Amruthadhaare: ಪುಟಾಣಿ ಮಿಂಚು ನೋವಿಗೆ ಅಮ್ಮನಾಗಿ ಸಾಂತ್ವನ ನೀಡಿದ ಭೂಮಿಕಾ- ಏನೀ ಒಡಲ ರಹಸ್ಯ?

Published : Oct 27, 2025, 04:14 PM IST

ಅಮೃತಧಾರೆ ಧಾರಾವಾಹಿಯು ರೋಚಕ ಹಂತ ತಲುಪಿದ್ದು, ಗೌತಮ್ ದತ್ತುಪುತ್ರಿ ಮಿಂಚು ಮತ್ತು ಭೂಮಿಕಾ ಭೇಟಿಯಾಗಿದ್ದಾರೆ. ಮಿಂಚುವಿನ ಡೈರಿ ಅಭ್ಯಾಸ ಹಾಗೂ ಕೈ ಮೇಲಿನ ಮಚ್ಚೆಯು ಭೂಮಿಕಾಗೆ ಹಳೆಯ ನೆನಪುಗಳನ್ನು ತರುತ್ತಿದ್ದು, ಈ ಬಾಲಕಿಯೇ ಗೌತಮ್-ಭೂಮಿಕಾರನ್ನು ಒಂದುಗೂಡಿಸುವ ಲಕ್ಷಣಗಳು ಕಾಣಿಸುತ್ತಿವೆ.

PREV
16
ರೋಚಕ ಟ್ವಿಸ್ಟ್​

ಅಮೃತಧಾರೆ (Amrthadhaare) ಸೀರಿಯಲ್ ಈಗ ರೋಚಕ ಘಟ್ಟ ತಲುಪಿದೆ. ಗೌತಮ್​ ದತ್ತುಪುತ್ರಿ ಮಿಂಚು ಭೂಮಿಕಾಗೆ ಹತ್ತಿರವಾಗುತ್ತಿದ್ದಾಳೆ. ಭೂಮಿಕಾ ಮನೆಗೆ ಬಂದಿದ್ದ ಮಿಂಚುವಿನ ಗುಣ ನೋಡಿ ಭೂಮಿಕಾಗೆ ತುಂಬಾ ಖುಷಿಯಾಗಿದೆ. ಆಕೆಯ ಬಳಿ ಮಾತನಾಡುತ್ತಾ ತನ್ನ ಹಿಂದಿನ ದಿನಗಳನ್ನು ಮೆಲುಕು ಹಾಕಿಕೊಳ್ಳುತ್ತಿದ್ದಾಳೆ ಭೂಮಿಕಾ.

26
ಮಿಂಚು ಜೊತೆ ಹರಟೆ

ಕೈಯಲ್ಲಿರುವ ಮಚ್ಚೆಯನ್ನು ನೋಡಿದ ಭೂಮಿಕಾ, ಇದೇನಿದು ಎಂದಾಗ ಮಿಂಚು, ಇದು ಹುಟ್ಟುತ್ತಲೇ ಇದೆ. ತುಂಬಾ ಲಕ್ಕಿ ಅಂತೆ. ಆದರೆ ನಾನು ಮಾತ್ರ ಅನ್​ಲಕ್ಕಿ ಎಂದಿದ್ದಾಳೆ.

36
ಲಕ್ಕಿ ಎಂದ ಭೂಮಿಕಾ

ಅದಕ್ಕೆ ಭೂಮಿಕಾ ಹಾಗೆ ಯಾಕೆ ಹೇಳುತ್ತಿ? ನೀನು ತುಂಬಾ ಲಕ್ಕಿ. ಅಷ್ಟು ಒಳ್ಳೆಯ ಅಪ್ಪ ಸಿಕ್ಕಿದ್ದಾರೆ. ಎಲ್ಲರೂ ನಿನ್ನನ್ನು ಅಷ್ಟು ಪ್ರೀತಿ ಮಾಡುತ್ತಾರೆ ಎಂದಾಗ ಮಿಂಚು, ನನ್ನ ಅಪ್ಪ ತುಂಬಾ ಒಳ್ಳೆಯವರು ಎಂದು ನಿಮಗೆ ಹೇಗೆ ಗೊತ್ತಾಯ್ತು? ಅವರು ನಿಮಗೆ ಮೊದಲೇ ಗೊತ್ತಾ? ಎಂದು ಪ್ರಶ್ನಿಸಿದಾಗ ಭೂಮಿಕಾ ಅರೆ ಕ್ಷಣ ತಬ್ಬಿಬ್ಬಾಗ್ತಾಳೆ.

46
ಅಪ್ಪನ ಬಗ್ಗೆ ಭೂಮಿಕಾ

ಕೊನೆಗೆ ಸಾವರಿಸಿಕೊಂಡು, ಇಲ್ಲ ನಿನ್ನನ್ನು ನೋಡಿದ್ರೆ ನಿನ್ನ ಅಪ್ಪನೂ ತುಂಬಾ ಒಳ್ಳೆಯವರು ಎನ್ನೋದು ಗೊತ್ತಾಗತ್ತೆ ಎನ್ನುತ್ತಾಳೆ. ಕೊನೆಗೆ ಭೂಮಿಕಾ ಹೇಳಿದ ಮಾತೊಂದನ್ನು ನಾನು ಡೈರಿಯಲ್ಲಿ ಬರೆದಿಟ್ಟುಕೊಳ್ಳುವೆ ಎನ್ನುತ್ತಾಳೆ ಮಿಂಚು.

56
ಡೈರಿ ಬರೆಯುವ ಅಭ್ಯಾಸ

ನಿನಗೆ ಡೈರಿ ಬರೆಯುವ ಅಭ್ಯಾಸ ಇದ್ಯಾ ಕೇಳಿದಾಗ, ಮಿಂಚು ಹೌದು ಎನ್ನುತ್ತಾ ಡೈರಿ ಬರೆದರೆ ಏನೆಲ್ಲಾ ಲಾಭ ಎನ್ನುವ ಬಗ್ಗೆ ಹೇಳುತ್ತಾಳೆ. ಅಸಲಿಗೆ ಈ ಮಾತನ್ನು ಸ್ವತಃ ಭೂಮಿಕಾ ಗೌತಮ್​ಗೆ ಹೇಳಿದ್ದೇ ಆಗಿರುವುದರಿಂದ ಆ ದಿನಗಳಿಗೆ ಜಾರುತ್ತಾಳೆ ಭೂಮಿಕಾ.

66
ಯಾರೀ ಬಾಲಕಿ?

ಆಮೇಲೆ ಗೌತಮ್​ ನಿನ್ನನ್ನು ಆ ಆಂಟಿ ಯಾಕೆ ಮನೆಗೆ ಕರೆದದ್ದು ಕೇಳಿದಾಗ ಊಟಕ್ಕೆ ಎನ್ನುತ್ತಾಳೆ ಮಿಂಚು. ಕೊನೆಗೆ ನಿಮ್ಮ ಬಗ್ಗೆ ತುಂಬಾ ಕೇಳಿದ್ರು ಅಂತೆಲ್ಲಾ ಹೇಳಿದಾಗ ಗೌತಮ್​ ಹಿರಿಹಿರಿ ಹಿಗ್ಗುತ್ತಾನೆ. ಒಟ್ಟಿನಲ್ಲಿ ಮಿಂಚುವಿನಿಂದ ಗಂಡ-ಹೆಂಡತಿ ಒಂದಾಗೋದಂತೂ ಗ್ಯಾರೆಂಟಿ ಎನ್ನುವ ಹಾಗಾಗಿದೆ. ಅದೇ ಇನ್ನೊಂದೆಡೆ, ಈ ಬಾಲಕಿ ಯಾರಿರಬಹುದು ಎನ್ನುವ ಸಂದೇಹ ಕೂಡ ವೀಕ್ಷಕರನ್ನು ಕಾಡುತ್ತಿದೆ.

ಪ್ರೋಮೋ ನೋಡಲು ಮೇಲೆ ಕ್ಲಿಕ್​ ಮಾಡಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories