Bigg Boss Kannada 12 : ಬಿಗ್ ಬಾಸ್ ಖ್ಯಾತಿಯ ಜಾಹ್ನವಿ ಗಿಲ್ಲಿ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಗಿಲ್ಲಿ ನಟ ಬಿಗ್ ಬಾಸ್ ಗೆಲ್ಲಲು ಕಾರಣವಾದವರು ಯಾರೂ ಎಂಬುದನ್ನೂ ಜಾಹ್ನವಿ ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ 63 ದಿನಗಳ ಕಾಲ ಇದ್ದ ನಟಿ ಹಾಗೂ ಆಂಕರ್ ಜಾಹ್ನವಿಗೆ ಗಿಲ್ಲಿ ನಟ ಬಿಗ್ ಬಾಸ್ ಗೆದ್ದಿದ್ದು ಖುಷಿ ನೀಡಿದೆಯಂತೆ. ಬಿಗ್ ಬಾಸ್ ಫಿನಾಲೆ ಮುಗಿದು ಎರಡು ವಾರವಾದ್ರೂ ಬಿಗ್ ಬಾಸ್ ಗುಂಗು ಹೋಗಿಲ್ಲ. ಬಿಗ್ ಬಾಸ್ ಸ್ಪರ್ಧಿಗಳು ಎಲ್ಲಿಗೆ ಹೋದ್ರೂ ಜನರು ರಿಯಾಲಿಟಿ ಶೋ, ಫಿನಾಲೆ ಬಗ್ಗೆ ಪ್ರಶ್ನೆ ಮಾಡ್ತಾರೆ. ಈ ಸಂದರ್ಭದಲ್ಲಿ ಜಾಹ್ನವಿ, ಗಿಲ್ಲಿ ಗೆಲುವು ಖುಷಿ ತಂದಿದೆ ಎಂದಿದ್ದಾರೆ. ಗಿಲ್ಲಿ ನಗಿಸಿದ್ದಾರೆ. ಟೆನ್ಷನ್ ಮರೆಸಿದ, ನಗಿಸಿದ ಗಿಲ್ಲಿಯನ್ನು ಜನರು ಇಷ್ಟಪಟ್ಟಿದ್ದಾರೆ. ಗಿಲ್ಲಿಗೆ ಸಿಕ್ಕ ಪ್ರೀತಿ ಖುಷಿ ನೀಡಿದೆ ಎಂದಿದ್ದಾರೆ.
25
ಕಾಲೆಳೆದ ಗಿಲ್ಲಿ ಫ್ಯಾನ್ಸ್
ಬಿಗ್ ಬಾಸ್ ಮನೆಯಲ್ಲಿ ಆರಂಭದಲ್ಲಿ ಗಿಲ್ಲಿ ಜೊತೆ ಉತ್ತಮ ಆಟ ಪ್ರದರ್ಶನ ಮಾಡಿದ್ದ ಜಾಹ್ನವಿ ನಂತ್ರ ಬದಲಾಗಿದ್ದರು. ಗಿಲ್ಲಿ ವೈಯಕ್ತಿಕ ಜೋಕ್ ಜಾಹ್ನವಿಗೆ ಇಷ್ಟವಾಗ್ತಿರಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ ಮನೆಯಿಂದ ಬಂದು, ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ಫ್ಯಾನ್ಸ್ ಸಂಖ್ಯೆ ನೋಡಿದ್ಮೇಲೂ ಜಾಹ್ನವಿ, ಕೆಲ ಪೋಸ್ಟ್ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ವೋಟ್ ವಿಚಾರ ಬಂದಾಗ ಅಷ್ಟೊಂದು ತಲೆ ಕೆಡಿಸಿಕೊಳ್ಬೇಡಿ ಅಂತ ಜಾಹ್ನವಿ ಹೇಳಿದ್ದರು. ಈಗ ಜಾಹ್ನವಿ, ಗಿಲ್ಲಿ ಗೆಲುವು ಖುಷಿ ತಂದಿದೆ ಎಂದಿರೋದನ್ನು ಕೇಳಿದ ಗಿಲ್ಲಿ ಫ್ಯಾನ್ಸ್, ಜಾಹ್ನವಿ ಕಾಲೆಳೆದಿದ್ದಾರೆ. ಗಿಲ್ಲಿ ಹವಾ ನೋಡಿ ಭಯ ಆಗಿರ್ಬೇಕು ಅಂತ ಕಮೆಂಟ್ ಮಾಡಿದ್ದಾರೆ.
35
ಗಿಲ್ಲಿ ಗೆಲುವಿಗೆ ಯಾರು ಕಾರಣ?
ಜಾಹ್ನವಿ ಪ್ರಕಾರ ಗಿಲ್ಲಿ ಇಷ್ಟೊಂದು ಪ್ರಸಿದ್ಧಿಯಾಗಲು ಅವರ ತಮಾಷೆ ಮಾತ್ರವಲ್ಲ ಅವರ ತಮಾಷೆಯನ್ನು ಮತ್ತಷ್ಟು ಮಜವಾಗಿ ತೋರಿಸಿದ ಸೋಶಿಯಲ್ ಮೀಡಿಯಾ ಕೂಡ ಕಾರಣ. ಗಿಲ್ಲಿ ಮನೆಯೊಳಗೆ ಮಾಡ್ತಿದ್ದ ತಮಾಷೆಗೆ ಮ್ಯೂಸಿಕ್ ಸೇರಿಸಿ ಹಾಡಿನಂತೆ ಮಾಡ್ದಾಗ ಅದು ನೋಡುಗರಿಗೆ ಖುಷಿ ನೀಡಿದೆ. ನೋವಿನಲ್ಲಿದ್ದವರು ಇವೆಲ್ಲವನ್ನು ನೋಡಿ ನಕ್ಕಿದ್ದಾರೆ. ಗಿಲ್ಲಿ ಇಷ್ಟೊಂದು ಪ್ರಸಿದ್ಧಿಗೆ ಬರಲು ಸೋಶಿಯಲ್ ಮೀಡಿಯಾವೂ ಕಾರಣವಾಗಿದ್ದು, ಅವರಿಗೆ ಗಿಲ್ಲಿ ಧನ್ಯವಾದ ಹೇಳ್ಬೇಕು ಎಂದು ಜಾಹ್ನವಿ ಹೇಳಿದ್ದಾರೆ.
ಮನೆಯಲ್ಲಿ ಗಿಲ್ಲಿ ಮಾಡ್ತಿದ್ದ ತಮಾಷೆ ಹೊರಗಿನವರಿಗೆ ಖುಷಿ ನೀಡಿದ್ರೂ ಒಳಗಿನವರಿಗೆ ನೋವು ನೀಡಿದೆಯಂತೆ. ಗಿಲ್ಲಿ ಮಾಡ್ತಿದ್ದ ಕೆಲ ತಮಾಷೆ ನನಗೆ ನೋವು ತಂದಿದೆ. ಅದು ನನ್ನ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಅದನ್ನೆಲ್ಲ ಮರೆಯಲು ಸಾಧ್ಯವಿಲ್ಲ ಅಂತ ಜಾಹ್ನವಿ ಹೇಳಿದ್ದಾರೆ.
55
ಏಕಾಏಕಿ ಬಂದಿದ್ದಲ್ಲ ಈ ಗೆಲುವು
ಗಿಲ್ಲಿ ಒಂದೇ ದಿನಕ್ಕೆ ಪ್ರಸಿದ್ಧಿಗೆ ಬಂದಿಲ್ಲ ಅಂತ ಜಾಹ್ನವಿ ಹೇಳಿದ್ದಾರೆ. ಗಿಲ್ಲಿಯ ಕೆಲ ಜೋಕ್ಸ್ ಬಿಗ್ ಬಾಸ್ ಮನೆಗೆ ಹೋಗೋ ಮೊದಲೇ ನನಗೆ ಗೊತ್ತಿತ್ತು. ಆದ್ರೆ ವಿಡಿಯೋ ನೋಡಿರಲಿಲ್ಲ ಎಂದಿದ್ದಾರೆ ಜಾಹ್ನವಿ. ಗಿಲ್ಲಿ ನಾಲ್ಕೈದು ವರ್ಷಗಳ ಪರಿಶ್ರಮದಿಂದ ಇಷ್ಟೊಂದು ಪ್ರಸಿದ್ಧಿ ಪಡೆದಿದ್ದಾರೆ. ಒಂದೇ ಟೇಕ್ ನಲ್ಲಿ ಅವರು ಮಾಡ್ತಿದ್ದ ತಮಾಷೆ, ಸೋಶಿಯಲ್ ಮೀಡಿಯಾದಲ್ಲಿ ಹಾಕ್ತಿದ್ದ ವಿಡಿಯೋಗಳು ಹಾಗೂ ಆ ಕ್ಷಣಕ್ಕೆ ನೀಡ್ತಿದ ಕೌಂಟರ್ ಅವರ ಪ್ರಸಿದ್ಧಿಗೆ ಕಾರಣ ಅಂತ ಜಾಹ್ನವಿ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.