Bigg Boss ಫಿನಾಲೆಗೆ ಯಾರು ಅರ್ಹರು ಕೇಳಿದಾಗ ಮಂಜು ಭಾಷಿಣಿ- ಅಶ್ವಿನಿ ಒಟ್ಟಿಗೇ ಹೇಳಿದ್ದು ಒಬ್ಬರದ್ದೇ ಹೆಸರು!

Published : Oct 19, 2025, 06:41 PM IST

ಬಿಗ್ ಬಾಸ್ ಮಿಡ್ ಸೀಸನ್ ಫಿನಾಲೆಯಲ್ಲಿ ಡಬಲ್ ಎಲಿಮಿನೇಷನ್ ನಡೆದಿದ್ದು, ಮಂಜು ಭಾಷಿಣಿ ಮತ್ತು ಅಶ್ವಿನಿ ಎಸ್.ಎಸ್. ಮನೆಯಿಂದ ಹೊರಬಂದಿದ್ದಾರೆ. ಮನೆಯಿಂದ ಹೊರಹೋಗುವಾಗ ಇಬ್ಬರೂ ಸ್ಪರ್ಧಿಗಳು,   ಫಿನಾಲೆ ತಲುಪಲು ಅರ್ಹರು ಯಾರು ಎಂದಾಗ ಒಬ್ಬರದ್ದೇ ಹೆಸರು ಹೇಳಿದ್ದಾರೆ. ಅವರು ಯಾರು?

PREV
18
ನಾಮಿನೇಟ್‌ ಆಗಿದ್ದವರು

Bigg Bossನಲ್ಲಿ ಇದೀಗ ಆಟ ಸಕತ್​ ಜೋರಾಗಿ ನಡೆಯುತ್ತಿದೆ. ಮಿಡ್​ ಸೀಸನ್​ ಫಿನಾಲೆಯಲ್ಲಿ ಇಬ್ಬರು ಔಟ್​ ಆಗಿ ನಿನ್ನೆ ಹೊರಬಂದರು. ಧ್ರುವಂತ್, ಕಾವ್ಯ ಶೈವ, ಮಂಜು ಭಾಷಿಣಿ, ಸ್ಪಂದನಾ ಸೋಮಣ್ಣ, ಗಿಲ್ಲಿ ನಟ, ಧನುಷ್‌‌ ಗೌಡ, ಅಭಿಷೇಕ್ ಶ್ರೀಕಾಂತ್‌, ಮಲ್ಲಮ್ಮ, ಚಂದ್ರಪ್ರಭ, ಅಶ್ವಿನಿ ಎಸ್‌ಎಸ್‌, ರಕ್ಷಿತಾ ಶೆಟ್ಟಿ ಅವರು ನಾಮಿನೇಟ್‌ ಆಗಿದ್ದರು.

28
ರಕ್ಷಿತಾ ಶೆಟ್ಟಿ ಫೈನಲಿಸ್ಟ್​

ಅದಕ್ಕೂ ಮುನ್ನ ಅಶ್ವಿನಿ ಗೌಡ, ಕಾಕ್ರೋಚ್‌ ಸುಧಿ, ರಾಶಿಕಾ ಶೆಟ್ಟಿ, ಮಾಳು ನಿಪನಾಳ ಅವರು ಫೈನಲಿಸ್ಟ್‌ ಆಗಿ ಆರಂಭದಲ್ಲಿಯೇ ಸೇಫ್‌ ಆಗಿದ್ದರು. ಸ್ಪಂದನಾ ಸೋಮಣ್ಣ ಅವರು ಫೈನಲಿಸ್ಟ್‌ ಆದರೂ ಕೂಡ ಅವರ ವಿರುದ್ಧ ಟಾಸ್ಕ್‌ನಲ್ಲಿ ಹೋರಾಡಿ ಗೆದ್ದು ರಕ್ಷಿತಾ ಶೆಟ್ಟಿ ಮಾತ್ರ ಫೈನಲಿಸ್ಟ್‌ ಆದರು. ಸ್ಪಂದನಾ ಸೋತು ನಾಮಿನೇಟ್‌ ಆದರು.

38
ಒಟ್ಟೂ ಮೂರು ಮಂದಿ

ಈ ವಾರವೇ ಬಿಗ್​​ಬಾಸ್ ಮನೆಯಿಂದ ಸುಮಾರು ಆರು ಮಂದಿ ಹೊರಗೆ ಹೋಗಲಿದ್ದಾರೆ ಎಂಬ ಸುಳಿವನ್ನು ಸುದೀಪ್ ನೀಡಿದ್ದರು. ಅದರಂತೆ ವಾರದ ಪಂಚಾಯಿತಿಯ ಮೊದಲ ದಿನ ಅಂದರೆ ಶನಿವಾರವೇ ಬಿಗ್​​ಬಾಸ್ ಮನೆಯಿಂದ ಒಟ್ಟಿಗೆ ಇಬ್ಬರನ್ನು ಎಲಿಮಿನೇಟ್ ಮಾಡಲಾಯ್ತು. ಅಲ್ಲಿಗೆ ಡಾಗ್ ಸತೀಶ್ ಸಹ ಸೇರಿದಂತೆ ವಾರದಲ್ಲಿ ಇನ್ನೂ ಒಂದು ದಿನ ಬಾಕಿ ಇರುವಂತೆ ಮೂರು ಮಂದಿಯನ್ನು ಮನೆಯಿಂದ ಹೊರ ಹಾಕಲಾಗಿದೆ.

48
ಇಬ್ಬರು ಎಲಿಮಿನೇಟ್​

ಮೊದಲ ಹಂತದಲ್ಲೇ ಮಲ್ಲಮ್ಮ, ರಕ್ಷಿತಾ ಶೆಟ್ಟಿ, ಚಂದ್ರಪ್ರಭ, ಗಿಲ್ಲಿ ನಟ, ಕಾವ್ಯ ಶೈವ ಅವರು ಸೇಫ್‌ ಆಗಿದ್ದರು, ಉಳಿದವರು ಡೇಂಜರ್‌ ಜೋನ್‌ನಲ್ಲಿದ್ದರು. ಕೊನೆಗೆ ಮಂಜು ಭಾಷಿಣಿ (Bigg Boss Manju Bhashini), ಅಶ್ವಿನಿ ಎಸ್‌ಎಸ್‌ ಅವರು ಔಟ್‌ ಆಗಿ ಹೊರಕ್ಕೆ ಬಂದರು.

58
ಫಿನಾಲೆ ತಲುಪುವ ಅರ್ಹತೆ

ಮಂಜು ಭಾಷಿಣಿ ಮತ್ತು ಅಶ್ವಿನಿ ಎನ್​.ಎಸ್​ (Ashwini N.S) ಅವರನ್ನು ಉದ್ದೇಶಿಸಿ ಸುದೀಪ್​ ಅವರು, ನಿಮ್ಮ ಪ್ರಕಾರ ಫಿನಾಲೆ ತಲುಪೋ ಅರ್ಹತೆ ಯಾರಿಗಿದೆ ಎಂದು ಪ್ರಶ್ನಿಸಿದರು. ಕೂಡಲೇ ಇಬ್ಬರ ಬಾಯಲ್ಲಿ ಬಂದದ್ದೂ ಒಂದೇ ಹೆಸರು.

68
ಇಬ್ಬರೂ ಹೇಳಿದ್ದು ಇವರ ಹೆಸರು

ಆ ಹೆಸರೇ ಗಿಲ್ಲಿ ನಟ. ಮಂಜು ಭಾಷಿಣಿ ಅವರು ಗಿಲ್ಲಿ ನಟ ಎಂದರೆ, ಅಶ್ವಿನಿ ಗಿಲ್ಲಿ ಸರ್​ ಎಂದು ಹೇಳಿದರು. ಇದನ್ನು ಕೇಳಿ ಅಲ್ಲಿ ನೆರೆದಿದ್ದ ಜನರು ಜೋರಾಗಿ ಚಪ್ಪಾಳೆ ತಟ್ಟಿದರು. ಅಲ್ಲಿಗೆ ಗಿಲ್ಲಿ ನಟ ಎಲ್ಲರ ಮನಸ್ಸಿನಲ್ಲಿ ಬೇರೂರಿರುವುದು ತಿಳಿಯುತ್ತದೆ.

78
ಒಂದು ಲಕ್ಷದ ಚೆಕ್​

ಇದೇ ವೇಳೆ, ಮಂಜು ಭಾಷಿಣಿ ಅವರಿಗೆ ಒಂದು ಲಕ್ಷ ರೂಪಾಯಿಗಳ ಚೆಕ್​ ವಿತರಿಸಲಾಯಿತು. ಇದು ಅಶ್ವಸೂರ್ಯ ರಿಯಾಲಿಟೀಸ್​ ನೀಡಿರುವ ಕೊಡುಗೆ. 

88
ಅಶ್ವಿನಿ ಅವರಿಗೂ ಚೆಕ್​

ಅದರಂತೆ ಅಶ್ವಿನಿ ಅವರಿಗೂ  ಒಂದು ಲಕ್ಷ ರೂಪಾಯಿಗಳ ಚೆಕ್​ ವಿತರಿಸಲಾಯಿತು.  ಅದರ ಹೊರತಾಗಿ ಇಬ್ಬರೂ ಸ್ಪರ್ಧಿಗಳಿಗೆ ಇದಾಗಲೇ ನಿಗದಿಯಾಗಿರುವಂತೆ ಭರ್ಜರಿ ಹಣ, ಗಿಫ್ಟ್​ ಕೂಡ ಸಿಗಲಿದೆ.

Read more Photos on
click me!

Recommended Stories