2023, 2024, 2025ರಲ್ಲೂ ಲವ್‌ ಬ್ರೇಕಪ್;‌ ಆಕೃತಿ ಬಲೆಗೆ ಬಿದ್ದಿದ್ದ ಕನ್ನಡ Bigg Boss ಸ್ಪರ್ಧಿ ಯಾರು?

Published : Jan 30, 2026, 04:36 PM IST

ರೋಡೀಸ್ ಮತ್ತು ಸ್ಪ್ಲಿಟ್ಸ್‌ವಿಲ್ಲಾ ರಿಯಾಲಿಟಿ ಶೋ ಸ್ಪರ್ಧಿ ಆಕೃತಿ ನೇಗಿ, ಕಳೆದ ವರ್ಷ 'ರೈಸ್ ಅಂಡ್ ಫಾಲ್' (Rise and Fall) ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಈ ಶೋನಲ್ಲಿ ಅಂಶುಮತ್ ಎನ್ನುವ ಸ್ಪರ್ಧಿ ಜೊತೆ ಲವ್‌ನಲ್ಲಿ ಇರೋದಾಗಿ ಹೇಳಿದ್ದರು. ಈಗ ಇವರಿಬ್ಬರು ಬೇರೆ ಬೇರೆ ಆಗಿದ್ದಾರೆ. 

PREV
15
2025ರಲ್ಲಿ ಬ್ರೇಕಪ್

ಆಕೃತಿ ನೇಗಿ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, "ಅಂಶುಮತ್ ಮತ್ತು ನಾನು ಇನ್ನು ಮುಂದೆ ಜೊತೆಯಾಗಿ ಇರೋದಿಲ್ಲ. ನಾವು ಗೌರವಯುತವಾಗಿ ಪರಸ್ಪರ ದೂರವಾಗುತ್ತಿದ್ದೇವೆ. ಈ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಬೇಕು ಎಂದು ನಾವು ಎಲ್ಲರಲ್ಲೂ ವಿನಂತಿಸುತ್ತೇವೆ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.

25
ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇಲ್ಲ

ಇದನ್ನು ನೋಡಿ ಅನೇಕರು, "ನನಗೆ ಇದನ್ನು ನಂಬಲು ಆಗುತ್ತಿಲ್ಲ, ಮೊದಲು ಜಶ್ವಂತ್, ಈಗ ಇವರಾ? ಏನಾಗಿರಬಹುದು?, ಆಕೃತಿ ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್‌ ಆಗಿಲ್ಲ, ಇದೇ ಕಾರಣವಿರಬಹುದು ಎಂದು ಊಹಿಸಿದ್ದಾರೆ.

35
2023ರಲ್ಲಿ ಸಚಿನ್‌ ಶರ್ಮಾ ಜೊತೆ ಬ್ರೇಕಪ್

ಸಚಿನ್ ಶರ್ಮಾ ಎನ್ನುವ ರಿಯಾಲಿಟಿ ಶೋ ಸ್ಪರ್ಧಿ ಜೊತೆ ಆಕೃತಿ ಲವ್‌ನಲ್ಲಿ ಇದ್ದಿದ್ದರು. ಆಕೃತಿ ಎಂದೂ ಕೂಡ ರಿಲೇಶನ್‌ಶಿಪ್‌ನಲ್ಲಿ ನಂಬಿಕಸ್ತಳಾಗಿರಲಿಲ್ಲ, ಏಕಕಾಲದಲ್ಲಿ ಹಲವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಹೇಳಿದ್ದರು. ಆಕೃತಿ ತನ್ನನ್ನು 'ಆಪ್ಷನ್' ಆಗಿ ಬಳಸಿಕೊಂಡಳು ಎಂದು ಹೇಳಿದ್ದರು. ಇವರಿಬ್ಬರು ಪರಸ್ಪರ ಆರೋಪ ಮಾಡಿಕೊಂಡರು. ಇದು ಆಕೃತಿ ಇಮೇಜ್‌ ಮೇಲೆ ನೆಗೆಟಿವ್‌ ಪ್ರತಿಕ್ರಿಯೆ ಸಿಕ್ಕಿತ್ತು.

45
ಕನ್ನಡ ಬಿಗ್‌ ಬಾಸ್‌ ಸ್ಪರ್ಧಿ ಯಾರು?

ಬಿಗ್‌ ಬಾಸ್‌ ಕನ್ನಡ ಒಟಿಟಿ ಸ್ಪರ್ಧಿ ಜಶ್ವಂತ್‌ ಬೋಪಣ್ಣ ಜೊತೆ ಆಕೃತಿ ನೇಗಿ 2024ರಲ್ಲಿ ಲವ್‌ನಲ್ಲಿ ಇದ್ದಿದ್ದರು. ರಿಯಾಲಿಟಿ ಶೋ ಮೂಲಕ ಈ ಜೋಡಿ ಹೆಸರು ಮಾಡಿತ್ತು. ಆಮೇಲೆ ಆಕೃತಿ ಅವರ ಪೊಸೆಸ್ಸಿವ್‌ನೆಸ್‌ನಿಂದ ಸಾಕಷ್ಟು ಮನಸ್ತಾಪ ಆಗಿತ್ತು. ಆ ಬಳಿಕ ಇವರು ಬ್ರೇಕಪ್‌ ಘೋಷಣೆ ಮಾಡಿದ್ದರು.

55
ಮತ್ತೊಂದಿಷ್ಟು ರಿಲೇಶನ್‌ಶಿಪ್

ಇದರ ಜೊತೆಗೆ ದಿಗ್ವಿಜಯ್‌ ರಾಠಿ, ಸಿವೆಟ್ ತೋಮರ್ ಎನ್ನುವವರ ಜೊತೆ ಕೂಡ ಆಕತಿ ಲವ್‌ನಲ್ಲಿ ಇದ್ದಿದ್ದರಂತೆ. ಈ ಬಗ್ಗೆ ಕೂಡ ಚರ್ಚೆ ಆಗಿತ್ತು. ಕಳೆದ ಮೂರು ವರ್ಷಗಳಿಂದ ಆಕೃತಿ ನೇಗಿ ಅವರು ವರ್ಷಕ್ಕೆ ಒಂದರಂತೆ ಲವ್‌ ಮಾಡಿಕೊಂಡು, ಬ್ರೇಕಪ್‌ ಮಾಡಿಕೊಳ್ತಿದ್ದಾರೆ. 2026ಕ್ಕೆ ಲೋಡಿಂಗ್‌ ಆಗ್ತಿದೆ ಎಂದು ಕೆಲವರು ಕಾಮೆಂಟ್‌ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories