Bhagyalakshmi Serial ಬಿಡುತ್ತಿದ್ದಂತೆಯೇ ನಟಿ ಆಶಾ ಭರ್ಜರಿ ಫೋಟೋಶೂಟ್​! ಸಿನಿಮಾಕ್ಕೆ ರೆಡಿನಾ?

Published : Oct 19, 2025, 05:46 PM IST

'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ಪೂಜಾ ಪಾತ್ರಕ್ಕೆ ಜೀವ ತುಂಬಿದ್ದ ನಟಿ ಆಶಾ ಅಯ್ಯನಾರ್ ಸೀರಿಯಲ್ ತೊರೆದಿದ್ದಾರೆ. ಅನಿವಾರ್ಯ ಕಾರಣಗಳಿಂದ ನಿರ್ಗಮಿಸುತ್ತಿರುವುದಾಗಿ ಅವರು ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದು, ಅವರ ಮುಂದಿನ ನಡೆ ಬಿಗ್ ಬಾಸ್ ಅಥವಾ ಸಿನಿಮಾ ಇರಬಹುದೆಂಬ ಕುತೂಹಲ ಮೂಡಿದೆ.  

PREV
17
ಯಾರೀ ಆಶಾ ಅಯ್ಯನಾರ್​?

ನಟಿ ಆಶಾ ಅಯ್ಯನಾರ್‌ (Asha Ayyanar) ಎಂದರೆ ಬಹುತೇಕ ಮಂದಿಗೆ ತಿಳಿಯಲ್ಲಿಕ್ಕಿಲ್ಲ. ಅದರೆ ಕಲರ್ಸ್​ ಕನ್ನಡದ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಕಳೆದ ಮೂರು ವರ್ಷಗಳಿಂದ ಭಾಗ್ಯಳ ತಂಗಿ ಪೂಜಾ ಪಾತ್ರ ಮಾಡ್ತಿರೋ ನಟಿ ಈಕೆ. ಆದರೆ ಸದ್ಯ ಸೀರಿಯಲ್​ನಲ್ಲಿ ಪೂಜಾಗೆ ಆ್ಯಕ್ಸಿಡೆಂಟ್​ ಆಗಿದೆ. ಇದಕ್ಕೆ ಕಾರಣ, ಪೂಜಾ ಪಾತ್ರಧಾರಿಯಾಗಿರುವ ಆಶಾ ಅವರು ಸೀರಿಯಲ್​ ಬಿಟ್ಟು ಹೋಗುತ್ತಿದ್ದಾರೆ.

27
ವೈಲ್ಡ್‌ ಕಾರ್ಡ್ ಎಂಟ್ರಿ?

ಆಶಾ ಅಯ್ಯನಾರ್​ ಬಿಗ್‌ಬಾಸ್‌‌ಗೆ (Bigg Boss) ವೈಲ್ಡ್‌ ಕಾರ್ಡ್ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಸುದ್ದಿಯೂ ಇದೆ. ತಾವು ಏಕೆ ಈ ಸೀರಿಯಲ್‌ನಿಂದ ಹೊರಕ್ಕೆ ಬರುತ್ತಿದ್ದೇವೆ ಎನ್ನುವುದನ್ನು ನಟಿ ತಿಳಿಸಿಲ್ಲ. ಬದಲಿಗೆ ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

37
ಸಿನಿಮಾದಲ್ಲಿ ಅವಕಾಶ?

ಇದರ ಬೆನ್ನಲ್ಲೇ ಆಶಾ ಕ್ಯೂಟ್​ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಇದನ್ನು ನೋಡಿದವರು ಖಂಡಿತವಾಗಿಯೂ ಈಕೆಗೆ ಸಿನಿಮಾದಲ್ಲಿ ರೋಲ್​ ಸಿಕ್ಕಿರಬಹುದು ಎನ್ನುತ್ತಿದ್ದಾರೆ. ಹೇಳಿಕೇಳಿ ಆಶಾ ಅವರ ನಟನೆಯ ಜೊತೆ ಅವರು ಕೂಡ ಅಷ್ಟೇ ಕ್ಯೂಟ್​ ಆಗಿದ್ದಾರೆ. ಆದ್ದರಿಂದ ಇವರಿಗೆ ಸಿನಿಮಾದಲ್ಲಿ ಅವಕಾಶ ಸಿಕ್ಕಿರಬಹುದು ಎಂದೇ ಹೇಳಲಾಗುತ್ತಿದೆ.

47
ನಟಿ ಆಶಾ ಅಯ್ಯನಾರ್‌ ಮಾಹಿತಿ

ಅಷ್ಟಕ್ಕೂ ಆಶಾ ಅವರು ಸೀರಿಯಲ್​ ಬಿಟ್ಟು ಹೋಗುವ ಸಂದರ್ಭದಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್​ ಹಾಕಿಕೊಂಡಿದ್ದರು. ‘‘ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ಭಾಗ್ಯಲಕ್ಷ್ಮಿ ಪೂಜಾ. ಆದರೆ ಇನ್ಮುಂದೆ ಭಾಗ್ಯಲಕ್ಷ್ಮಿಯಲ್ಲಿ ಪೂಜಾ ಆಗಿ ಬರೋಲ್ಲ ಅಂತ ಹೇಳೋಕೆ ತುಂಬಾ ಬೇಸರ ಇದೆ. ಈ ಟೀಂ ನ ಬಿಡೋದು ಸುಲಭದ ಮಾತಾಗಿರಲಿಲ್ಲ ಅನಿವಾರ್ಯ ಕಾರಣಗಳಿಂದಾಗಿ ನಾನು ಭಾಗ್ಯಲಕ್ಷ್ಮಿನ ಬಿಡ್ತಾ ಇದೀನಿ ಎಂದಷ್ಟೇ ಹೇಳಿದ್ದಾರೆ.

57
ತುಂಬಾ ಮೆಮೋರಿ ಕೊಟ್ಟಿದೆ

ಈ ಪೋಸ್ಟ್​ನಲ್ಲಿ ನಟಿ, ಮೂರು ವರ್ಷ ಭಾಗ್ಯಲಕ್ಷ್ಮಿ ಟೀಂ ನನಗೆ ತುಂಬಾನೇ ಸಪೋರ್ಟ್ ಮಾಡಿದೆ ತುಂಬಾನೇ ಮೆಮೊರಿಸ್ ಕೊಟ್ಟಿದೆ ತುಂಬಾನೇ ಕಲಿಸಿದೆ ಅದನ್ನು ನಾನು ನನ್ನ ಜೀವನದಲ್ಲಿ ಯಾವಾಗಲೂ ಅಳವಡಿಸಿಕೊಳ್ಳುತೀನಿ. ಇನ್ಮುಂದೆ ಬರುವಂತ ಪೂಜಾನ ಕೂಡ ಅಷ್ಟೇ ಪ್ರೀತಿ ಮಾಡಿ ಅಷ್ಟೇ ಬೆಂಬಲಿಸಿ ಎಂದು ಸುದೀರ್ಘ ಪತ್ರ ಬರೆದುಕೊಂಡಿದ್ದಾರೆ.

67
ಪೂಜಾಗೆ ಆ್ಯಕ್ಸಿಡೆಂಟ್‌!

ಪೂಜಾ ಪಾತ್ರ ಬದಲಾಗಲು ಹೊಸ ಟ್ವಿಸ್ಟ್‌ ನೀಡಲಾಗಿದೆ. ಪೂಜಾಳಿಗೆ ಆಕ್ಸಿಡೆಂಟ್‌ ಆದ ರೀತಿಯಲ್ಲಿ ತೋರಿಸಲಾಗಿದೆ. ಈಕೆ ಬದುಕುಳಿಯುವುದೇ ಕಷ್ಟ, ತುಂಬಾ ರಕ್ತ ಲಾಸ್‌ ಆಗಿದೆ ಎಂದು ವೈದ್ಯೆ ಹೇಳುತ್ತಾರೆ. ಇದನ್ನು ನೋಡಿದರೆ ಪೂಜಾ ಸಾಯುತ್ತಾಳೆಯೋ ಎನ್ನುವ ಡೌಟ್‌ ಬರುವುದು ಸಹಜ. ಆದರೆ ಆಶಾ ಅಯ್ಯನಾರ್‌ ಇನ್ನು ಮುಂದೆ ಬರುವ ಪೂಜಾಗೂ ಅಷ್ಟೇ ಪ್ರೀತಿ ಕೊಡಿ ಎಂದಿರುವ ಕಾರಣ, ಈಕೆಗೆ ಪ್ಲಾಸ್ಟಿಕ್‌ ಸರ್ಜರಿ ಮಾಡಬಹುದು ಎನ್ನುತ್ತಿದ್ದಾರೆ ವೀಕ್ಷಕರು. ಮುಂದೆ ಬೇರೆ ಪೂಜಾ ವೀಕ್ಷಕರ ಮುಂದೆ ಬರಲಿದ್ದಾಳೆ.

77
ದಾವಣಗೆರೆಯ ಬ್ಯೂಟಿ

ಅಂದಹಾಗೆ ನಟಿ, ಆಶಾ ಅಯ್ಯನಾರ್ ಮೂಲತಃ ದಾವಣಗೆರೆಯವರು ಮತ್ತು ಸೆಂಟ್ ಜಾನ್ಸ್ ಹೈಸ್ಕೂಲ್‌ನಲ್ಲಿ ಓದಿದ್ದಾರೆ. ಭಾಗ್ಯಲಕ್ಷ್ಮಿಗೂ ಮೊದಲು ಅವರು, 'ರಾಧಾರಮಣ' ಮತ್ತು 'ಮೂರುಗಂಟು' ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. 'ಭಾಗ್ಯಲಕ್ಷ್ಮೀ' ಧಾರಾವಾಹಿಯಿಂದ ನಿರ್ಗಮಿಸಿದ ನಂತರ ಅವರು ಬಿಗ್‌ಬಾಸ್‌ಗೆ ಪ್ರವೇಶಿಸುವ ಅಥವಾ ಜೀ ಕನ್ನಡದ 'ಆದಿಲಕ್ಷ್ಮೀ ಪುರಾಣ' ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸುವ ಬಗ್ಗೆ ಮಾತುಗಳಿವೆ.

Read more Photos on
click me!

Recommended Stories