ಕನ್ನಡ ಬೆನ್ನಲ್ಲೇ ಮತ್ತೊಂದು ಬಿಗ್ ಬಾಸ್ ಶೋ ಸ್ಥಗಿತಗೊಳ್ಳುವ ಆತಂಕ, ಸ್ಪೀಕರ್ ಮುಂದೆ ಪ್ರಸ್ತಾವನೆ, ಆಡಳಿತರೂಢ ಸರ್ಕಾರದ ಮೈತ್ರಿ ಪಕ್ಷವೇ ಬಿಗ್ ಬಾಸ್ ವಿರುದ್ಧ ತೊಡೆ ತಟ್ಟಿ ನಿಂತಿದೆ. ಶೋ ಸ್ಥಗಿತಗೊಳಿಸಲು ಮುಂದಾಗಿದ್ದು, ಆತಂಕ ಹೆಚ್ಚಾಗುತ್ತಿದೆ.
ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋದಲ್ಲಿ ಭಾರಿ ಹೈಡ್ರಾಮ ನಡೆದಿರುವುದು ಕನ್ನಡಿಗರು ನೋಡಿದ್ದಾರೆ. ಬಿಗ್ ಬಾಸ್ ಮನೆಗೆ ಬೀಗ ಹಾಕಿ ಸ್ಪರ್ಧಿಗಳನ್ನು ಹೊರಗೆ ಕಳುಹಿಸಲಾಗಿತ್ತು. ನಿಯಮ ಉಲ್ಲಂಘನೆ ಕಾರಣದಿಂದ ಕನ್ನಡ ಬಿಗ್ ಬಾಸ್ ಶೋ ಎರಡು ದಿನ ಸ್ಥಗಿತಗೊಂಡಿತ್ತು. ಭಾರಿ ವಿವಾದದ ಬಳಿಕ ಬಿಗ್ ಬಾಸ್ ಪುನರ್ ಆರಂಭಗೊಂಡಿತ್ತು. ಇದೀಗ ಮತ್ತೊಂದು ಬಿಗ್ ಬಾಸ್ ಶೋ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.
26
ಸಂಸ್ಕೃತಿಗೆ ವಿರುದ್ಧವಾಗಿರುವ ಬಿಗ್ ಬಾಸ್ ಸ್ಥಗಿತ ಎಚ್ಚರಿಕೆ
ಸಂಸ್ಕೃತಿಗೆ ವಿರುದ್ಧವಾಗಿರುವ ಬಿಗ್ ಬಾಸ್ ಸ್ಥಗಿತ ಎಚ್ಚರಿಕೆ
ಕನ್ನಡ ಬಳಿಕ ಇದೀಗ ತಮಿಳು ಬಿಗ್ ಬಾಸ್ ಶೋ ನಿಲ್ಲಿಸಲು ತಮಿಳನಾಡು ಆಡಳಿತರೂಡ ಮೈತ್ರಿ ಪಕ್ಷ ಟಿವಿಕೆ (Thamizhaga Vazhvurimai Katchi) ಎಚ್ಚರಿಕೆ ನೀಡಿದೆ. ತಮಿಳುನಾಡು ಟಿವಿಕೆ ನಾಯಕ, ಶಾಸಕ ವೇಲುಮುರುಗನ್ ಬಿಗ್ ಬಾಸ್ ತಮಿಳು ಶೋ ನಿಲ್ಲಿಸುವುದಾಗಿ ಹೇಳಿದ್ದಾರೆ. ಕಾರಣ ಇದು ತಮಿಳು ಸಂಸ್ಕೃತಿ ಹಾಗೂ ಪರಂಪರೆಗೆ ವಿರುದ್ಧವಾಗಿದೆ ಎಂದಿದ್ದಾರೆ.
