ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಮಹಾನಟಿ ಇದೀಗ ಕೊನೆಯ ಹಂತಕ್ಕೆ ಬಂದು ನಿಂತಿದ್ದು, ಟಿಕೆಟ್ ಟು ಫಿನಾಲೆಯಲ್ಲಿ ಐವರಿಗೆ ಫೈನಲ್ ಟಿಕೆಟ್ ಸಿಕ್ಕಿದ್ದು, ಈ ಐವರಲ್ಲಿ ಮಹಾನಟಿ ಕಿರೀಟ ಯಾರಿಗೆ ಸೇರಲಿದೆ ಅನ್ನೋದು ಇನ್ನು ಒಂದು ವಾರದಲ್ಲಿ ರಿವೀಲ್ ಆಗಲಿದೆ.
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದು ‘ಮಹಾನಟಿ’. ಸೀಸನ್ 1 ದೊಡ್ಡ ಯಶಸ್ಸನ್ನು ಕಂಡಿದ್ದು, ಇದೀಗ ಮಹಾನಟಿ ಸೀಸನ್ 2 ಪ್ರಸಾರವಾಗುತ್ತಿದ್ದು, ಕೊನೆಯ ಹಂತಕ್ಕೆ ಬಂದು ನಿಂತಿದೆ. ಐವರು ಸ್ಪರ್ಧಿಗಳು ಫೈನಲ್ ಗೆ ಟಿಕೆಟ್ ಗೆದ್ದಿದ್ದಾರೆ.
27
ಟಿಕೆಟ್ ಟು ಫಿನಾಲೆ ಗೆದ್ದ ಸ್ಪರ್ಧಿಗಳು
ಮಹಾನಟಿ ಸ್ಪರ್ಧೆಗೆ 16 ಜನ ಕಂಟೆಸ್ಟಂಟ್ ಗಳು ಆಯ್ಕೆಯಾಗಿದ್ದು, ಅವರಲ್ಲಿ ಹತ್ತು ಜನರು ಕಳೆದ ವಾರ ಸೆಮಿ ಫೈನಲ್ ರೌಂಡ್ ಗೆ ಆಯ್ಕೆಯಾಗಿದ್ದರು. ಇದೀಗ ನಿನ್ನೆ ನಡೆದ ಟಿಕೆಟ್ ಟು ಫಿನಾಲೆ ಸೆಮಿ ಫೈನಲ್ ರೌಂಡ್ ನಲ್ಲಿ ಐವರು ಸ್ಪರ್ಧಿಗಳು ಟಿಕೆಟ್ ಪಡೆದು, ಗ್ರಾಂಡ್ ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ.
37
ಇವರೇ ನೋಡಿ ಟಾಪ್ 5 ಫೈನಲಿಸ್ಟ್ ಗಳು
ಇಷ್ಟು ವಾರದ ನಟನೆ ಹಾಗೂ ನಿನ್ನೆ ನಡೆದಂತಹ ಸೆಮಿಫಿನಾಲೆ ರೌಂಡಲ್ಲಿ ತಮ್ಮ ನಡೆನೆಯಿಂದ ತೀರ್ಪುಗಾರದ ಮನ ಗೆದ್ದ ಶ್ರೇಯಾ ಅಗಮ್ಯ, ವಂಶಿ, ಭೂಮಿಕಾ ತಮ್ಮೇಗೌಡ, ಮಾನ್ಯ ರಮೇಶ್ ಮತ್ತು ವರ್ಷ ದಿಗ್ರಜೆ ಜೈನ್ ಅವರು ಟಿಕೆಟ್ ಟು ಫಿನಾಲೆಯಲ್ಲಿ ಗೆದ್ದು ಇದೀಗ ಗ್ರಾಂಡ್ ಫಿನಾಲೆಗೆ ಏಂಟ್ರಿ ಕೊಟ್ಟಿರುವ ಸಂಭ್ರಮದಲ್ಲಿದ್ದಾರೆ.
