ಕರ್ಣನ ಮದ್ವೆ ಆಗ್ತಿದ್ದಂತೆ ಭವ್ಯಾ ಗೌಡ ಬಗ್ಗೆ ಎಲ್ರೂ ಹೇಳ್ತಿರೋದು, ಹೇಳಿದ್ದು ಇದೊಂದೇ ಮಾತು!

Published : Oct 21, 2025, 03:22 PM IST

Bhavya Gowda Karna: ಈ ಕ್ಷಣಕ್ಕೂ ಕರ್ಣ-ನಿತ್ಯಾ ಮದುವೆ ಆದ್ರೂ ಕೂಡ ನಿಧಿನಾ-ಕರ್ಣನಾ ಒಂದು ಮಾಡಿ ನಿರ್ದೇಶಕರೇ ಅಂತ ಫ್ಯಾನ್ಸ್‌ ಕೇಳ್ತಿದ್ದಾರೆ ಅಂದ್ರೆ ನಿಧಿ ಹವಾ ಹೇಗಿದೆ ಅಂತ ನೀವೇ ಲೆಕ್ಕ ಹಾಕಿ. ಏತನ್ಮಧ್ಯೆ ನಿಧಿ ಪಾತ್ರಧಾರಿ ಭವ್ಯ ಗೌಡ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ. 

PREV
17
ನಿಧಿ ಪಾತ್ರಧಾರಿ ಭವ್ಯ ಗೌಡ ಬಗ್ಗೆ

ಅಂತೂ ಕರ್ಣನ ಜೊತೆ ನಿತ್ಯಾ ಮದುವೆ ಆಯ್ತು. ಇಷ್ಟು ದಿನ ವೀಕ್ಷಕರಿಗೆ ಕರ್ಣ ಯಾರನ್ನ ಮದುವೆಯಾಗ್ತಾನೆ ಎಂಬ ಪ್ರಶ್ನೆ ಇತ್ತು. ಈಗ ಅದಕ್ಕೂ ಉತ್ತರ ಸಿಕ್ಕಿದೆ. ಅಷ್ಟೇ ಅಲ್ಲ, ಕರ್ಣ ನಿತ್ಯಾಳನ್ನ ಯಾಕೆ ಮದ್ವೆಯಾದ ಎಂಬುದೂ ಅರ್ಥ ಆಗಿದೆ. ಈ ಎಲ್ಲಾ ಘಟನೆಗಳ ಮಧ್ಯೆ ಸದ್ಯ ನಿಧಿ ಪಾತ್ರಧಾರಿ ಭವ್ಯ ಗೌಡ ಬಗ್ಗೆ ಒಂದು ಮಾತು ಕೇಳಿ ಬರುತ್ತಿದೆ. ಅದೇನಂತೀರಾ?. ಮುಂದೆ ಓದಿ..

27
ಹೆಚ್ಚಾದ್ರು ನಿಧಿ ಫ್ಯಾನ್ಸ್‌

ಯಾವಾಗ ಕರ್ಣ-ನಿಧಿ ಲವ್ ಮಾಡೋಕೆ ಶುರು ಮಾಡಿದರೋ ಅಂದಿನಿಂದಲೇ ನಿಧಿ ಫ್ಯಾನ್ಸ್‌ ಕೂಡ ಹೆಚ್ಚಾದ್ರು. ಸೋಶಿಯಲ್ ಮೀಡಿಯಾದಲ್ಲಿ ನಿಧಿ ಸ್ಮೈಲ್, ಸ್ಟೈಲ್ ಬಗ್ಗೆಯೇ ಮಾತು. ಜೊತೆಗೆ ಕರ್ಣ-ನಿಧಿ ಜೋಡಿ ಸೂಪರ್‌ ಎಂಬ ಟ್ಯಾಗ್‌ ಲೈನ್‌ ಕಾಣತೊಡಗಿದವು.

