Karna Serial: ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ' ಅಂತಿದ್ದ ಕರ್ಣನ ಮತ್ತೊಂದು ಮುಖ ರಿವೀಲ್?

Published : Jan 23, 2026, 03:39 PM IST

ಮೊದಲಿದ್ದ ಕರ್ಣ ಇನ್ಮುಂದೆ ಇರಲ್ಲ ಅನ್ನೋದು ಪಕ್ಕಾ ಅಂತಿವೆ ಸ್ಟೋರಿ ಹಿಂಟ್.. ಹಾಗಿದ್ರೆ ಏನ್ ಆಗ್ತಾನೆ ಕರ್ಣ? ಇಷ್ಟು ದಿನ ಇರೋ ಕರ್ಣನ ಮತ್ತೊಂದು ಮುಖ ಅನಾವರಣ ಆಗುತ್ತಾ? 'ಇಲ್ಲಿಯವರೆಗೆ ಒಂದು ಲೆಕ್ಕ, ಮುಂದೆ ಮತ್ತೊಂದು ಲೆಕ್ಕ' ಅಂತಿರೋ ಕರ್ಣ.. ಬದಲಾಯ್ತು ಕರ್ಣನ ವರಸೆ? ಢಮರುಗ ಶುರು!?

PREV
18

ಕರ್ಣ ಸೀರಿಯಲ್ ಟಿಆರ್‌ಪಿಯಲ್ಲಿ ಟಾಪ್ ಸ್ಥಾನದಲ್ಲಿ ಇರೋದು ಗೊತ್ತೇ ಇದೆ. ಈ ಧಾರಾವಾಹಿಯ ಕಥೆ ಅದೆಷ್ಟು ಜನಪ್ರಿಯ ಆಗಿದೆ ಎಂದರೆ, ಈ ಸೀರಿಯಲ್‌ ನೋಡುಗರ ಸಂಖ್ಯೆ, ಮಾತನ್ನಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

28

ಕರ್ಣ ಸೀರಿಯಲ್‌ನ ಮುಖ್ಯ ಪಾತ್ರಗಳಲ್ಲಿ ನಟ ಕಿರಣ್ ರಾಜ್, ನಟಿಯರಾದ ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಮಿಂಚುತ್ತಿರುವುದು ಗೊತ್ತೇ ಇದೆ. ಇದೀಗ ಕರ್ಣ ಸೀರಿಯಲ್‌ನಲ್ಲಿ ಮಹತ್ವದ ತಿರುವು ಕಾಣಿಸಿಕೊಂಡಿದ್ದು 'ಇಲ್ಲಿಯವರೆಗೆ ಇರೋದು ಒಂದು ಲೆಕ್ಕ, ಮುಂದೆ ಆಗೋದು ಮತ್ತೊಂದು ಲೆಕ್ಕ' ಎನ್ನುವ ಹಂತಕ್ಕೆ ಕರ್ಣ ಬಂದಿದ್ದಾನಾ? ಮುಂದೆ ನೋಡಿ..

38

ರೆಬೆಲ್ ಆದ್ರಾ ದಾನಶೂರ ಕರ್ಣ?

ಕರ್ಣ ಸೀರಿಯಲ್‌ನಲ್ಲಿ ಕರ್ಣ ತುಂಬಾ ಒಳ್ಳೆಯವನು. 'ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ' ಅಂತಿದ್ದ ಕರ್ಣ ಇದೀಗ ಬದಲಾದ್ರಾ? ಹೌದು ಅಂತಿದೆ ಈ ಕಥೆ..

48

ಸೋ, ಮೊದಲಿದ್ದ ಕರ್ಣ ಇನ್ಮುಂದೆ ಇರಲ್ಲ ಅನ್ನೋದು ಪಕ್ಕಾ ಅಂತಿವೆ ಸ್ಟೋರಿ ಹಿಂಟ್.. ಹಾಗಿದ್ರೆ ಏನ್ ಆಗ್ತಾನೆ ಕರ್ಣ? ಇಷ್ಟು ದಿನ ಇರೋ ಕರ್ಣನ ಮತ್ತೊಂದು ಮುಖ ಅನಾವರಣ ಆಗುತ್ತಾ?

58

ಈಗಾಗಲೇ ಮೊದಲಿದ್ದ ಕರ್ಣನ ಅವತಾರ ಬದಲಾಗೋ ಸೂಚನೆ ಸಿಕ್ಕಿದೆ. ಆದರೆ, ಎಷ್ಟರಮಟ್ಟಿಗೆ ಈ ಬದಲಾವಣೆ? ಗೋವಿನಂತೆ ಮುಗ್ಧ, 'ಗುಡ್ ಬಾಯ್' ಎನ್ನಿಸಿಕೊಂಡಿದ್ದ ಕರ್ಣ ಇದೀಗ ತನ್ನ ವಿರುದ್ಧ ದ್ವೇಷ ಕಾರುತ್ತಿರುವ ತಮ್ಮವರ ವಿರುದ್ಧ ಸೆಟೆದು ನಿಲ್ಲುತ್ತಾನಾ?

68

ರಮೇಶ್, ತಾರಾ ಹಾಗೂ ಸಂಜಯ್ ಮನದಲ್ಲಿ ಏನಿದೆ? ತನ್ನ ಮೇಲೆ ಯಾಕಿಷ್ಟು ದ್ವೇಷ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುತ್ತಾನಾ? ಈ ಹಂತಕ್ಕೆ ಸೀರಿಯಲ್ ವೀಕ್ಷಕರು ಯೋಚಿಸುವ ಮಟ್ಟಿಗೆ ಕಥೆ ಒಂದು ಹಂತಕ್ಕೆ ಬಂದು ನಿಂತಿದೆ. ಮುಂದೇನು ಎನ್ನುವ ಯಕ್ಷಪ್ರಶ್ನೆ ವೀಕ್ಷಕರನ್ನು ಕಾಡತೊಡಗಿದೆ.

78

ಕರ್ಣ ಸೀರಿಯಲ್‌ ನೋಡುಗರ ಸಂಖ್ಯೆ ಅಸಂಖ್ಯಾತ. ಇಲ್ಲಿಯವರೆಗಿನ ಕರ್ಣನನ್ನು ನೋಡಿದ್ದಾಗಿದೆ. ಬದಲಾದ ಕರ್ಣನ ಅವತಾರ ನೋಡಲು ವೀಕ್ಷಕರು ಕಾದಿದ್ದಾರೆ. ಅವರಲ್ಲಿ ನೀವೂ ಒಬ್ಬರಾಗಿದ್ದರೆ ನಿಮಗೆ ಖಂಡಿತವಾಗಿಯೂ ಈ ಎಲ್ಲಾ ಹಿಂಟ್‌ಗಳು ಯೂಸ್‌ಫುಲ್ ಆಗಲಿವೆ.

88

ದಿನದಿನಕ್ಕೂ ಕರ್ಣ ಕಥೆ ಹೊಸಹೊಸ ತಿರುವು ಪಡೆದು ಸಾಗುತ್ತಿದೆ? ಮುಂದೇನು? ನಾಳೆಯೇನು ಕಾದಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕು ಎಂದರೆ ಈ 'ಕರ್ಣ' ಸೀರಿಯಲ್ ನೋಡೋದೊಂದೇ ದಾರಿ..!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories