ಗೌತಮ್‌ ಮಾಸ್ಟರ್ ಪ್ಲಾನ್‌ಗೆ ಮಕ್ಕರ್ ಆದ್ರು ಜೈದೇವ್-ಶಕುಂತಲಾ; ಇದಪ್ಪಾ ಕ್ಲೈಮ್ಯಾಕ್ಸ್

Published : Nov 06, 2026, 07:33 PM IST

ಅಮೃತಧಾರೆ ಧಾರಾವಾಹಿಯ ಅಂತಿಮ ಘಟ್ಟದಲ್ಲಿ ಗೌತಮ್ ಪ್ಲಾನ್ ಯಶಸ್ವಿಯಾಗಿದ್ದು, ಕ್ಯಾಮೆರಾ ಇರುವುದು ತಿಳಿಯದೆ ಜೈದೇವ್ ತನ್ನ ಕೊಲೆಗಳ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಮಲ್ಲಿ ಮತ್ತು ಜೀವ ದಿಯಾಳ ಮೂಳೆಗಳನ್ನು ಸಂಗ್ರಹಿಸಿದ್ದು, ಜೈದೇವ್‌ನಿಂದ ಭೂಮಿಕಾ ಹಾಗೂ ದೀಪಿಕಾ ತಪ್ಪಿಸಿಕೊಂಡಿದ್ದಾರೆ.

PREV
15
Amruthadhaare

ಅಮೃತಧಾರೆ ಸೀರಿಯಲ್ ಕೊನೆಯ ಸಂಚಿಕೆಗಳು ಪ್ರಸಾರವಾಗುತ್ತಿದ್ದು, ಜೈದೇವ್‌ನನ್ನು ಖೆಡ್ಡಾಕ್ಕೆ ಕೆಡವಲು ಗೌತಮ್ ಮಾಡಿದ ಪ್ಲಾನ್ ಬಹುತೇಕ ಸಕ್ಸಸ್ ಆಗಿದೆ. ಭೂಮಿಕಾ ಮತ್ತು ದೀಪಿಕಾ ಧರಿಸಿರೋ ನೆಕ್ಲೇಸ್‌ನಲ್ಲಿ ಕ್ಯಾಮೆರಾ ಇರೋ ವಿಷಯ ತಿಳಿಯದೇ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.

25
ಜೈದೇವ್ ಬಾಯಿಂದ ಸತ್ಯ

ಹೌದು, ಮಾಲ್‌ನಲ್ಲಿ ಸಿಕ್ಕ ದೀಪಿಕಾ ಮತ್ತು ಭೂಮಿಕಾಳನ್ನು ಬಲವಂತವಾಗಿ ಕಾರ್‌ನಲ್ಲಿ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ತಾನೆಷ್ಟು ಕ್ರೂರಿ ಎಂದು ಹೇಳಿಕೊಳ್ಳುವ ಸಂದರ್ಭದಲ್ಲಿ ಜೈದೇವ್ ಬಾಯಿಂದ ಸತ್ಯ ಹೊರ ಬಂದಿದೆ. ಈ ಹಿಂದೆ ದಿಯಾ ತನಗೆ ಮೋಸ ಮಾಡಿದ್ದಕ್ಕೆ ಆಕೆಯ ಪ್ರಾಣ ತೆಗೆದಿರೋ ಬಗ್ಗೆ ಹೇಳಿದ್ದಾನೆ. ಹಾಗೆಯೇ ಮತ್ತೊಬ್ಬ ಪ್ರೇಯಸಿಯನ್ನು ಮುಗಿಸಿರೋ ಬಗ್ಗೆ ಹೇಳಿದ್ದಾನೆ.

35
ದಿಯಾ ದೇಹ ಸುಟ್ಟಿ ಹಾಕಿರೋ ಸ್ಥಳ

ಮತ್ತೊಂದೆಡೆ ಜೈದೇವ್ ವಿರುದ್ಧ ತನಿಖೆ ನಡೆಸುತ್ತಿರೋ ಮಲ್ಲಿ, ದಿಯಾ ಬಗ್ಗೆ ಮಾಹಿತಿಗಳು ಲಭ್ಯವಾಗುತ್ತಿವೆ. ದಿಯಾ ದೇಹ ಸುಟ್ಟಿ ಹಾಕಿರೋ ಸ್ಥಳಕ್ಕೆ ಜೀವ ಮತ್ತು ಮಲ್ಲಿ ಭೇಟಿ ನೀಡಿದ್ದಾರೆ. ಆ ಸ್ಥಳದಲ್ಲಿದ್ದ ಮೂಳೆಗಳನ್ನು ಸಂಗ್ರಹಿಸಿದ್ದಾರೆ. ಜೈದೇವ್ ವಿರುದ್ಧ ಎಲ್ಲರೂ ಒಂದೊಂದಾಗಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.

45
ಎಸ್ಕೇಪ್ ಆದ್ರು ಇಬ್ಬರು

ದೀಪಿಕಾ ಮತ್ತು ಭೂಮಿಕಾಳನ್ನು ಕಾರಿನಲ್ಲಿ ಜೈದೇವ್ ಬಲವಂತವಾಗಿ ಕರೆದುಕೊಂಡು ಹೋಗುತ್ತಿದ್ದನು. ಈ ವೇಳೆ ಜೈದೇವ್ ಕಣ್ಣಿಗೆ ಸ್ಪ್ರೇ ಮಾಡಿ, ಫುಟ್‌ಪಾತ್‌ ಮೇಲೆ ಮಲಗಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಜೈದೇವ್ ಎಚ್ಚರಗೊಂಡಾಗ ತಾನು ಫುಟ್‌ಪಾತ್ ಮೇಲೆ ಬಿದ್ದಿರೋದನ್ನು ನೋಡಿ ಶಾಕ್ ಆಗಿದ್ದಾನೆ.

55
ದೀಪಿಕಾ ಮತ್ತು ಭೂಮಿಕಾ ಅಕ್ಕ-ತಂಗಿಯರು

ಜೈದೇವ್ ಮತ್ತು ಶಕುಂತಲಾಗೆ ಭೂಮಿಕಾ ಬದುಕಿರೋ ವಿಷಯ ಗೊತ್ತಿಲ್ಲ. ಇದೀಗ ದೀಪಿಕಾ ರೀತಿಯಲ್ಲಿ ಮತ್ತೊಬ್ಬಾಕೆ ಇರೋ ವಿಷಯ ತಿಳಿದು ಜೈದೇವ್ ಮತ್ತು ಶಕುಂತಲಾ ಶಾಕ್ ಆಗಿದ್ದಾರೆ. ಒಟ್ಟಿನಲ್ಲಿ ಇಬ್ಬರು ಕೆಡಿಗಳ ವಿರುದ್ಧ ಒಂದೊಂದೇ ಸಾಕ್ಷ್ಯಗಳು ಲಭ್ಯವಾಗುತ್ತಿವೆ. ಇದೆಲ್ಲದರ ನಡುವೆ ದೀಪಿಕಾ ಮತ್ತು ಭೂಮಿಕಾ ಅಕ್ಕ-ತಂಗಿಯರು ಎಂಬ ಸತ್ಯ ಹೊರಗೆ ಬರಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories