Namratha Gowda: ಈ ಬಾರಿ ಜೀ಼ ಕನ್ನಡ ಕುಟುಂಬದ ಸೆನ್ಸೇಷನಲ್ ಅವಾರ್ಡ್ ಅನ್ನ ಕರ್ಣ ಧಾರಾವಾಹಿಯಲ್ಲಿನ ನಿತ್ಯಾ ಪಾತ್ರಧಾರಿ ನಮ್ರತಾ ಗೌಡ ಪಡೆದುಕೊಂಡಿದ್ದು, ಕರ್ಣ ಧಾರಾವಾಹಿಯಲ್ಲಿ ಮುಂದಿನ ಸಂಚಿಕೆಗಳು ಹೇಗಿರಲಿದೆ ಎಂಬುದನ್ನ ಪರೋಕ್ಷವಾಗಿ ಹೇಳಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಕಳೆದೆರೆಡು ದಿನಗಳಿಂದ ಜೀ಼ ಕನ್ನಡ ಕುಟುಂಬ ಅವಾರ್ಡ್ಸ್-2025 ಪ್ರಸಾರವಾಗುತ್ತಿದೆ. ಈ ಬಾರಿ ಜೀ಼ ಕನ್ನಡ ಕುಟುಂಬದ ಸೆನ್ಸೇಷನಲ್ ಅವಾರ್ಡ್ ಅನ್ನ ಕರ್ಣ ಧಾರಾವಾಹಿಯಲ್ಲಿನ ನಿತ್ಯಾ ಪಾತ್ರಧಾರಿ ನಮ್ರತಾ ಗೌಡ ಪಡೆದುಕೊಂಡಿದ್ದಾರೆ.
26
ಪ್ರಶಸ್ತಿ ಪ್ರದಾನ ಮಾಡಿದ ಶಿವಣ್ಣ
ಕರುನಾಡ ಚಕ್ರವರ್ತಿ ಶಿವಣ್ಣ ಈ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಮಯದಲ್ಲಿ ನಮ್ರತಾ ಶಿವಣ್ಣ ಅವರೊಂದಿಗೆ ಹೆಜ್ಜೆ ಹಾಕಿದ್ದಲ್ಲದೆ, ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.
36
ನಮ್ರತಾ ಉತ್ತರ ಹೀಗಿತ್ತು
ನಿರೂಪಕಿ ಅನುಶ್ರೀ 'ಕರ್ಣ' ಧಾರಾವಾಹಿಯಲ್ಲಿ ಮದುವೆ ಪ್ರೊಮೊ ಬಿಟ್ಟ ಮೇಲೆ ಬಾಹುಬಲಿಯನ್ನ ಕಟ್ಟಪ್ಪ ಯಾಕೆ ಕೊಂದ? ಎಂಬ ಪ್ರಶ್ನೆ ಮೂಡಿದಂತೆ ಕರ್ಣ ಧಾರಾವಾಹಿ ನೋಡಿದವರಿಗೂ ಕರ್ಣ ಯಾರನ್ನ ಮದ್ವೆಯಾಗ್ತಾನೆ? ಅನ್ನೋ ಕುತೂಹಲ ಇಡೀ ಕರ್ನಾಟದಲ್ಲೇ ದೊಡ್ಡ ಚರ್ಚೆಯಾಗಿದೆ ಎಂದಿದ್ದಕ್ಕೆ ಅದಕ್ಕೆ ನಮ್ರತಾ ಉತ್ತರ ಹೀಗಿತ್ತು..
"ನಿತ್ಯಾ ಪಾತ್ರವನ್ನ ನನಗೆ ನಂಬಿ ಕೊಟ್ಟಾಗ ಜನ ಈಸಿಯಾಗಿ ಈ ಪಾತ್ರವನ್ನ ಒಪ್ಪಿಕೊಳ್ಳಲ್ಲ ಅಂತ ಗೊತ್ತಿತ್ತು. ಮಧ್ಯಮವರ್ಗದ ಹುಡುಗಿಯರು ಸ್ಟ್ರಾಂಗ್ ಆಗಿ ಇರಬೇಕಾಗುತ್ತದೆ. ಎಲ್ಲರನ್ನ ಎದುರು ಹಾಕಿಕೊಳ್ಳುವ ಪ್ರಸಂಗ ಎದುರಾಗುತ್ತದೆ. ಜನ ಅಷ್ಟು ಸುಲಭವಾಗಿ ನಿತ್ಯಾ ಪಾತ್ರವನ್ನ ಒಪ್ಪಲ್ಲ ಅಂತ ಗೊತ್ತಿತ್ತು. ಅದರಲ್ಲೂ ನಿಧಿ-ಕರ್ಣ ಲವ್ ಸ್ಟೋರಿ ಬಿಲ್ಡ್ ಆದ ಮೇಲೆ ಜನ ಒಪ್ಪಿಕೊಳ್ಳಲ್ಲ ಅಂತ ಗೊತ್ತಿತ್ತು. ಇದು ನೆಗೆಟಿವ್ ಆಗುತ್ತೆ ಅಂತನೂ ಗೊತ್ತಿತ್ತು" ಎಂದಿದ್ದಾರೆ ನಿತ್ಯಾ.
56
ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ
"ಜನ ನಿತ್ಯಾ ಕರ್ಣ ಮದುವೆಯಾಗುವುದನ್ನ ಇಷ್ಟು ಪರ್ಸನಲ್ ಆಗಿ ನೋಡ್ತಾರೆ ಅಂತ ಗೊತ್ತಿರಲಿಲ್ಲ. ಆದ್ರೂ ನನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ" ಎಂದಾಗ ಅಕುಲ್ "ಜನ ನಿಮ್ಮ ಪಾತ್ರವನ್ನ ಹೇಟ್ ಮಾಡ್ತಾರೆ ಅಂದ್ರೆ ನಿಮ್ಮ ಅಭಿನಯ ಅಷ್ಟು ಚೆನ್ನಾಗಿ ಮೂಡಿ ಬಂದಿದೆ ಎಂಬುದನ್ನ ಅರ್ಥ ಮಾಡಿಕೊಳ್ಳಬೇಕು" ಎಂದರು.
66
ಅಷ್ಟೇ ಇಷ್ಟಪಡ್ತಾರೆ
ಕೊನೆಯದಾಗಿ ನಮ್ರತಾ “ಇವತ್ತು ನಿತ್ಯಾ ಪಾತ್ರನಾ ಜನ ಎಷ್ಟು ಹೇಟ್ ಮಾಡ್ತಾರೋ ಮುಂದಿನ ದಿನಗಳಲ್ಲಿ ಅಷ್ಟೇ ಪ್ರೀತಿ ಕೊಡ್ತಾರೆ” ಎಂಬ ನಂಬಿಕೆಯೊಂದಿಗೆ ಪ್ರಶಸ್ತಿ ಸ್ವೀಕರಿಸುತ್ತಿದ್ದೇನೆ ಅಂದಿದ್ದಾರೆ". ಅಲ್ಲಿಗೆ ಕರ್ಣ ಧಾರಾವಾಹಿಯಲ್ಲಿ ಮುಂದಿನ ಸಂಚಿಕೆಗಳು ಅದ್ಭುತವಾಗಿರಲಿವೆ ಎಂಬುದನ್ನ ನಿತ್ಯಾ ಪಾತ್ರಧಾರಿ ನಮ್ರತಾ ಗೌಡ ಪರೋಕ್ಷವಾಗಿ ಹೇಳಿದ್ದಾರೆ.