ಡಾಲಿ ಧನಂಜಯ ಕುಟುಂಬ ಬೆಳೆಯುತ್ತಿದೆ; Udaya Awards ಕಾರ್ಯಕ್ರಮದಲ್ಲಿ ರಹಸ್ಯ ಬಿಚ್ಚಿಟ್ಟ ನಟ!

Published : Jan 23, 2026, 03:04 PM IST

Udaya Awards: ನಟ ಶಿವರಾಜ್‌ ಕುಮಾರ್‌,  ಪ್ರಕಾಶ್‌ ರಾಜ್‌, ಡಾಲಿ ಧನಂಜಯ್, ಶ್ರೀನಾಥ್, ಉಮಾಶ್ರೀ, ಸಾಧುಕೋಕಿಲ, ಕವಿ ಬಿ.ಆರ್.ಲಕ್ಷ್ಮಣರಾವ್‌ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಿದ ʻಉದಯ ಕನ್ನಡಿಗ-2025ʼ ಪುರಸ್ಕಾರ ಶನಿವಾರ, ಭಾನುವಾರ ಸಂಜೆ 6 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. 

PREV
15
ʻಉದಯ ಕನ್ನಡಿಗ – 2025ʼ ಪುರಸ್ಕಾರ

ಉದ್ಯಮಿ ಕಿಶೋರ್ ಕುಮಾರ್‌ ರೈ, ಗಾಯಕ ಸಂಜಿತ್‌ ಹೆಗಡೆ, ಕಬ್ಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ, ಕಾರ್ಗಿಲ್‌ ಯೋಧ ಕ್ಯಾಪ್ಟನ್‌ ನವೀನ್ ನಾಗಪ್ಪ, ಪರಿಸರವಾದಿ ಶಿವಾನಂದ ಕಳವೆ, ಸುರಂಗ ಕೊರೆದು ನೀರು ಉಕ್ಕಿಸಿದ ಕೃಷಿಕ ಅಮೈ ಮಹಾಲಿಂಗ ನಾಯ್ಕ, ಪತ್ರಕರ್ತೆ ಶೋಭಾ ಮಳವಳ್ಳಿ, ಐದು ರೂ.ವೈದ್ಯ ಎಂದೇ ಖ್ಯಾತರಾದ ಡಾ. ಶಂಕರೇ ಗೌಡ, ಜಾನಪದ ಗಾಯಕ ಪದ್ಮಶ್ರೀ ವೆಂಕಟಪ್ಪ ಸುಗತೇಕರ್ ʻಉದಯ ಕನ್ನಡಿಗ – 2025ʼ ಪುರಸ್ಕಾರ ಸ್ವೀಕರಿಸಿದ ಇತರ ಸಾಧಕರು.

25
ಚಿತ್ರರಂಗದವರು ಭಾಗಿ

ಬರಗೂರು ರಾಮಚಂದ್ರಪ್ಪ, ನಾಗತಿಹಳ್ಳಿ ಚಂದ್ರಶೇಖರ್‌, ನಿರ್ಮಾಪಕ ಚಿನ್ನೇಗೌಡ, ಸಾ.ರಾ.ಗೋವಿಂದು, ಶಶಿಕುಮಾರ್‌, ನಿರ್ದೇಶಕ ಓಂ ಸಾಯಿಪ್ರಕಾಶ್, ಕೆ. ಎಮ್‌. ಚೈತನ್ಯ, ಸಿಂಪಲ್‌ ಸುನಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಕಲಾವಿದರಾದ ರಮೇಶ್‌ ಭಟ್‌, ಗಿರಿಜಾ ಲೋಕೇಶ್‌, ಮಂಡ್ಯ ರಮೇಶ್‌, ಅರುಣ್‌ ಸಾಗರ್‌, ರಾಗು ನಿಡುವಾಳ್‌ ಸಾಧಕರಿಗೆ ʻಉದಯ ಕನ್ನಡಿಗʼ ಟ್ರೋಫಿ ನೀಡಿ ಗೌರವಿಸಿದರು.

35
ಡಾ.ಶಿವರಾಜ್‌ ಕುಮಾರ್ ಏನಂದ್ರು?

ಡಾ.ಶಿವರಾಜ್‌ ಕುಮಾರ್ ಮಾತನಾಡಿ, ʻಕನ್ನಡ ಚಿತ್ರೋದ್ಯಮಕ್ಕೆ ದಶಕಗಳಿಂದ ಬೆಂಬಲವಾಗಿರುವ ಉದಯ ಟಿವಿ ನೀಡಿದ ಈ ಪುರಸ್ಕಾರ ಅತ್ಯಂತ ಮಹತ್ವದ್ದೆನಿಸುತ್ತದೆʼ ಎಂದು ಹೇಳಿದ್ದಾರೆ.

45
ನಟ ಶಶಿಕುಮಾರ್‌ ಏನಂದ್ರು?

ನಟ ಶಶಿಕುಮಾರ್‌ ಜೊತೆಗೂಡಿ ನವಿಲೇ ಪಂಚರಂಗಿ ನವಿಲೇ ಹಾಡಿಗೆ ಶಿವಣ್ಣ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಕಲಾವಿದೆ ಉಮಾಶ್ರೀ ಕಷ್ಟಪಟ್ಟ ದಿನಗಳನ್ನು ನೆನೆದು ಭಾವುಕರಾದರು. ಪ್ರಕಾಶ್‌ ರಾಜ್‌ ಬಹಳ ವರ್ಷಗಳ ನಂತರ ಕರ್ನಾಟಕದ ವಾಹಿನಿಯೊಂದರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

55
ಮಹತ್ವದ ವಿಷಯ ರಿವೀಲ್‌ ಮಾಡಿದ್ರು

ಶಿವಾನಂದ ಕಳವೆ ಅವರು ರಾಕಿಂಗ್‌ ಸ್ಟಾರ್‌ ಯಶ್‌ ಅವರ ʻಯಶೋಮಾರ್ಗʼದ ವಿವರ ನೀಡಿದರು.

ನಟ ಡಾಲಿ ಧನಂಜಯ್‌ ತಮ್ಮ ಜೀವನದ ಮಹತ್ವದ ವಿಷಯವೊಂದನ್ನು ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ. ನಿಧಿ ಸುಬ್ಬಯ್ಯ, ರಚನಾ ಇಂದರ್‌, ಮೋಕ್ಷಾ ಕುಶಾಲ್, ಅಂಕಿತಾ ಅಮರ್‌, ಅನುಷಾ ರೈ, ಪೃಥ್ವಿ ಅಂಬರ್‌ ನೃತ್ಯಪ್ರದರ್ಶನ, ಗಾಯಕರಾದ ವಾಸುಕಿ ವೈಭವ್‌, ಅಲೋಕ್‌ ಬಾಬು ಹಾಡು ಹಾಡಿದ್ದರು. ನಟ ಧನಂಜಯ್‌ ಅವರು ಅಪ್ಪ ಆಗುತ್ತಿರುವ ವಿಷಯವನ್ನು ಹಂಚಿಕೊಂಡಿದ್ದಾರೆ. ಇನ್ನು ಪ್ರಕಾಶ್‌ ರಾಜ್‌ ಕೂಡ ಅಪ್ಪನ ಬಗ್ಗೆ ಮಾತನಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories