A Tiny World of Dreams… ತುಂಬು ಗರ್ಭಿಣಿ ರಶ್ಮಿ ಪ್ರಭಾಕರ್ ಪ್ರೆಗ್ನೆನ್ಸಿ ಫೋಟೊ ಶೂಟ್

Published : Oct 14, 2025, 09:19 PM IST

ಚೊಚ್ಚಲ ತಾಯ್ತನದ ಸಂಭ್ರಮದಲ್ಲಿರುವ ತುಂಬು ಗರ್ಭಿಣಿ ನಟಿ ರಶ್ಮಿ ಪ್ರಭಾಕರ್ ಹೊಸದಾಗಿ ಪ್ರೆಗ್ನೆನ್ಸಿ ಫೋಟೊ ಶೂಟ್ ಮಾಡಿಸಿದ್ದು, ಸೋಶಿಯಲ್ ಮಿಡಿಯಾದಲ್ಲಿ A Tiny World of Dreams ಎನ್ನುವ ಕ್ಯಾಪ್ಶನ್ ಜೊತೆ ಫೋಟೊ ಹಂಚಿಕೊಂಡು ಸಂಭ್ರಮಿಸಿದ್ದಾರೆ.

PREV
18
ರಶ್ಮಿ ಪ್ರಭಾಕರ್

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಚ್ಚಿ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟಿ ರಶ್ಮಿ ಪ್ರಭಾಕರ್ ಇದೀಗ ಚೊಚ್ಚಲ ತಾಯ್ತನದ ಸಂಭ್ರಮದಲ್ಲಿದ್ದಾರೆ. ಇನ್ನೇನು ತಾಯಿಯಾಗಲಿರುವ ನಟಿ ಪ್ರೆಗ್ನೆನ್ಸಿ ಫೋಟೊ ಶೂಟ್ ಹಂಚಿಕೊಂಡಿದ್ದಾರೆ.

28
ಬೇಬಿ ಬಂಪ್ ಫೋಟ್ ಶೂಟ್

ರಶ್ಮಿ ಹೊಸದಾಗಿ ಪ್ರೆಗ್ನೆನ್ಸಿ ಫೋಟೊ ಶೂಟ್ ಮಾಡಿಸಿದ್ದು, ಪಿಂಕ್ ಸೀರೆ ಮತ್ತು ಬ್ರೌನ್ ಬಣ್ಣದ ಗೌನ್ ಧರಿಸಿ ವಿಭಿನ್ನವಾಗಿ ಫೋಟೊ ಶೂಟ್ ಮಾಡಿಸಿಕೊಳ್ಳುವ ಮೂಲಕ ತಮ್ಮ ತಾಯ್ತನದ ಸಂಭ್ರಮವನ್ನು ಹೆಚ್ಚಿಸಿಕೊಂಡಿದ್ದಾರೆ.

38
ಕನಸುಗಳ ಪುಟ್ಟ ಲೋಕ

ರಶ್ಮಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಬೇಬಿ ಬಂಪ್ ಫೋಟೊ ಸೀರೀಸ್ ಗಳನ್ನು ಶೇರ್ ಮಾಡಿದ್ದು, A Tiny World of Dreams ಎಂದು ಬರೆದುಕೊಂಡಿದ್ದಾರೆ.

48
ಯೂನಿವರ್ಸ್ ಗೆ ಥ್ಯಾಂಕ್ಯೂ

ನನ್ನ ಪ್ರೆಗ್ನೆನ್ಸಿ ಫೋಟೊ ಶೂಟ್ ನ ಕೊನೆಯ ಫೋಟೊಗಳು ಇವು ಎಂದು ಬರೆದುಕೊಂಡಿರುವ ರಶ್ಮಿ. ನಾನು ಕನಸು ಕಂಡಂತೆ ಫೋಟೊ ಶೂಟ್ ಮಾಡಿಸಲು ಸಾಧ್ಯವಾದುದಕ್ಕೆ ಯೂನಿವರ್ಸ್ ಗೆ ಥ್ಯಾಂಕ್ಯೂ ಹೇಳಿದ್ದಾರೆ. (The final one from my pregnancy diaries . Thanking the whole universe for making my dream diaries come true)

58
ಮೂರು ಬಾರಿ ಸೀಮಂತ

ಕೆಲವು ತಿಂಗಳ ಹಿಂದೆ ರಶ್ಮಿ ಪ್ರಭಾಕರ್ ಅವರ ಸೀಮಂತ ಅದ್ದೂರಿಯಾಗಿ ನಡೆದಿತ್ತು, ಗಂಡನ ಮನೆಯಲ್ಲಿ, ತವರು ಮನೆಯಲ್ಲಿ ಹಾಗೂ ಮತ್ತೊಂದು ಬಾರಿ ಬಂಧುಮಿತ್ರರೊಂದಿಗೆ ಎಂದು ಮೂರು ಬಾರಿ ನಟಿಯ ಸೀಮಂತ ಅದ್ದೂರಿಯಾಗಿ ನಡೆದಿತ್ತು.

68
ವೀಣೆ ಕೈಯಲ್ಲಿ ಹಿಡಿದು ಫೋಟೊ ಶೂಟ್

ಈ ಹಿಂದೆ ಅಂದರೆ ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಕೈಯಲ್ಲಿ ವೀಣೆ ಹಿಡಿದು ಶಾರದೆಯಂತೆ ರಶ್ಮಿ ಪೋಸ್ ಕೊಟ್ಟು ತಮ್ಮ ಪ್ರೆಗ್ನೆನ್ಸಿ ಫೋಟೊ ಶೂಟ್ ಮಾಡಿಸಿಕೊಂಡಿದ್ದರು.

78
ಶುಭ ಕೋರಿದ ಅಭಿಮಾನಿಗಳು

ರಶ್ಮಿ ಪ್ರಭಾಕರ್ ಮತ್ತು ನಿಖಿಲ್ ಭಾರ್ಗವ್ ಮುದ್ದಾದ ಫೋಟೊ ಶೂಟ್ ನೋಡಿ ಅಭಿಮಾನಿಗಳು ಜೋಡಿಗೆ ಶುಭಾಶಯ ಕೋರಿದ್ದು , ಆರೋಗ್ಯಕರವಾದ ಹೆರಿಗೆ ಆಗಲಿ ಎಂದು ಹಾರೈಸಿದ್ದಾರೆ.

88
ರಶ್ಮಿ ನಟಿಸಿರುವ ಸೀರಿಯಲ್ ಗಳು

ಜೀ ಕನ್ನಡ ವಾಹಿನಿಯ ‘ಶುಭ ವಿವಾಹ’, ಉದಯ ಟಿವಿಯ ‘ಮಹಾಭಾರತ’, ಸ್ಟಾರ್ ಸುವರ್ಣ ವಾಹಿನಿಯ ‘ಜೀವನ ಚೈತ್ರ’ , ಕಲರ್ಸ್ ಕನ್ನಡ ವಾಹಿನಿಯ ಲಕ್ಷ್ಮೀ ಬಾರಮ್ಮ’ ಸೀರಿಯಲ್‌ ಸೇರಿ, ತಮಿಳು ಕಿರುತೆರೆಯಲ್ಲೂ ರಶ್ಮಿ ಜನಪ್ರಿಯತೆ ಪಡೆದಿದ್ದರು.

Read more Photos on
click me!

Recommended Stories