'ಕಾಮಿಡಿ ಕಿಲಾಡಿ' ಖ್ಯಾತಿಯ ಗಿಲ್ಲಿ ನಟ ಮತ್ತು ಗಗನಾ ಜೋಡಿ ಜನಪ್ರಿಯವಾಗಿತ್ತು. ಇದೀಗ ಗಿಲ್ಲಿ ನಟನ ಬಿಗ್ ಬಾಸ್ ಯಶಸ್ಸಿನ ಬಗ್ಗೆ ಮಾತನಾಡಿರುವ ಗಗನಾ, ಅವರು ಮೊದಲೇ ಜನರ ಪ್ರೀತಿಯಿಂದ ಕೋಟ್ಯಧಿಪತಿ ಆಗಿದ್ದರು ಎಂದು ಹೇಳಿದ್ದಾರೆ. ಜೊತೆಗೆ ತಮ್ಮ ಬಿಗ್ ಬಾಸ್ ಪ್ರವೇಶದ ಬಗ್ಗೆಯೂ ಗಗನಾ ಮಾತನಾಡಿದ್ದಾರೆ.
ಗಿಲ್ಲಿ ನಟನ ಹಿಂದೆ ಇದೀಗ ಬಿಗ್ಬಾಸ್ ಖ್ಯಾತಿ ಸೇರಿಕೊಂಡಿದೆ. ಇದಕ್ಕೂ ಮುನ್ನ ಗಿಲ್ಲಿ ನಟ ಎಂದರೆ, ಕಾಮಿಡಿ ಕಿಲಾಡಿ ಖ್ಯಾತಿಯ ಎಂದೇ ಹೇಳಲಾಗುತ್ತಿತ್ತು. ಆದರೆ ಕಾಮಿಡಿ ಕಿಲಾಡಿಯ ಗಿಲ್ಲಿಗೂ, ಈಗಿನ ಗಿಲ್ಲಿಗೂ ಅಜಗಜಾಂತರ ವ್ಯತ್ಯಾಸವಿದೆ. ಇದೀಗ ಗಿಲ್ಲಿ 45 ಕೋಟಿ ಮತಗಳನ್ನು ಪಡೆಯುವ ಮೂಲಕ ಕೋಟ್ಯಧೀಶ್ವರ ಆಗಿದ್ದಾರೆ.
26
ಕಾವ್ಯಾಗೂ ಮೊದಲು ಗಗನಾ
ಬಿಗ್ಬಾಸ್ನಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ (Gilli Nata and Kavya Shaiva) ಜೋಡಿ ಸಕತ್ ಹೆಸರು ಮಾಡುತ್ತಿದ್ದರೆ, ಕಾಮಿಡಿ ಕಿಲಾಡಿಯಲ್ಲಿ ಗಿಲ್ಲಿ ನಟನ ಜೊತೆ ಮಹಾನಟಿ ಗಗನಾ (Mahanati Gagana) ಹೆಸರು ಥಳಕು ಹಾಕಿಕೊಂಡಿತ್ತು. ಇವರಿಬ್ಬರ ಜೋಡಿಗೆ ವೀಕ್ಷಕರು ಫಿದಾ ಆಗಿದ್ದರು. ಕೊನೆಗೆ ಗಗನಾ ಹೆಸರು ಡ್ರೋನ್ ಪ್ರತಾಪ್ ಜೊತೆ ಕೇಳಿಬಂದಿತು.
36
ವೀಕ್ಷಕರು ಅಷ್ಟೇ
ಅಷ್ಟಕ್ಕೂ ವೀಕ್ಷಕರೇ ಹಾಗಲ್ಲವೆ, ಸೀರಿಯಲ್ನಲ್ಲಿಯೋ, ರಿಯಾಲಿಟಿ ಷೋನಲ್ಲಿಯೋ ಒಂದು ಜೋಡಿ ಇಷ್ಟವಾಯ್ತು ಎಂದರೆ, ಅವರನ್ನು ಮದುವೆ ಮಾಡಿಸುವವರೆಗೂ ಬಿಡುವುದಿಲ್ಲ. ಅದನ್ನು ಒಂದು ಸ್ಪರ್ಧೆ ಎಂದು ತಿಳಿಯುವ ಗೋಜಿಗೂ ಹೋಗದೆ ಅತಿರೇಕದಿಂದ ಆಡುವುದು ಉಂಟು.
ಒಟ್ಟಿನಲ್ಲಿ ಇದೀಗ ಗಗನಾ ಅವರು ಗಿಲ್ಲಿ ನಟನ ಬಗ್ಗೆ ಮಾತನಾಡಿದ್ದಾರೆ. ಮಾಧ್ಯಮದವರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗಗನಾ, ಗಿಲ್ಲಿ ನಟ ಮೊದಲೇ ಕೋಟ್ಯಾಧೀಶ್ವರ ಎಂದು ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದು ಏಕೆಂದರೆ, ಗಿಲ್ಲಿ ಮೊದಲೇ ಕೋಟಿಗಟ್ಟಲೆ ಜನರ ಅಭಿಮಾನ ಗಳಿಸಿದ್ದಾರೆ, ಈಗ 45 ಕೋಟಿ ವೋಟ್ ಬಂದು ಕೋಟ್ಯಧೀಶ್ವರ ಆಗಿದ್ದು ಅಲ್ಲ ಎನ್ನುವುದು.
56
ಬಿಗ್ಬಾಸ್ಗೆ ಹೋಗ್ತಾರಾ?
ಇದೇ ವೇಳೆ, ಬಿಗ್ಬಾಸ್ಗೆ ಮುಂದಿನ ಸೀಸನ್ನಲ್ಲಿ ಹೋಗ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಗಗನಾ, ನೋಡೋಣ. ದೇವರ ಕೃಪೆಯಿಂದ ಅಂಥ ಛಾನ್ಸ್ ಸಿಕ್ಕರೆ ಆಗ ಯೋಚನೆ ಮಾಡುತ್ತೇನೆ. ಸದ್ಯ ಅಂಥ ಯೋಚನೆ ಮಾಡುವುದಿಲ್ಲ. ನಾನು ಫ್ಯೂಚರ್ ಬಗ್ಗೆ ಎಂದಿಗೂ ಅಷ್ಟೊಂದು ಯೋಚನೆ ಮಾಡಿದವಳಲ್ಲ ಎಂದಿದ್ದಾರೆ.
66
ನನಗೆ ಲವ್ ಮಾಡ್ಬೇಕಲ್ಲಾ?
ಗಗನಾ ಮತ್ತು ಗಿಲ್ಲಿಯ ಜೋಡಿ ಫೇಮಸ್ ಆಗಿದ್ದ ಸಂದರ್ಭದಲ್ಲಿ, ಗಿಲ್ಲಿಗೆ , ನಿಮ್ದು ಗಗನಾ ಲವ್ ಸ್ಟೋರಿ ನಿಜಾನಾ ಅಂತ ಪ್ರಶ್ನೆ ಎದುರಾಗಿತ್ತು. ಆಗ ಇದೇ ಹಾಸ್ಯದ ರೀತಿಯಲ್ಲಿ ಗಿಲ್ಲಿ, ನಾನ್ ಲವ್ ಮಾಡ್ತೀನಿ ಬಟ್ ನಮ್ಮನ್ನ ಲವ್ ಮಾಡೋರು ಬೇಕಲ್ವಾ ಅಂತ ನಗೆ ಚಟಾಕಿ ಹಾರಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.