ಡ್ರಾಮ ಮಾಡಿದ್ರೆ ಹೈಲೈಟ್, ನಿಯತ್ತಾಗಿ ಆಡೋರು ಮೂಲೆಗುಂಪು; ಧನುಷ್, ಅಭಿ ಪರ ಬ್ಯಾಟ್ ಬೀಸಿದ Bigg Boss ವೀಕ್ಷಕರು

Published : Oct 27, 2025, 03:57 PM IST

BBK 12: ಬಿಗ್ ಬಾಸ್ ಕನ್ನಡ ಸೀಸನ್ 12 ಭರ್ಜರಿಯಾಗಿ ಸಾಗುತ್ತಿದೆ. ಕಳೆದ ಮೂರು ವಾರಗಳಿಂದ ಜಗಳಗಳೇ ಹೈಲೈಟ್ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ವೀಕ್ಷಕರು ಕಿಡಿ ಕಾರಿದ್ದು, ನಿಯತ್ತಾಗಿ ಆಡುವ ಧನುಷ್ ಗೌಡ ಮತ್ತು ಅಭಿಷೇಕ ಅವರನ್ನು ಹೈಲೈಟ್ ಮಾಡಲ್ಲ ಎಂದು ದೂರಿದ್ದಾರೆ.

PREV
16
ಬಿಗ್ ಬಾಸ್ ಕನ್ನಡ

ಬಿಗ್ ಬಾಸ್ ಕನ್ನಡ ಸೀಸನ್ 12 ಪ್ರಸಾರವಾಗಿ ನಾಲ್ಕು ವಾರಗಳಿ ಮುಗಿದೆ. ಈಗಾಗಲೇ ಐವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದು, ಮೂವರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಆದ್ರೆ ಇಲ್ಲಿವರೆಗೆ ಸದ್ದು ಮಾಡ್ತಿರೋದೆಲ್ಲಾ ಜಗಳುಗಳು ಅಷ್ಟೇ.

26
ಜಗಳ ಹೈಲೈಟ್

ದೊಡ್ಮನೆಯಲ್ಲಿ ಮೊದಲ ವಾರದಿಂದ ಹಿಡಿದು ಇಲ್ಲಿವರೆಗೆ ಜಗಳಗಳೇ ಹೈಲೈಟ್ ಆಗಿವೆ. ಅದರಲ್ಲೂ ಅಶ್ವಿನಿ ಗೌಡ ಅವರು ಎಲ್ಲಾ ವಿಷಯಕ್ಕೂ ತಾವೇ ಹೋಗಿ ಅಲ್ಲಿ ಜಗಳ ಸೃಷ್ಟಿಸುವಂತಿದೆ. ಹಾಗಾಗಿ ಎಲ್ಲಾ ಪ್ರೊಮೋಗಳಲ್ಲೂ ಪ್ರತಿದಿನದ ಸಂಚಿಕೆಯಲ್ಲೂ ಅಶ್ವಿನಿ ಮತ್ತು ಜಾಹ್ನವಿ ಹೈಲೈಟ್ ಆಗ್ತಿದ್ದಾರೆ.

36
ಗಿಲ್ಲಿಯ ಕಾಮಿಡಿ

ಇನ್ನು ಗಿಲ್ಲಿ ನಟ ಬಿಗ್ ಮನೆಯಲ್ಲಿ ನಗೆ ಬುಗ್ಗೆಯಾಗಿದ್ದಾರೆ. ಪ್ರತಿಯೊಂದು ಮಾತಿಗೂ ಪಂಚ್ ಕೊಡುತ್ತಾ, ಜಗಳದಲ್ಲೂ ಕಾಮಿಡಿ ಮಾಡುತ್ತಾ, ಗಿಲ್ಲಿ ಇದ್ದ ಕಡೆ ಮನರಂಜನೆಗೆ ಕಮ್ಮಿ ಇಲ್ಲ ಎನ್ನುವಂತೆ ಆಟವಾಡುತ್ತಿರೋದರಿಂದ ಗಿಲ್ಲಿಯೂ ವಾರಪೂರ್ತಿ ಹೈಲೈಟ್ ಆಗುತ್ತಿದ್ದಾರೆ.

46
ರಕ್ಷಿತಾರನ್ನು ಮೆಚ್ಚಿಕೊಂಡ ಜನ

ರಕ್ಷಿತಾ ಮನೆಗೆ ಬರುವಾಗ ಯಾರಿಗೂ ಇಷ್ಟವಿಲ್ಲದಿದ್ದರೂ, ಮನೆಯಲ್ಲಿ ಜಗಳ ಮಾಡುವ ಮೂಲಕ, ತನ್ನ ವಿರುದ್ಧ ತಂತ್ರ ಮಾಡಿದವರ ವಿರುದ್ಧ ಸಿಡುಕುವ ಮೂಲಕ, ತನಗಾಗಿ ತಾನು ಸ್ಟಾಂಡ್ ತೆಗೆದುಕೊಳ್ಳುವ ಮೂಲಕ ಹಾಗೂ ತಮ್ಮ ಕನ್ನಡ ಮೂಲಕ ಹೈಲೈಟ್ ಅಗುತ್ತಿದ್ದಾರೆ.

56
ಆದ್ರೆ ಧನುಷ್-ಅಭಿ ಕಾಣಿಸ್ತಾನೆ ಇಲ್ಲ

ಆದರೆ ಪ್ರತಿಯೊಂದು ಟಾಸ್ಕ್ ಗಳನ್ನು ಅದ್ಭುತವಾಗಿ ಮಾಡುವ, ಯಾವಾಗಲೂ ಎಷ್ಟು ಬೇಕು ಅಷ್ಟು ಮಾತಾಡಿಕೊಂಡು ಸೈಲೆಂಟ್ ಆಗಿರುವ ಧನುಷ್ ಗೌಡ ಮತ್ತು ಅಭಿಷೇಕ್ ಮಾತ್ರ ಬಿಗ್ ಬಾಸ್ ನಲ್ಲಿ ಹೈಲೈಟ್ ಆಗ್ತಾನೆ ಇಲ್ಲ ಎಂದು ಜನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

66
ನಿಯತ್ತಾಗಿ ಆಡಿದೋರಿಗೆ ಸ್ಕ್ರೀನ್ ಸ್ಪೇಸ್ ಇಲ್ಲ

ಈ ಕುರಿತು ಸೋಶಿಯಲ್ ಮೀಡಿಯಾ ಟ್ರೋಲ್ ಪೇಜ್ ಗಳು ಕಿಡಿ ಕಾರಿದ್ದು, ಬಿಗ್ ಬಾಸ್ ಮನೆಯಲ್ಲಿ ಡ್ರಾಮಾ ಮಾಡುವವರಿಗೆ, ನಾಟಕ ಮಾಡುವವರಿಗೆ ಸಿಗುವ ಸ್ಕ್ರೀನ್ ಸ್ಪೇಸ್, ನಿಯತ್ತಾಗಿ ಆಡುವವರಿಗೆ ಸಿಗುತ್ತಲೇ ಇಲ್ಲ ಎಂದು ಬಿಗ್ ಬಾಸ್ ವಿರುದ್ಧ ಕಿಡಿ ಕಾರಿದ್ದಾರೆ.

Read more Photos on
click me!

Recommended Stories