Bigg Boss Kannada Season 12: ಖ್ಯಾತ ನಟ ವಿ ರವಿಚಂದ್ರನ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 12 ಶೋಗೆ ಆಗಮಿಸಿದ್ದಾರೆ. ರಾಶಿಕಾ ಶೆಟ್ಟಿ, ವಿ ರವಿಚಂದ್ರನ್ ನಟನೆಯ ಪ್ಯಾರ್ ಸಿನಿಮಾ ಪ್ರಚಾರಕ್ಕೆಂದು ಅವರು ದೊಡ್ಮನೆಗೆ ಬಂದಿದ್ದಾರೆ. ಆ ವೇಳೆ ಗಿಲ್ಲಿ ನಟ ತಮ್ಮ ಲವ್‌ಸ್ಟೋರಿ ಬಗ್ಗೆ ಮಾತನಾಡಿದ್ದಾರೆ.
ಸಿನಿಮಾ ಹೆಸರು ಪ್ಯಾರ್ ಎಂದಿದೆ. ಹೀಗಾಗಿ ಸ್ಪರ್ಧಿಗಳೆಲ್ಲರೂ ತಮ್ಮ ಲವ್‌ಸ್ಟೋರಿ ಬಗ್ಗೆ ಮಾತನಾಡಿದ್ದಾರೆ. ಅಂದಹಾಗೆ ಅಲ್ಲಿದ್ದವರಲ್ಲಿ, ಮಾಳು ನಿಪನಾಳ, ಚೈತ್ರಾ ಕುಂದಾಪುರ, ರಜತ್ ಹಾಗೂ ರಘು, ಧನುಷ್ ಅವರದ್ದೆಲ್ಲವೂ ಲವ್ ಮ್ಯಾರೇಜ್. ಸೂರಜ್ ಸಿಂಗ್, ರಾಶಿಕಾ ಶೆಟ್ಟಿ, ಸ್ಪಂದನಾ ಸೋಮಣ್ಣ, ಕಾವ್ಯ ಶೈವ ಅವರು ಸಿಂಗಲ್ ಆಗಿದ್ದು, ಇವರದ್ದು ಲವ್ ಸ್ಟೋರಿಯಿದೆಯೇ? ಏನಾದರೂ ಹೇಳುತ್ತಾರಾ ಎಂದು ಕಾದು ನೋಡಬೇಕಿದೆ.
25
ಗಿಲ್ಲಿ ನಟನಿಗೂ ಲವ್‌ಸ್ಟೋರಿಯೂ ಇದೆ
ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಕಾಲೆಳೆದುಕೊಂಡ, ಸ್ಥಳದಲ್ಲೇ ಕಾಮಿಡಿ ಮಾಡುವ ಗಿಲ್ಲಿ ನಟ ಯಾವಾಗಲೂ ಕಾವು ಕಾವು, ನನ್ನ ಅತ್ತೆ ಮಗಳು ಎಂದೆಲ್ಲ ಕಾವ್ಯ ಶೈವರನ್ನು ನೋಡಿ ರೇಗಿಸುತ್ತಿರುತ್ತಾರೆ. ಇದನ್ನು ಕಾವ್ಯ ವಿರೋಧಿಸುತ್ತಲೇ ಇರುತ್ತಾರೆ. ಅಂದಹಾಗೆ ಗಿಲ್ಲಿ ನಟನಿಗೂ ಕ್ರಶ್ ಆಗಿತ್ತಂತೆ, ಲವ್‌ಸ್ಟೋರಿಯೂ ಇದೆಯಂತೆ.
35
2-3 ವರ್ಷದಲ್ಲಿ ಮದುವೆ
ಇನ್ನು ಎರಡು-ಮೂರು ವರ್ಷ ಬಿಟ್ಟು ಮದುವೆ ಆಗ್ತೀನಿ ಎಂದು ದೊಡ್ಮನೆಯಲ್ಲಿ ಹೇಳಿರುವ ಗಿಲ್ಲಿ ನಟ ಅವರು ತನ್ನ ಲವ್‌ಸ್ಟೋರಿ ಯಾಕೆ ಅಂತ್ಯ ಆಯ್ತು? ನಿಜಕ್ಕೂ ಏನಾಯ್ತು ಎನ್ನೋದನ್ನು ಎಲ್ಲರ ಮುಂದೆ ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು, ಇಂದಿನ ಎಪಿಸೋಡ್‌ನಲ್ಲಿ ಪ್ರಸಾರ ಆಗುವ ಸಾಧ್ಯತೆ ಇದೆ. 24/7 ಲೈವ್‌ನಲ್ಲಿ ಈ ವಿಷಯ ಗೊತ್ತಾಗಿದೆ.
ಗಿಲ್ಲಿ ನಟ ಅವರು ಮಾತನಾಡಲು ರೆಡಿ ಆಗುತ್ತಿದ್ದಾಗಲೇ ರವಿಚಂದ್ರನ್ ಅವರು, “ನಿನಗೆ ದಿನಕ್ಕೊಂದು ಆಗುತ್ತಿರುತ್ತದೆ” ಎಂದು ಕಾಮಿಡಿ ಮಾಡಿದ್ದರು. “ನಮ್ಮ ಬಸ್‌ಸ್ಟಾಪ್‌ನಲ್ಲಿ ಒಂದು ಹುಡುಗಿಯ ಅರ್ಧ ಮುಖ ಕಾಣಿಸಿತು, ಬಸ್‌ನಲ್ಲಿ ಸಿಕ್ಕಾಪಟ್ಟೆ ರಶ್ ಇತ್ತು, ಮಳವಳ್ಳಿ ಬಸ್ ನಿಲ್ಲಿಸಿದ ತಕ್ಷಣ ಮುಂದಕ್ಕೆ ಹೋಗಿ ನಿಂತೆ, ಆಮೇಲೆ ನಾನು ಅವಳ ಮುಖ ನೋಡಿ ಇವಳೇ ಅಂತ ಫಿಕ್ಸ್ ಆದೆ” ಎಂದಿದ್ದಾರೆ.
55
ಪ್ರೇಮ ಕಥೆ ಅಂತ್ಯ ಹೇಗಾಯ್ತು?
ಆಮೇಲೆ ಅವಳ ಕಾಲೇಜು ಯಾವುದು, ಊರು ಯಾವುದು? ಯಾವ ಬಸ್‌ಸ್ಟಾಪ್ ಎಂದೆಲ್ಲ ಹುಡುಕಿಕೊಂಡೆ. ಹೀಗೆ ಒಂದು ವಾರ ಕಳೆದಿತ್ತು. ಆಮೇಲೆ ಒಂದು ದಿನ ಸೀಟ್ ಮೇಲೆ ಬುಕ್ ಇಟ್ಟು ರಿಸರ್ವ್ ಮಾಡಿದೆ. ಆಮೇಲೆ ಅವಳು ಕೂರೋಕೆ ಹೋದಳು. ನಂದು ಸೀಟ್ ಎಂದೆ, ಆಗ ಅವಳು, “ಆಯ್ತು ಬಿಡಣ್ಣ” ಎಂದಳು. ಅಲ್ಲಿಗೆ ನನಗೆ ತುಂಬ ಬೇಸರ ಆಗಿ, ಹೀಗೆಲ್ಲ ಕರೆಯಬೇಡ ಎಂದು ಹೇಳು ಅವಳಿಗೆ ಅಂತ ಪಕ್ಕದಲ್ಲೇ ಕೂತಿದ್ದ ನನ್ನ ಕ್ಲಾಸ್‌ಮೇಟ್ ಹುಡುಗಿಗೆ ಹೇಳಿದೆ” ಎಂದಿದ್ದಾರೆ.