಲುತ್ತಾರೆಂಬ ಚರ್ಚೆ ಜೋರಾಗಿದೆ. ಆದರೆ, ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಸ್ಫೋಟಕ ಭವಿಷ್ಯ ನುಡಿದಿದ್ದು, ಈ ಬಾರಿ ಅವರು ವಿನ್ ಆಗಲ್ಲ ಎಂದಿದ್ದಾರೆ. ಈ ಭವಿಷ್ಯವಾಣಿ ಇದೀಗ ಹೊಸ ಸಂಚಲನ ಸೃಷ್ಟಿಸಿದೆ.
ಬಿಗ್ ಬಾಸ್ 12 (Bigg Boss 12) ಇನ್ನೇನು ಒಂದು ತಿಂಗಳಲ್ಲಿಯೇ ಮುಗಿಯಲಿದೆ. ಇದಾಗಲೇ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಗಿಲ್ಲಿ ನಟನೇ ಈ ಬಾರಿಯ ವಿನ್ನರ್ (Bigg Boss 12 winner) ಎಂದು ಹೇಳಲಾಗುತ್ತಿದೆ.
27
ಎಲ್ಲರ ಬಾಯಲ್ಲಿ ಗಿಲ್ಲಿ
ಇದರ ಜೊತೆಗೆ, ಇದಾಗಲೇ ಬಿಗ್ಬಾಸ್ನಿಂದ ಹೊರಕ್ಕೆ ಬಂದಿರುವ ಸ್ಪರ್ಧಿಗಳು, ಮಾಜಿ ಸ್ಪರ್ಧಿಗಳು ಸೇರಿದಂತೆ ಹಲವರ ಬಾಯಲ್ಲಿ ಗಿಲ್ಲಿನಟನ ಹೆಸರೇ ಕೇಳಿಬರುತ್ತಿದೆ. ನನಗೆ ಗಿಲ್ಲಿನಟ ಇಷ್ಟವಿಲ್ಲದಿದ್ದರೂ ಈಗಿನ ಟ್ರೆಂಡ್ ನೋಡಿದ್ರೆ ಅವರೇ ಗೆಲ್ಲೋದು ಎಂದು ಹೇಳಿದವರೂ ಸಾಕಷ್ಟು ಜನ ಇದ್ದಾರೆ.
37
ಜ್ಯೋತಿಷಿ ಸ್ಫೋಟಕ ಮಾಹಿತಿ
ಆದರೆ, ಖ್ಯಾತ ಜ್ಯೋತಿಷಿ ಒಬ್ಬರು ಇದೀಗ ಸ್ಫೋಟಕ ಮಾಹಿತಿ ನೀಡಿದ್ದಾರೆ. X ಖಾತೆಯಲ್ಲಿ ಅವರು ಬರೆದುಕೊಂಡಿರುವ ವಿಷಯ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಬಾರಿಯ ಬಿಗ್ಬಾಸ್ ಗೆಲ್ಲೋದು ಗಿಲ್ಲಿ ನಟ ಅಲ್ಲ ಎಂದು ಅವರು ಹೇಳಿದ್ದಾರೆ. ಅವರೇ ಖ್ಯಾತಿ ಜ್ಯೋತಿಷಿ ಪ್ರಶಾಂತ್ ಕಿಣಿ.
ಈ ಹಿಂದೆ ಅವರು ಗಿಲ್ಲಿ ನಟ ಬಿಗ್ಬಾಸ್ ಫೈನಲ್ಸ್ ತಲುಪುತ್ತಾರೆ ಎಂದಿದ್ದರು. ಅದರಂತೆಯೇ ಈಗಿನ ಹವಾ ನೋಡಿದ್ರೆ ಗಿಲ್ಲಿ ಫೈನಲ್ ತಲುಪುವಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಈಗಿನ ಭವಿಷ್ಯ ಮಾತ್ರ ಗಿಲ್ಲಿ ಅಭಿಮಾನಿಗಳ ನಿದ್ದೆ ಗೆಡಿಸಿದೆ.
57
ಗೆಲ್ಲುವವರು ಯಾರು?
ಈ ಬಾರಿಯ ಬಿಗ್ಬಾಸ್ ಗೆಲ್ಲುವುದು ಓರ್ವ ಮಹಿಳೆ ಎಂದಿದ್ದಾರೆ. ಹಾಗಿದ್ದರೆ ಆಕೆ ರಕ್ಷಿತಾ ಶೆಟ್ಟಿನೋ, ಅಶ್ವಿನಿ ಗೌಡನೋ ಅಥವಾ ಕಾವ್ಯಾ ಶೈವನೋ ಎನ್ನುವ ಚರ್ಚೆ ಶುರುವಾಗಿದೆ. ಇದನ್ನು ಬಿಟ್ಟರೆ ಚೈತ್ರಾ ಕುಂದಾಪುರ ಮತ್ತು ಸ್ಪಂದನಾ ಕೂಡ ಇದ್ದಾರೆ.
67
ಹಲವು ಭವಿಷ್ಯ ನಿಜ!
ಅಂದಹಾಗೆ, ಪ್ರಶಾಂತ್ ಕಿಣಿ ಅವರು ಇದಾಗಲೇ ಹಲವಾರು ಭವಿಷ್ಯ ನುಡಿದಿದ್ದು, ಈ ಪೈಕಿ ಹಲವು ನಿಜ ಕೂಡ ಆಗಿದೆ. ದಕ್ಷಿಣ ಕನ್ನಡ ಮೂಲದ ಖ್ಯಾತ ಜ್ಯೋತಿಷಿ ಆಗಿರುವ ಪ್ರಶಾಂತ್ ಕಿಣಿಯವರು 2023ರ ಜು. 5ರಂದು ಒಂದು ಟ್ವೀಟ್ ಮಾಡಿ ದೆಹಲಿ ಮುಖ್ಯಮಂತ್ರಿಯಾಗಿದ್ದ ಅರವಿಂದ ಕೇಜ್ರಿವಾಲ ಅವರ ಭವಿಷ್ಯ ನುಡಿದಿದ್ದರು. ಅದು ನಿಜವಾಗಿತ್ತು.
77
ದೆಹಲಿ ಸ್ಫೋಟದ ಭವಿಷ್ಯ
ಮಾತ್ರವಲ್ಲದೇ ದೆಹಲಿಯಲ್ಲಿ ಈಚೆಗೆ ನಡೆದ ಬಾಂಬ್ ಬ್ಲಾಸ್ಟ್ ಬಗ್ಗೆಯೂ ಅವರು ಮೊದಲೇ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು. ಅದು ಕೂಡ ನಿಜವಾಗಿತ್ತು. ಇದೀಗ ಇನ್ನೊಂದು ತಿಂಗಳಿನಲ್ಲಿ ಅವರ ಈ ಭವಿಷ್ಯದ ಬಗ್ಗೆ ನಿಜಾಂಶ ತಿಳಿಯಲಿದೆ.