37
ನಿಧಿನೇ ಸ್ವೀಟ್‌

ಇತ್ತೀಚಿನ ದಿನಗಳಲ್ಲಂತೂ ನಿಧಿಗೆ ಏನಾದ್ರೂ ತೊಂದರೆಯಾದ್ರೆ, ತಮಗೆ ತೊಂದರೆಯಾದಂತೆ ಭಾವಿಸುತ್ತಿದ್ದ ಜನರು ವಿಲನ್‌ಗಳಿಗೆ ಹಿಗ್ಗಾಮುಗ್ಗಾ ಥರಾಟೆಗೆ ತೆಗೆದುಕೊಂಡಿದ್ದು ಉಂಟು. ಅಯ್ಯೋ ವಿಲನ್‌ಗಳನ್ನ ಬಿಡಿ, ಆಕೆಯ ಅಕ್ಕ ನಿತ್ಯಾ ಕೂಡ ಏನು ಅನ್ನುವ ಹಾಗಿರಲಿಲ್ಲ. ಮತ್ತೆ ನಿಧಿನೇ ಸ್ವೀಟ್‌ ಎನ್ನುವಷ್ಟರ ಮಟ್ಟಿಗೆ ಅಭಿಮಾನಿಗಳ ಸಂಪಾದಿಸತೊಡಗಿದರು ಭವ್ಯಗೌಡ.

47
ಕೇಳಿಬರುತ್ತಿವೆ ಪ್ರಶಂಸೆಯ ಮಾತುಗಳು

ಈ ಕ್ಷಣಕ್ಕೂ ಕರ್ಣ-ನಿತ್ಯಾ ಮದುವೆ ಆದ್ರೂ ಕೂಡ ನಿಧಿನಾ-ಕರ್ಣನಾ ಒಂದು ಮಾಡಿ ನಿರ್ದೇಶಕರೇ ಅಂತ ಫ್ಯಾನ್ಸ್‌ ಕೇಳ್ತಿದ್ದಾರೆ ಅಂದ್ರೆ ನಿಧಿ ಹವಾ ಹೇಗಿದೆ ಅಂತ ನೀವೇ ಲೆಕ್ಕ ಹಾಕಿ. ಏತನ್ಮಧ್ಯೆ ನಿಧಿ ಪಾತ್ರಧಾರಿ ಭವ್ಯ ಗೌಡ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ. ವಿಶೇಷವಾಗಿ ಅವರ ಅಭಿನಯಕ್ಕಾಗಿ.

57
ಹಿಂತಿರುಗಿ ನೋಡಿದರೆ..

ಹೌದು. ಕರ್ಣ ಮತ್ತು ನಿಧಿ ಅಕ್ಕ ನಿತ್ಯಾ ಮದುವೆ ಶಾಸ್ತ್ರಗಳು ನಡೆಯುತ್ತಿರುವ ವೇಳೆಗೆ, ಇತ್ತ ಕರ್ಣ ಪ್ರಪೋಸ್‌ ಮಾಡಬೇಕೆಂದುಕೊಂಡಿದ್ದ ಜಾಗಕ್ಕೆ ಬರುವ ನಿಧಿ, ಕರ್ಣ ಜೊತೆಯಲ್ಲೇ ಇದ್ದಾನೆ ಎಂಬಂತೆ ಭಾವಿಸಿಕೊಂಡು ಅವನ ಮಾತುಗಳನ್ನ ಕೇಳುತ್ತಾ, ಒಂದೊಂದೆ ಹೆಜ್ಜೆ ಹಾಕುತ್ತಾ ಉಡುಗೊರೆ ಸ್ವೀಕರಿಸಿದ್ದಾಳೆ. ಹಿಂತಿರುಗಿ ನೋಡಿದರೆ ಅಲ್ಲಿ ಕರ್ಣನೇ ಇಲ್ಲ.

67
ಫ್ಯಾನ್ಸ್‌ ಹೇಳ್ತಿರೋದೇನು?.

ಸದ್ಯ ಈ ಭಾವನಾತ್ಮಕ ದೃಶ್ಯಗಳಲ್ಲಿನ ಭವ್ಯಾ ಗೌಡ ಅವರ ಅಭಿನಯಕ್ಕೆ ವೀಕ್ಷಕರಿಂದ ಚಪ್ಪಾಳೆ ಸಿಕ್ಕಿದ್ದು, ನಿಮ್ಮ ಸ್ಥಾನದಲ್ಲಿ ನಾವೇ ಇದ್ದೇವೇನೋ ಎಂಬಂತೆ ಭಾಸವಾಯ್ತು ಅಂದಿದ್ದಾರೆ. ಜೊತೆಗೆ ನಿರ್ದೇಶಕರಿಗೆ ನಿಧಿಗೆ ಇಷ್ಟು ಕಷ್ಟಕೊಡಬೇಡಿ ಅಂದಿದ್ದಾರೆ. ಅಷ್ಟಕ್ಕೂ ಭವ್ಯ ಗೌಡ ಬಗ್ಗೆ ಫ್ಯಾನ್ಸ್‌ ಹೇಳ್ತಿರೋದೇನು?. ಅಂತೀರಾ.

