'ಪ್ರೀತಿ ವಿಶ್ವದ ಭಾಷೆ..' ಕುವೆಂಪು ಆಶಯದಂತೆ ಶುಭ ಶುಕ್ರವಾರ ಮಂತ್ರಮಾಂಗಲ್ಯಕ್ಕೆ ಸಿದ್ಧರಾದ ಗಾಯಕಿ ಸುಹಾನಾ ಸಯ್ಯದ್‌!

Published : Oct 16, 2025, 07:20 PM IST

Suhana Syed Nitin Shivansh Mantra Mangalya 'ಸರಿಗಮಪ' ಖ್ಯಾತಿಯ ಗಾಯಕಿ ಸುಹಾನಾ ಸಯ್ಯದ್ ಅವರು ತಮ್ಮ 16 ವರ್ಷಗಳ ಸ್ನೇಹಿತ, ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಅವರನ್ನು ವರಿಸುತ್ತಿದ್ದಾರೆ. ಈ ಜೋಡಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ಸರಳವಾಗಿ ಅಂತರ್ ಧರ್ಮೀಯ ವಿವಾಹವಾಗುತ್ತಿದ್ದಾರೆ.

PREV
16
ನಾಳೆ ಸುಹಾನಾ ಸಯ್ಯದ್‌ ಮದುವೆ

'ಸರಿಗಮಪ ಸೀಸನ್ 13' ರ ಮೂಲಕ ಕರ್ನಾಟಕದ ಮನೆ ಮಾತಾಗಿದ್ದ ಗಾಯಕಿ ಸುಹಾನಾ ಸೈಯದ್ ಅವರು ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. 16 ವರ್ಷಗಳ ಸುದೀರ್ಘ ಗೆಳೆತನವನ್ನು ಪ್ರೀತಿಗೆ ತಿರುಗಿಸಿರುವ ಸುಹಾನಾ, ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಅವರನ್ನು ವರಿಸುತ್ತಿದ್ದಾರೆ.

26
ಪ್ರೇಮ ಕಾವ್ಯಕ್ಕೆ ಮಂತ್ರ ಮಾಂಗಲ್ಯದ ಆಶಯ

ಸುಹಾನಾ ಮತ್ತು ನಿತಿನ್ ಅವರು ಯಾವುದೇ ಸಾಂಪ್ರದಾಯಿಕ ವೈಭವಕ್ಕೆ ಮಣೆ ಹಾಕದೆ, ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ಸರಳವಾಗಿ ಅಂತರ್ ಧರ್ಮೀಯ ವಿವಾಹವಾಗುತ್ತಿದ್ದಾರೆ. ಈ ಜೋಡಿ ನಾಳೆ (ಶುಕ್ರವಾರ) ಕನಕಪುರದ ಖಾಸಗಿ ರೆಸಾರ್ಟ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

36
ಆಮಂತ್ರಣ ಪತ್ರಿಕೆಯಲ್ಲಿ ಸಂದೇಶ

ಅವರ ವಿವಾಹದ ಆಮಂತ್ರಣ ಕರೆಯೋಲೆಯಲ್ಲಿ "ಪ್ರೀತಿ ವಿಶ್ವದ ಭಾಷೆ" ಎಂದು ಬರೆಯಲಾಗಿದ್ದು, "ನಮ್ಮ ನಡೆ ವಿಶ್ವಮಾನವತ್ವದೆಡೆ" ಎಂಬ ಸಂದೇಶದೊಂದಿಗೆ ಸಹೃದಯಿಗಳನ್ನು ಆಶೀರ್ವದಿಸಲು ಆಹ್ವಾನಿಸಲಾಗಿದೆ. 'ಪ್ರೀತಿ ವಿಶ್ವದ ಭಾಷೆ. ಹೃದಯದಿಂದ ಹೊರಹೊಮ್ಮಿದ ಈ ಪ್ರೇಮ ಕಾವ್ಯ. ದೇವರ ವಿರಚಿತ. ಶ್ರ ಕುವೆಂಪುರವರ ಮಂತ್ರ ಮಾಂಗಲ್ಯದ ಆಶಯದಂತೆ ಜೊತೆಯಾಗಲಿರುವ ಸುಹಾನ ಮತ್ತು ನಿತಿನ್. ನಮ್ಮ ನಡೆ ವಿಶ್ವಮಾನವತ್ವದೆಡೆ ಸಹೃದಯಿಗಳೇ, ಬನ್ನಿ, ಹರಸಿ, ಆಶೀರ್ವದಿಸಿ' ಎಂದು ಬರೆದುಕೊಂಡಿದ್ದಾರೆ.

46
ಯಾರು ಈ ನಿತಿನ್ ಶಿವಾಂಶ್?

ಸುಹಾನಾ ಸೈಯದ್ ಅವರು ವರಿಸುತ್ತಿರುವ ನಿತಿನ್ ಶಿವಾಂಶ್ ಅವರು ವೃತ್ತಿಯಲ್ಲಿ ರಂಗಭೂಮಿ ಕಲಾವಿದರು. ಅವರು ಪ್ರಸಿದ್ಧ ರಂಗ ತರಬೇತಿ ಕೇಂದ್ರವಾದ ನೀನಾಸಂನಲ್ಲಿ ತರಬೇತಿ ಪಡೆದಿದ್ದಾರೆ. ಇಬ್ಬರ ನಡುವಿನ 16 ವರ್ಷಗಳ ಸುದೀರ್ಘ ಗೆಳೆತನವು ಈಗ ಪ್ರೇಮ ವಿವಾಹಕ್ಕೆ ಕಾರಣವಾಗಿದೆ.

56
ಸುಹಾನಾ ಅವರ ಮುಕ್ತ ಮಾತು

ತಮ್ಮ ಪ್ರೀತಿಯ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಮುಕ್ತವಾಗಿ ಹಂಚಿಕೊಂಡಿರುವ ಸುಹಾನಾ, ತಮ್ಮ ನಿರ್ಧಾರಕ್ಕೆ ಕಾರಣವನ್ನು ಸ್ಪಷ್ಟಪಡಿಸಿದ್ದಾರೆ. "ಪರಸ್ಪರ ಪ್ರೀತಿ ಇದೆ ಸಾಕು. ನಮ್ಮ ನಂಬಿಕೆಗಳು ಮುಂದುವರಿಯಲಿದೆ, ಬದಲಾಗುವ ಅವಶ್ಯಕತೆ ಇಲ್ಲ.ಪ್ರೇಮಕ್ಕೆ ಯಾವ ಮಿತಿ ಇಲ್ಲ, ಎಂಬುದಕ್ಕೆ ನಾವೇ ಸಾಕ್ಷಿ.ಪ್ರತಿ ಸವಾಲು, ಪ್ರತಿ ಸಂಶಯ ಮತ್ತು ಪ್ರತಿ ಭಯದ ಮೌನದಲ್ಲಿಯೂ ನಮ್ಮನ್ನು ಹಿಡಿದಿಟ್ಟಿದ್ದು ಪ್ರೀತಿ.

66
ಡೋಂಟ್‌ಕೇರ್‌ ಸ್ವಭಾವದ ಸುಹಾನಾ

ತಮ್ಮ ಬೋಲ್ಡ್ ಲುಕ್ಸ್ ಮತ್ತು 'ಡೋಂಟ್ ಕೇರ್' ಸ್ವಭಾವದ ಮೂಲಕ ಸರಿಗಮಪ ಶೋನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದ ಸುಹಾನಾ, ಈಗ ಈ ದಿಟ್ಟ ನಿರ್ಧಾರದ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.

Read more Photos on
click me!

Recommended Stories