ದುಷ್ಟ ಶಕ್ತಿ ಪಡೆಯಲು ಮಾಳವಿಕಾ, ಹಿತಾಳನ್ನು ಬ*ಲಿ ಕೊಡಲು ಸಿದ್ಧತೆ ನಡೆಸಿದ್ದಾಳೆ. ಇನ್ನೊಂದೆಡೆ, ಹಿತಾಳನ್ನು ಉಳಿಸಲು ದುರ್ಗಾ, ದೇವಿಯ ಕಳೆದುಹೋದ ಗೆಜ್ಜೆ, ಬಳೆಗಳನ್ನು ಹುಡುಕಿ ಇದೀಗ ಸಂಜೀವಿನಿ ಮೂಲಿಕೆಗಾಗಿ ಪರದಾಡುತ್ತಿದ್ದಾಳೆ. ಬ*ಲಿಗೂ, ಸಂಜೀವಿನಿ ಹುಡುಕಾಟಕ್ಕೂ ಕ್ಷಣಗಣನೆ ಆರಂಭವಾಗಿದೆ.
ಒಂದೆಡೆ, ಪುಟಾಣಿ ಹಿತಾಳನ್ನು ಬ*ಲಿ ಕೊಟ್ಟು ಸಂಪೂರ್ಣ ಶಕ್ತಿಯನ್ನು ಪಡೆಯಬೇಕು ಎಂದು ಮಾಳವಿಕಾ ಹೊರಟಿದ್ದಾಳೆ. ಇದರ ಅರಿವು ಯಾರಿಗೂ ಇಲ್ಲ. ಇದೇ ಕಾರಣಕ್ಕೆ, ಮಾಳವಿಕಾಳ ತಾಂತ್ರಿಕ ಬುದ್ಧಿಯಿಂದಾಗಿ ಹಿತಾ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಅವಳನ್ನು ಕಾಪಾಡುವುದು ಸದ್ಯ ದುರ್ಗಾಳ ಕೈಯಲ್ಲಿ ಇದೆ. ಇದೇ ಕಾರಣಕ್ಕೆ ಆಕೆ ದೊಡ್ಡ ಹೋರಾಟವನ್ನೇ ನಡೆಸಿದ್ದಾಳೆ. ಇದು ಸದ್ಯ ನಾ ನಿನ್ನ ಬಿಡಲಾರೆ (Na Ninna Bidalaare Serial) ಸೀರಿಯಲ್ ಸ್ಟೋರಿ.
27
ಅಜ್ಜಿ ರೂಪದಲ್ಲಿ ದೇವಿ
ಅಲ್ಲಿ ದೇವಿ ಅಜ್ಜಿ ರೂಪದಲ್ಲಿ ದುರ್ಗಾಳಿಗೆ ಎದುರಾಗುತ್ತಾಳೆ. ಆಗ ಆಕೆ ದುರ್ಗಾಪುರದ ಕಥೆ ಹೇಳುತ್ತಾಳೆ. ಸಾವಿರಾರು ವರ್ಷಗಳ ಹಿಂದಿನ ಕಥೆ ಅದು. ರಾಕ್ಷಸಿ ದುರ್ಗಾಪುರದ ಮೇಲೆ ದಾಳಿ ಮಾಡಿದ್ದಳು. ಆ ರಾಕ್ಷಸಿಗೆ ಬೇಕಾದ ವಸ್ತುಗಳನ್ನು ಪಡೆದುಕೊಳ್ಳಲು ಪ್ರಯತ್ನ ಪಡುತ್ತಿದ್ದಳು. ದುರ್ಗಾಪುರ ನಾಶ ಮಾಡುವ ಉದ್ದೇಶ ಹೊಂದಿದ್ದಳು. ದೇವಿ ರಕ್ಷಕರೂ ಇದ್ದರು. ಅವರು ಇಲ್ಲಿಯ ರಾಜ ಮತ್ತು ಇಬ್ಬರು ಹೆಣ್ಣುಮಕ್ಕಳು. ಅವರ ದುರ್ಗಾಪುರದ ರಕ್ಷಣೆ ಮಾಡುತ್ತಾ ಜೀವ ಬಿಟ್ಟರು. ದೇವಿಯ ಮೂರ್ತಿಯನ್ನು ರಾಕ್ಷಸಿ ಕೊಂಡೊಯ್ದಳು ಎನ್ನುತ್ತ ಆ ಘಟನೆಯನ್ನುಹೇಳಿದ್ದಾಳೆ ಅಜ್ಜಿ.
37
ಶತಮಾನದ ಕಥೆ
ಕೊನೆಗೆ, ಆ ರಾಕ್ಷಸಿ ದೇವಿಯ ಮೂರ್ತಿ ಯಾರಿಗೂ ಸಿಗಬಾರದು ಎನ್ನುವ ಕಾರಣಕ್ಕೆ ಅದನ್ನು ಅಲ್ಲಿಯೇ ಇಟ್ಟಳು. ಆದರೆ ದೇವಿಯ ಬಳೆ ಮತ್ತು ಗೆಜ್ಜೆ ಎಲ್ಲಿದೆ ಎಂದು ತಿಳಿದಿಲ್ಲ. ದೇವಾಲಯದ ಪಕ್ಕದಲ್ಲಿ ಇರುವ ಗುಹೆಯಲ್ಲಿ ದೇವಿಯ ಮೂರ್ತಿ ಇದೆ. ಆದರೆ ಆ ಕಾಣೆಯಾದ ಬಳೆ ಮತ್ತು ಗೆಜ್ಜೆಯನ್ನು ತಂದರೆ ಮಾತ್ರ ಆ ಬಾಗಿಲು ತೆರೆಯುತ್ತದೆ. ಅವುಗಳನ್ನು ದೇವಿಯ ಹತ್ತಿರ ಇಟ್ಟರೆ, ಹಿತಾಳಿಗೆ ಎಚ್ಚರ ಆಗುತ್ತದೆ ಎಂದಿದ್ದಾಳೆ. ಅದಕ್ಕೂ ಇದಕ್ಕೂ ಏನು ಸಂಬಂಧ ಎನ್ನುವ ಗೊಂದಲ ದುರ್ಗಾಳಿಗೆ ಇದ್ದರೂ, ಹಿತಾಳ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಡಲು ರೆಡಿಯಾಗಿದ್ದಾಳೆ.