77
ವೀಕ್ಷಕರ ತುಂಬು ಹೃದಯದ ಮಾತುಗಳಿವು

*ಇಷ್ಟು ಚಿಕ್ಕ ವಯಸ್ಸಿಗೆ ನಟನೆಯ ಜಾಸ್ತಿ ಅನುಭವ ಇಲ್ಲದಿದ್ದರೂ ಇಷ್ಟು ಚೆನ್ನಾಗಿ ಅಭಿನಯ ಮಾಡಿ ನಮ್ಮ ಮನಸ್ಸು ಗೆದ್ದಿದ್ದೀರಿ @bhavyagowda670. ಮುಂದೆ ಇನ್ನೂ ಒಳ್ಳೆಯ ಪಾತ್ರಗಳು ನಿಮ್ಮನ್ನು ಹುಡುಕಿಕೊಂಡು ಬರಲಿ. ಸದಾ ಕಾಲ ಅಭಿನಯ ಶಾರದೆ ನಿಮ್ಮ ಕೈ ಹಿಡಿಯಲಿ.
*ವಂಡರ್‌ಫುಲ್ ಆಕ್ಟಿಂಗ್ ನಿಧಿಮಾ.
*ನಮ್ ಭವ್ಯ ಗೌಡ ಆಕ್ಟಿಂಗ್ ಯಾರಿಗೆಲ್ಲ ಇಷ್ಟ ಆಯ್ತು ಲೈಕ್ ಮಾಡಿ.
*ನಿಧಿ ಆಕ್ಟಿಂಗ್ ಬೆಂಕಿ, ಪಾಪ ನಿಧಿ.
*ನಿನ್ನ ಅಭಿನಯಕ್ಕೆ ನೀನೆ ಸಾಟಿ ಕಂದ.
*ಭವ್ಯ ಬಿಟ್ಟು ಬೇರೆ ಯಾರೂ ನಿಧಿ ಪಾತ್ರ ಮಾಡೋಕೆ ಚಾನ್ಸೇ ಇಲ್ಲ. She's a true performer.
*ನಾವು ಈ ಸಂಚಿಕೆಗಾಗಿ ಕಾಯುತ್ತಿದ್ದೇವೆ. ಅವರಿಗೆ ಜನಪ್ರಿಯ ನಟಿ ಪ್ರಶಸ್ತಿ ಏಕೆ ಬಂತು ಎಂದು ಹೇಳಲು ಈ ದೃಶ್ಯ ಸಾಕು. ಪ್ರೇಕ್ಷಕರು ನಿಧಿಯ ನೋವನ್ನು ಅನುಭವಿಸುತ್ತಿದ್ದಾರೆ. ಒಳ್ಳೆಯ ನಟಿ ಮಾತ್ರ ಅದನ್ನು ಮಾಡಲು ಸಾಧ್ಯ. ನಿಧಿ ಮತ್ತು ರಮೇಶ್ ಪಾತ್ರವನ್ನು ನಿರ್ವಹಿಸುವುದು ತುಂಬಾ ಕಷ್ಟ. ಇಬ್ಬರ ಪಾತ್ರಗಳಿಗೂ ಹಲವು ಛಾಯೆಗಳಿವೆ. ನಿಧಿ ಮತ್ತು ರಮೇಶ್ ದೃಶ್ಯಗಳು ಎರಡೂ ಶೇಡ್‌ಗಳಲ್ಲಿ ನೋಡಲು ಯಾವಾಗಲೂ ರೋಮಾಂಚನಕಾರಿ.
*ಅದ್ಭುತ ನಟನೆ@bhavyagowda670. ಪ್ರತಿ ಭಾವನೆ, ಕಣ್ಣೀರು ಎಷ್ಟು ನೈಜ ಮತ್ತು ಹೃದಯಸ್ಪರ್ಶಿಯಾಗಿತ್ತೆಂದರೆ ಅದು ನಮ್ಮನ್ನು ಸಂಪೂರ್ಣವಾಗಿ ಅವರ ಪಾತ್ರದ ಲೋಕಕ್ಕೆ ಸೆಳೆಯಿತು.

ಹೀಗೆ ಫ್ಯಾನ್ಸ್‌ ಭವ್ಯಗೌಡ ಅವ್ರ ಬಗ್ಗೆ ಮಾತನಾಡಿರೋದನ್ನ ಜೀ. ವಾಹಿನಿಯ ಇನ್‌ಸ್ಟಾ ಪೇಜ್‌ನಲ್ಲಿ ನಾವು ನೋಡಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories