ಬಿಗ್ಬಾಸ್ ಶೋ ಸ್ಕ್ರಿಪ್ಟೆಡ್ ಎನ್ನುವ ಚರ್ಚೆಗಳ ನಡುವೆಯೇ, ಹಿಂದಿ ಬಿಗ್ಬಾಸ್ನಲ್ಲಿ ನಡೆದ ಲಿಪ್ಲಾಕ್ ಘಟನೆ ವಿವಾದ ಸೃಷ್ಟಿಸಿದೆ. ಟಿಆರ್ಪಿಗಾಗಿ ಅಶ್ಲೀಲತೆಯನ್ನು ಪ್ರದರ್ಶಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಎದ್ದಿದ್ದು, ಕನ್ನಡ ಬಿಗ್ಬಾಸ್ನಲ್ಲಿ ಇಂತಹ ಘಟನೆಗಳು ನಡೆದಿಲ್ಲ ಎಂಬುದು ಸದ್ಯದ ಸಮಾಧಾನ.
ಬಿಗ್ಬಾಸ್ (Bigg Boss) ನೋಡಲು ಒಂದಷ್ಟು ವರ್ಗ ಎಷ್ಟು ಉತ್ಸುಕದಿಂದ ಕಾಯುತ್ತದೆಯೋ, ಈ ಷೋ ಅನ್ನು ಬಾಯಿಗೆ ಬಂದಂತೆ ಹಿಗ್ಗಾಮುಗ್ಗ ಬೈಯುವವರ ಸಂಖ್ಯೆಯೂ ಅಷ್ಟೇ ದೊಡ್ಡದಿದೆ. ಹೀಗೆ ಬೈಯುತ್ತಲೇ ಬಾಯಿ ಚಪ್ಪರಿಸಿಕೊಂಡು ನೋಡುವ ಇನ್ನೊಂದಿಷ್ಟು ವರ್ಗವಿದೆ. ಆ ವರ್ಗ, ಈ ವರ್ಗ ಎಲ್ಲಾ ವರ್ಗ ಸೇರಿ ಎಲ್ಲಾ ಭಾಷೆಗಳ ಬಿಗ್ಬಾಸ್ನ ಟಿಆರ್ಪಿ ದಿಢೀರ್ ಏರಿಕೆ ಆಗುವುದು ಹೊಸ ವಿಷಯವೇನಲ್ಲ.
27
ಬಿಗ್ಬಾಸ್ ಎನ್ನುವುದು ಸ್ಕ್ರಿಪ್ಟೆಡ್?
ಅಷ್ಟಕ್ಕೂ ಬಿಗ್ಬಾಸ್ ಎನ್ನುವುದು ಸ್ಕ್ರಿಪ್ಟೆಡ್. ಯಾರು ಏನು ಮಾಡಬೇಕು ಎನ್ನುವುದನ್ನು ಮೊದಲೇ ಹೇಳಿರುತ್ತಾರೆ. ಟಾಸ್ಕ್ ಮಾತ್ರವಲ್ಲದೇ ಇಲ್ಲಿ ನಡೆಯುವ ಎಲ್ಲಾ ಸನ್ನಿವೇಶಗಳು (ಅದು ಜಗಳದಿಂದ ಹಿಡಿದು ಸೆ*ಕ್ಸ್ವರೆಗೆ ಎಲ್ಲವೂ ಎನ್ನುವವರು ಇದ್ದಾರೆ) ಮೊದಲೇ ಹೇಳಿರುತ್ತಾರೆ. ಫೇಮಸ್ ಆಗಲು ಯಾವ ಹಂತಕ್ಕೆ ಬೇಕಾದರೂ ಹೋಗುವ ಒಂದಿಷ್ಟು ಸ್ಪರ್ಧಿಗಳೂ ಇದಕ್ಕೆ ಆಯ್ಕೆಯಾಗಿರುತ್ತಾರೆ ಎನ್ನುವ ಮಾತು ಬಹಳ ವರ್ಷಗಳಿಂದಲೂ ಇದೆ.
37
ಸನ್ನಿವೇಶಗಳನ್ನು ಕ್ರಿಯೇಟ್ ಮಾಡಲಾಗತ್ತೆ
ಇದು ಸ್ಕ್ರಿಪ್ಟೆಡ್ ಅಲ್ಲ, ಬದಲಿಗೆ ಜಗಳ ಮಾಡುವ ಸನ್ನಿವೇಶವನ್ನು ಕ್ರಿಯೇಟ್ ಮಾಡಲಾಗುತ್ತದೆಯಷ್ಟೇ ಎಂದು ಹೇಳಿರುವ ಬಿಗ್ಬಾಸ್ ಸ್ಪರ್ಧಿಗಳೂ ಇದ್ದಾರೆ. ಇವೆಲ್ಲವೂ ಸರಿ. ಆದರೆ ಫ್ಯಾಮಿಲಿ ಷೋ ಎನ್ನುವ ಬಿಗ್ಬಾಸ್ನಲ್ಲಿ ಅಶ್ಲೀಲತೆಯ ಗಡಿಯನ್ನು ದಾಟಿ ಸ್ಪರ್ಧಿಗಳು ಹೋದಾಗ ಅದನ್ನು ಟೆಲಿಕಾಸ್ಟ್ ಮಾಡುವ ಹಿಂದಿನ ಉದ್ದೇಶವೇನು ಎನ್ನುವುದು ವೀಕ್ಷಕರ ಪ್ರಶ್ನೆ. ಟಿಆರ್ಪಿ ಕುಸಿಯುತ್ತಿದೆ ಎಂದಾಗ ಇಂಥ ಸನ್ನಿವೇಶಗಳು ಸೃಷ್ಟಿಯಾಗುತ್ತವೆ, ಬೆಡ್ರೂಮ್ ಸೀನ್, ಫಸ್ಟ್ನೈಟ್ ಸೀನ್, ಬಿಗ್ಬಾಸ್ ಮನೆಯೊಳಗೇ ಮದುವೆ, ಸೆ*ಕ್ಸ್... ಇವೆಲ್ಲವೂ ಈ ಹಿಂದೆ ಹಿಂದಿಯ ಬಿಗ್ಬಾಸ್ನಲ್ಲಿ ನಡೆದಿದ್ದು, ಅದನ್ನು ವೀಕ್ಷಕರಿಗೂ ತೋರಿಸಲಾಗಿದೆ ಎಂದ ಮೇಲೆ ಈ ಷೋದ ಸಾಚಾತನ ಎಷ್ಟು ಎನ್ನುವುದು ತಿಳಿಯುತ್ತದೆ ಎನ್ನುವ ತೀಕ್ಷ್ಣ ಪ್ರತಿಕ್ರಿಯೆಯೂ ಬರುವುದು ಉಂಟು.
ಅದೇನೇ ಇರಲಿ ಬಿಡಿ. ಈಗೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇದು ಹಿಂದಿ ಬಿಗ್ಬಾಸ್ನ OTT Season 2ನದ್ದು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇದನ್ನು ನೋಡಿದವರು ಇದೊಂದು ಫ್ಯಾಮಿಲಿ ಷೋ ಅಲ್ಲ ಬದಲಿಗೆ ಪೋ*ರ್ನ್ ಷೋ ಎಂದೂ ಕೆಟ್ಟದ್ದಾಗಿ ಕಮೆಂಟ್ ಮಾಡಿದ್ದಾರೆ.