ಮಹಾನಟಿ ಎರಡನೇ ಸೀಸನ್ ಜೂನ್ 14 ರಿಂದ ಸಂಜೆ 7:30ಕ್ಕೆ ಪ್ರಸಾರವಾಗುತ್ತಿದ್ದು, ಇದೀಗ ಕೊನೆಯ ಹಂತವನ್ನು ತಲುಪಿದ್ದು, ನವಂಬರ್ 1,2 ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಈ ದಿನ ಯಾರು ಎರಡನೇ ಸೀಸನ್ ವಿನ್ನರ್ ಆಗಿ, ಮಹಾನಟಿ ಕಿರೀಟ ಧರಿಸಲಿದ್ದಾರೆ ಅನ್ನೋದು ತಿಳಿಯಲಿದೆ.
57
ಸೀಸನ್ 1 ವಿನ್ನರ್ ಈಗ ನಾಯಕಿ
ಮಹಾನಟಿ ರಿಯಾಲಿಟಿ ಶೋಗೆ ಸ್ಪರ್ಧಿಗಳು ತಾವು ಕೂಡ ಒಬ್ಬ ನಟಿಯಾಗುವ ಕನಸುಗಳನ್ನು ಹೊತ್ತು ಬರುತ್ತಾರೆ. ಕಳೆದ ಸೀಸನ್ 1ರ ವಿನ್ನರ್ ಆಗಿರುವ ಪ್ರಿಯಾಂಕಾ ಆಚಾರ್ ಅವರು ತರುಣ್ ಸುಧೀರ್ ನಿರ್ಮಾಣ ಮಾಡಿರುವ ಏಳುಮಲೆ ಸಿನಿಮಾದ ನಾಯಕಿಯಾಗುವ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದು, ನಟಿಯ ನಟನೆಗೆ ಸಿನಿರಸಿಕರು ಮನ ಸೋತಿದ್ದಾರೆ.
67
ದಿಗ್ಗಜರ ತೀರ್ಪು
ಮಹಾನಟಿ ಸೀಸನ್ 2 ರಲ್ಲಿ ನಟ, ನಿರ್ದೇಶಕ ರಮೇಶ್ ಅರವಿಂದ್ ಈ ಶೋನ ಮಾಸ್ಟರ್ ಮೈಂಡ್ ಆಗಿದ್ದಾರೆ. ಇವರ ಜೊತೆಗೆ ನಟಿ ನಿಶ್ವಿಕಾ ನಾಯ್ಡು, ಎವರ್‌ಗ್ರೀನ್ ನಟಿ ಪ್ರೇಮ ಹಾಗೂ ನಿರ್ದೇಶಕ ತರುಣ್ ಸುಧೀರ್ ತೀರ್ಪುಗಾರಾಗಿದ್ದಾರೆ, ಜನಪ್ರಿಯ ನಿರೂಪಕಿ ಅನುಶ್ರೀ ಈ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ.
77
ಯಾರಾಗಬಹುದು ವಿನ್ನರ್?
ವೀಕ್ಷಕರು ಹಲವರ ಹೆಸರನ್ನು ವಿನ್ನರ್ ಆಗಿ ಹೇಳುತ್ತಿದ್ದಾರೆ. ಆದರೆ ಹೆಚ್ಚು ಜನರು ವಂಶಿನೇ ಈ ಸೀಸನ್‌ನ ವಿನ್ನರ್ ಎನ್ನುತ್ತಿದ್ದಾರೆ. ವಂಶಿ ಈ ಮೊದಲು ಡ್ರಾಮಾ ಜೂನಿಯರ್ಸ್ ಸೀಸನ್ 2ರಲ್ಲಿ ಭಾಗವಹಿಸಿದ್ದರು. ಅಲ್ಲದೇ 'ಜ್ಯೂನಿಯರ್ ಲಕ್ಷ್ಮಿ' ಎಂಬ ಬಿರುದು ಕೂಡ ಪಡೆದಿದ್ದರು. ಸೀಸನ್ ವಿನ್ನರ್ ಕೂಡ ಆಗಿದ್ದರು. ಎಂಟು ವರ್ಷದ ಬಳಿಕ ಇದೀಗ ವಂಶಿ ಮಹಾನಟಿ ಕಿರೀಟ ಗೆದ್ದು ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವರೇ ಕಾದು ನೋಡಬೇಕು.