ಮೊದಲಿಗೆ ಹರಸಾಹಸ ಪಟ್ಟು ದೇವಿಯ ಬಳೆ ಹುಡುಕಿ ಕೊನೆಗೆ ಸಮುದ್ರದ ಆಳದಲ್ಲಿರುವ ದೇವಿಯ ಗೆಜ್ಜೆಯನ್ನೂ ಹುಡುಕುವಲ್ಲಿ ದುರ್ಗಾ ಯಶಸ್ವಿಯಾಗಿದ್ದಾಳೆ. ತನ್ನ ಅಕ್ಕನನ್ನು ಇನ್ನೂ ಭೇಟಿ ಮಾಡಿಸಿಲ್ಲ ಎಂದು ದೇವಿಯ ಮೇಲೆಯೇ ಬಹಳ ವರ್ಷಗಳಿಂದ ಮುನಿಸು ಮಾಡಿಕೊಂಡಿರೋ ದುರ್ಗಾ, ಕೊನೆಗೆ ಹಿತಾಳಿಗಾಗಿ ಅಲ್ಲಿ ಪೂಜೆಯನ್ನೂ ಸಲ್ಲಿಸಿದ್ದಾಳೆ. ಈಗ ಕೊನೆಯ ಹಂತವಾಗಿ ಸಂಜೀವಿನಿ ಹುಡುಕುವ ಕೆಲಸ.
57
ಸಂಜೀವಿನಿ ಹುಡುಕಿ ಹೊರಟ ದುರ್ಗಾ
ಅದನ್ನು ಹುಡುಕಲು ಹೊರಟಿದ್ದಾಳೆ ದುರ್ಗಾ. ಆಗ ಅಲ್ಲಿ ಶರತ್ ಕೂಡ ಸಾಥ್ ಕೊಟ್ಟಿದ್ದಾನೆ. ಆದರೆ ಶರತ್ಗೆ ಯಾರೋ ಬಂದು ಹೊಡೆದಿದ್ದಾರೆ. ಇದರಿಂದ ದುರ್ಗಾ ಒಂಟಿಯಾಗಿ ಅದನ್ನು ಹುಡುಕಬೇಕಿದೆ. ಅದು ಸಿಗದೇ ಪರದಾಡುತ್ತಿದ್ದಾಳೆ.
67
ದುಷ್ಟ ಶಕ್ತಿ ಆಹ್ವಾನ
ಅತ್ತ ಮಾಳವಿಕಾ ಹಿತಾಳ ಬ*ಲಿಗಾಗಿ ದುಷ್ಟ ಶಕ್ತಿಗಳನ್ನು ಆಹ್ವಾನ ಮಾಡಿದ್ದಾಳೆ. ಹಿತಾ ಸತ್ತರೆ ಅಂಬಿಕಾಳ ಶಕ್ತಿಯೂ ಕ್ಷೀಣಿಸಿ ಎಲ್ಲ ಶಕ್ತಿಯೂ ತನ್ನ ಪರವಾಗಿ ಬರುವುದಕ್ಕಾಗಿ ಆಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾಳೆ.
77
ಬ*ಲಿಗಾಗಿ ವೇದಿಕೆ ಸಿದ್ಧ
ಇನ್ನೇನಿದ್ದರೂ ಕೆಲವೇ ಕ್ಷಣಗಳು ಬಾಕಿ ಇವೆ. ಅಲ್ಲಿ ಬ*ಲಿಗಾಗಿ ವೇದಿಕೆ ಸಿದ್ಧವಾಗಿದ್ದರೆ, ಇತ್ತ ದುರ್ಗಾ ಸಂಜೀವಿನಿ ಸಿಗದೇ ಪರದಾಡುತ್ತಿದ್ದಾಳೆ. ಮುಂದಿರುವುದೇ ರೋಚಕ ಕ್ಷಣ. ಮುಂದೇನಾಗುತ್ತೆ ಎನ್ನುವುದನ್ನು ಇನ್ನಷ್ಟೇ ಕಾದು ನೋಡಬೇಕಿದೆ. ಅಷ್ಟಕ್ಕೂ ದುರ್ಗಾಳಿಗೆ ದೇವಿಯ ವರ ಇರುವ ಕಾರಣ ಆಕೆಯೇ ಗೆಲ್ಲುವುದು ನಿಶ್ಚಿತವಾದರೂ ಅದರಲ್ಲಿ ಇನ್ನೇನು ಟ್ವಿಸ್ಟ್ ಸಿಗಲಿದೆ ನೋಡಬೇಕಿದೆ.