ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆದ ಮೋಡಿ ಮಾಡಿದ್ದ ಶೆಹನಾಜ್ ಗಿಲ್ ಅವರ ಸಹೋದರ ಶೆಹಬಾಜ್ ಅವರು ಭೋಜಪುರಿ ನಟಿ ನೀಲಂ ಗಿರಿ ಜೊತೆ ಆಗಾಗ ಕಾಮಿಡಿ ಮಾಡುತ್ತಿರುತ್ತಾರೆ. ಇತ್ತೀಚೆಗೆ ಅವರು ಪದ್ಯದ ರೂಪದಲ್ಲಿ, “ನಿನ್ನನ್ನು ಮೊದಲು ನೋಡಿದಾಗ ಲವ್ ಆಗಿತ್ತು, ಆಗ ನಾನು ದೂರದಿಂದ ನೋಡಿದ್ದೆ, ಹತ್ತಿರದಿಂದ ನಾನು ನೋಡಿರಲೇ ಇಲ್ಲ. ನೀನು ನನ್ನ ಲವ್ ಮಾಡ್ತೀಯಾ? ಎಂದು ಕೇಳಿದ್ದಾರೆ. ಆಗ ನೀಲಂ ಅವರು, “ಇಲ್ಲ” ಎಂದಿದ್ದಾರೆ. ಆಗ ಶೆಹಬಾಜ್, “ಒಳ್ಳೆಯದಾಯ್ತು, ಇಲ್ಲ ಅಂದ್ರೆ ನಾನು ಕೆಳಮಟ್ಟಕ್ಕೆ ಹೋಗುತ್ತಿದ್ದೆ” ಎಂದಿದ್ದಾರೆ.