57
ಲಿಪ್ಲಾಪ್ ಮಾಡಿದ ಸ್ಪರ್ಧಿಗಳು
ಈ ಷೋನಲ್ಲಿ . ಮನೆಯೊಳಗೆ ಇರುವ ಇಬ್ಬರು ಸ್ಪರ್ಧಿಗಳು ಲಿಪ್ ಲಾಕ್ ಮಾಡಿದ್ದರೆ, ಅವರನ್ನು ಇತರರು ಹುರಿದುಂಬಿಸುತ್ತಿದ್ದರು. ಪೂಜಾ ಭಟ್ ಸೇರಿದಂತೆ ಕೆಲವು ಸ್ಪರ್ಧಿಗಳು ಕಣ್ಣುಮುಚ್ಚಿಕೊಂಡಿದ್ದಾರೆ. ಅಂದಹಾಗೆ ಇಂಥದ್ದೊಂದು ಕೃತ್ಯ ಎಸಗಿರುವುದು ನಟಿ ಆಕಾಂಕ್ಷಾ ಪುರಿ ಮತ್ತು ಜಡ್ ಹಡಿದ್. ಇದನ್ನು ಕ್ರಿಯೇಟ್ ಮಾಡಿದ್ದದು ಖುದ್ದು ಬಿಗ್ಬಾಸೇ. ಡೇರಿಂಗ್ ಟಾಸ್ಕ್ ಅಂತೆ ಇದು. ಆಗ ಜಡ್ ಹಡಿದ್ ಅವರು ಆಕಾಂಕ್ಷಾ ಪುರಿಗೆ ಕಿಸ್ ಮಾಡಬೇಕು ಎಂದು ಬಯಸುತ್ತೇನೆ ಎಂದು ಹೇಳಿದರು. ಕೂಡಲೇ ಲಿಪ್ಲಾಕ್ ಮಾಡಿದರು. ಇದನ್ನೇ ಕಾಯುತ್ತಿದ್ದವರಂತೆ ಆಕಾಂಕ್ಷಾ ಪುರಿ ಕೂಡ ತಲ್ಲೀನರಾದರು.
67
ಸಲ್ಮಾನ್ ಖಾನ್ ವಾರ್ನ್
ಇಂಥ ಕೃತ್ಯ ಎಲ್ಲಾಮಾಡಬಾರದು ಎಂದು ಸಲ್ಮಾನ್ ಖಾನ್ (Salman Khan)ಮೊದಲೇ ವಾರ್ನ್ ಮಾಡಿ ಕಳುಹಿಸಿದ್ದರಂತೆ. ಒಂದು ವೇಳೆ ಮಾಡಬಾರದ್ದು ಮಾಡಿದ ಮೇಲೆ ಅದನ್ನು ಪ್ರಸಾರ ಯಾಕೆ ಮಾಡಿದ್ರಿ ಎಂದು ಮಾತ್ರ ಯಾರೂ ಕೇಳಬೇಡಿ, ಅದನ್ನು ಕೇಳುವ ಹಾಗಿಲ್ಲ.
77
ಸದ್ಯ ಸಮಾಧಾನದ ಸಂಗತಿ
ಸದ್ಯದ ಮಟ್ಟಿಗೆ ಜಗಳ ಒಂದನ್ನು ಬಿಟ್ಟು, ಇಂಥ ಕೃತ್ಯಗಳು ಇದುವರೆಗೆ ಕನ್ನಡದ ಬಿಗ್ಬಾಸ್ನಲ್ಲಿ ಆಗಿಲ್ಲ ಎನ್ನುವುದು ಸಮಾಧಾನ ಎನ್ನುತ್ತಿದ್ದಾರೆ ನೆಟ್ಟಿಗರು. ಪ್ರೀತಿ-ಪ್ರೇಮ ಸೀನ್ಗಳು ಒಂದು ಹಂತದವರೆಗೆ ಸ್ಪರ್ಧಿಗಳಿಂದ ಮಾಡಿಸಿದ್ದು ಇದೆ. ಆದರೆ ಈ ಮಟ್ಟಿಗೆ ಇದುವರೆಗೂ ಮಾಡಿಸಿಲ್ಲ, ಇನ್ನು ಮುಂದೆ ಗೊತ್ತಿಲ್ಲ ಎಂದು ಕಮೆಂಟ್ನಲ್ಲಿ ನೆಟ್ಟಿಗರು ಹೇಳ್ತಿದ್ದಾರೆ.