ಚಂದನ್ ಶೆಟ್ಟಿ ಅವರಿಂದ ವಿಚ್ಛೇದನ ಪಡೆದ ನಂತರ, ನಿವೇದಿತಾ ಗೌಡ ತಮ್ಮ ತುಂಡುಡುಗೆಯ ರೀಲ್ಸ್‌ಗಳಿಂದ ಟ್ರೋಲ್ ಆಗುತ್ತಿದ್ದಾರೆ. ಆದರೆ, ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಮಗೆ ಬಿಗ್ಬಾಸ್ನಲ್ಲಿ ಅವಕಾಶ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ಮಾತನಾಡಿದ್ದಾರೆ.
ನಿವೇದಿತಾ ಗೌಡ (Nivedita Gowda) ಎಂದಾಕ್ಷಣ ಬಹುತೇಕ ಎಲ್ಲರ ಕಣ್ಣಮುಂದೆ ತುಂಡುಡುಗೆಯ, ಧಾರಾಳ ದೇಹ ಪ್ರದರ್ಶನ ಮಾಡಿಕೊಂಡು ರೀಲ್ಸ್ ಮಾಡುವ ಯುವತಿಯೇ ಕಣ್ಮುಂದೆ ಬರುವುದು ಉಂಟು. ಚಂದನ್ ಶೆಟ್ಟಿ ಅವರ ಜೊತೆ ಇಂಥ ಹುಡುಗಾಟದಲ್ಲಿಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಕೊನೆಗೆ, ಡಿವೋರ್ಸ್ ಪಡೆದುಕೊಂಡು ಈಗ ರೀಲ್ಸ್‌ನಲ್ಲಿ ಇನ್ನೂ ಒಂದು ಹಂತಕ್ಕೆ ಮೇಲೆ ಹೋಗಿದ್ದಾರೆ ಬಿಗ್‌ಬಾಸ್ (Bigg Biss) ಖ್ಯಾತಿಯ, ಬಾರ್ಬಿ ಡಾಲ್ ಎಂದೇ ಫೇಮಸ್ ಆಗಿರೋ ನಿವೇದಿತಾ ಗೌಡ.
27
ಐಷಾರಾಮಿ ಜೀವನ
ಈಕೆಯ ಐಷಾರಾಮಿ ಜೀವನ ಮತ್ತು ತಮ್ಮ ಸಿಂಪಲ್ ಜೀವನಕ್ಕೆ ತಾಳೆಯಾಗಿಲ್ಲ ಎನ್ನುವ ಬಗ್ಗೆ ಮಾಜಿ ಪತ್ನಿಯ ಕುರಿತು ಸೌಮ್ಯವಾಗಿಯೇ, ತುಂಬಾ ತಾಳ್ಮೆಯಿಂದ, ಆಕೆಯ ಪರ ವಹಿಸಿಕೊಂಡೇ ಮಾತನಾಡುತ್ತಿದ್ದಾರೆ ಚಂದನ್ ಶೆಟ್ಟಿ. ಈ ಮೂಲಕ ತಮ್ಮ ಡಿವೋರ್ಸ್‌ಗೆ ಏನು ಕಾರಣ ಎನ್ನುವುದನ್ನು ಅವರು ಪರೋಕ್ಷವಾಗಿಯೇ ನುಡಿದಿದ್ದಾರೆ. ಅದೇ ಇನ್ನೊಂದೆಡೆ, ಡಿವೋರ್ಸ್ ಬಳಿಕ ನಿವೇದಿತಾ ಗೌಡ ಅವರ ವೇಷಭೂಷಣ ನೋಡಿ ಟ್ರೋಲ್ ಆಗ್ತಿರೋ ಬಗ್ಗೆಯೂ ಚಂದನ್ ಶೆಟ್ಟಿ (Chandan Shetty) ಬೇಸರ ವ್ಯಕ್ತಪಡಿಸಿದ್ದು ಇದೆ.
37
ಟ್ರೋಲ್ ಬಗ್ಗೆ ನಿವೇದಿತಾ
ಆದರೆ ಯಾರು ಏನೇ ಟ್ರೋಲ್ ಮಾಡಲಿ, ಟ್ರೋಲ್‌ನಿಂದಲೇ ತಮ್ಮ ಜೀವನ ಸಾಗುವುದು ಎಂದು ತಿಳಿದುಕೊಂಡಿರೋ ಒಂದಷ್ಟು ಮಂದಿ ಇದ್ದಾರೆ. ಅದರಲ್ಲಿಯೂ ಈ ಬಣ್ಣದ ಲೋಕದಲ್ಲಿ ಕೆಟ್ಟ ಕಮೆಂಟ್‌ಗಳಿಂದಲೇ ಫೇಮಸ್ ಆದರೆ ಅವರಿಗೆ ಭರ್ಜರಿ ಡಿಮಾಂಡ್ ಇರುವುದೂ ತಿಳಿದಿದೆ. ಅದೇ ಸತ್ಯವನ್ನು ನಿವೇದಿತಾ ಗೌಡ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ತುಂಡುಡುಗೆಯ ರೀಲ್ಸ್‌ಗೆ ತುಂಬಾ ಕೆಟ್ಟ ಕಮೆಂಟ್ಸ್ ಬರುತ್ತವೆ, ಇದೇ ಕಾರಣಕ್ಕೆ ನಿಮ್ಮನ್ನು ಚಂದನ್ ಶೆಟ್ಟಿ ಬಿಟ್ಟಿರುವುದು ಎಂದು ಹೇಳಲಾಗುತ್ತದೆ. ಇದಕ್ಕೆ ನಿಮ್ಮ ಅನಿಸಿಕೆ ಏನು ಎನ್ನುವ ಪ್ರಶ್ನೆಗೆ ನಟಿ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ.
57
ಬಿಗ್‌ಬಾಸ್‌ಗೆ ಆಫರ್
ಯಾರು ಏನೇ ಹೇಳಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಮದುವೆಗಿಂತಲೂ ಮುಂಚೆಯೇ ಇಂಥ ಹಲವು ರೀಲ್ಸ್ ಮಾಡ್ತಿದ್ದೆ. ಅಂಥ ರೀಲ್ಸ್ ನೋಡಿಯೇ ನನಗೆ Bigg Bossನಂಥ ಷೋಗೆ ಆಫರ್ ಸಿಕ್ಕಿದ್ದು ಎನ್ನುವ ಮೂಲಕ, ಸೀದಾ ಸಾದಾ ಹುಡುಗಿಯಾಗಿದ್ದು ಒಳ್ಳೆಯ ರೀತಿಯಲ್ಲಿ ರೀಲ್ಸ್ ಮಾಡಿಕೊಂಡಿದ್ದರೆ ಯಾರೂ ತಮ್ಮತ್ತ ನೋಡುತ್ತಿರಲಿಲ್ಲ ಎನ್ನುವುದನ್ನು ಧೈರ್‍ಯವಾಗಿ ಹೇಳಿಕೊಂಡಿದ್ದಾರೆ.
67
ಬಿಗ್‌ಬಾಸ್ ಸತ್ಯ?
ಅಷ್ಟಕ್ಕೂ ಬಿಗ್‌ಬಾಸ್ ಭಾಷೆ ಯಾವುದೇ ಇರಲಿ, ಅಲ್ಲಿ ಸೆಲೆಕ್ಟ್ ಆಗುವ ಸ್ಪರ್ಧಿಗಳ ಪೈಕಿ ಹಲವರು ಎಂಥವರು, ಯಾವ ಹಿನ್ನೆಲೆ ಉಳ್ಳವರು ಎನ್ನುವುದು ಈಗೇನೂ ಗುಟ್ಟಾಗಿ ಉಳಿದಿಲ್ಲ. ಅದರ ನಡುವೆಯೇ ಇದೀಗ ನಿವೇದಿತಾ ಗೌಡ ಅವರ ಈ ಮಾತು ಕೇಳಿ ನೆಟ್ಟಿಗರು ಸತ್ಯ ನುಡಿದ ನಿಮ್ಮನ್ನು ಮೆಚ್ಚಿದೆ ಕಣಮ್ಮ ಎನ್ನುತ್ತಿದ್ದಾರೆ.
77
ಯಾಕೆ ಉತ್ತರ ಕೊಡಬೇಕು?
ನಾನು ಹಾಕುವ ಪೋಸ್ಟ್‌ಗಳು ನನಗೆ ಇಷ್ಟ. ಇದಕ್ಕೂ ನನ್ನ ಮದುವೆಗೂ ತಾಳೆ ಹಾಕಿದರೆ ನಾನು ಏನೂ ಮಾಡಲು ಆಗುವುದಿಲ್ಲ. ನನಗೆ ಅವುಗಳಲ್ಲಿ ನಂಬಿಕೆಯೂ ಇಲ್ಲ. ಎಲ್ಲರಿಗೂ ನಾನು ಯಾಕೆ ಉತ್ತರ ಕೊಡಬೇಕು, ನನ್ನ ಜೀವನ ನನ್ನದು ಎನ್ನುವ ಮೂಲಕ ಫೇಮಸ್ ಆಗಬೇಕು ಎಂದರೆ ಇವೆಲ್ಲಾ ಮಾಮೂಲು ಎಂದಿದ್ದಾರೆ. ಅಷ್ಟಕ್ಕೂ ಇತ್ತೀಚಿನ ದಿನಗಳಲ್ಲಿ ಅವರ ಉಡುಗೆ ಮೇಲಕ್ಕೆ ಹೋದಷ್ಟೂ ಟ್ರೋಲ್‌ಗಳು ಹೆಚ್ಚಾಗ್ತಿರೋ ಕಾರಣ ಸಹಜವಾಗಿ ನಿವೇದಿತಾ ಅವರ ರೀಲ್ಸ್‌ಗಳ ವ್ಯೂವ್ಸ್ ಹೆಚ್ಚಾಗುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಗಳಿಕೆಯನ್ನೂ ಮಾಡುತ್ತಿದ್ದಾರೆ.