36
ತಮಿಳು ಬಿಗ್ ಬಾಸ್ ಅಸಭ್ಯ ಎಂದ ಶಾಸಕ
ತಮಿಳು ಬಿಗ್ ಬಾಸ್ ಅಸಭ್ಯ ಎಂದ ಶಾಸಕ
ತಮಿಳು ಬಿಗ್ ಬಾಸ್ ಶೋದಲ್ಲಿ ಸ್ಪರ್ಧಿಗಳ ನಡೆ, ಕಿಸ್ಸಿಂಗ್, ಬೆಡ್ ರೂಂನಲ್ಲಿನ ನಡೆಗಳನ್ನು ಮಕ್ಕಳ ಜೊತೆ ನೋಡಲು ಸಾಧ್ಯವಾಗುತ್ತಿಲ್ಲ. ತಮಿಳು ಬಿಗ್ ಬಾಸ್ ತಮಿಳುನಾಡಿನ ಭವಿಷ್ಯಕ್ಕೆ ಧಕ್ಕೆ ತರುತ್ತಿದೆ. ಇದು ಯಾವ ಸಂಸ್ಕೃತಿ, ಈ ಶೋ ನೋಡಿ ನಮ್ಮ ಮಕ್ಕಳು ಹೇಗೆ ಬೆಳೆಯಬೇಕು? ಸಭ್ಯತೆ ಇಲ್ಲದ ಶೋ ತಮಿಳುನಾಡಿಗೆ ಬೇಕಿಲ್ಲ ಎಂದು ವೇಲುಮುರುಗನ್ ಆಕ್ರೋಶ ಹೊರಹಾಕಿದ್ದಾರೆ.
ವೇಲುಮುರುಗನ್ ಈಗಾಗಲೇ ತಮಿಳುನಾಡು ವಿಧಾನಸಭೆ ಸ್ಪೀಕರ್ ಮುಂದೆ ಪ್ರಸ್ತಾವನೆ ಇಟ್ಟಿದ್ದಾರೆ. ಮಕ್ಕಳ ಭವಿಷ್ಯ ಹಾಳುಮಾಡುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ನಿರ್ಬಂಧಿಸುವಂತೆ ಮನವಿ ಮಾಡಿದ್ದಾರೆ. ತಮಿಳು ಬಾಗ್ ಬಾಸ್ ಮನೆ ಮುಂದೆ ಈ ಕುರಿತು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮುರುಗನ್ ಹೇಳಿದ್ದಾರೆ.
56
ಬಿಗ್ ಬಾಸ್ ನಿಲ್ಲಿಸಲು ಆಗ್ರಹ
ಬಿಗ್ ಬಾಸ್ ನಿಲ್ಲಿಸಲು ಆಗ್ರಹ
ಶಾಸಕ ವೇಲುಮುರುಗನ್ ತಮಿಳು ಬಿಗ್ ಬಾಸ್ ನಿಲ್ಲಿಸಲು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಡಿಎಂಕೆ ಮಿತ್ರ ಪಕ್ಷವಾಗಿರುವು ವೇಲುಮುರುಗನ್ ಅವರ ಟಿವಿಕೆ ಮಹತ್ವದ ಬೇಡಿಕೆ ಮುಂದಿಟ್ಟಿದೆ. ಇತ್ತ ಭಾರಿ ಪ್ರತಿಭಟನೆಗೆ ಮುಂದಾಗಿದೆ. ಹೀಗಾಗಿ ಕನ್ನಡದ ಬಳಿಕ ಇದೀಗ ತಮಿಳು ಬಿಗ್ ಬಾಸ್ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.
66
ವಿಜಯ್ ಸೇತುಪತಿ ನಡೆಸಿಕೊಡುವ ಬಿಗ್ ಬಾಸ್
ವಿಜಯ್ ಸೇತುಪತಿ ನಡೆಸಿಕೊಡುವ ಬಿಗ್ ಬಾಸ್
ತಮಿಳು ಬಾಗ್ ಬಾಸ್ ಕಾರ್ಯಕ್ರಮವನ್ನು ನಟ ವಿಜಯ್ ಸೇತುಪಥಿ ನಡೆಸಿಕೊಡುತ್ತಿದ್ದಾರೆ. ಅಕ್ಟೋಬರ್ 5 ರಿಂದ ಈ ರಿಯಾಲಿಟಿ ಶೋ ಆರಂಭಗೊಂಡಿದೆ. 20 ಸ್ಪರ್ಧಿಗಳಿಂದ ಆರಂಭಗೊಂಡಿರುವ ಬಿಗ್ ಬಾಸ್ ತಮಿಳು ಇದೀಗ ಟಿವಿಕೆ ಸೇರಿದಂತೆ ಹಲವರ ಕೆಂಗಣ್ಣಿಗೆ ಗುರಿಯಾಗಿದೆ.