ಓ ದೇವ್ರೇ ಇದು ಮಾತ್ರ ಸುಳ್ಳಾಗದಿರಲಿ: ಲಕ್ಷ್ಮೀ ನಿವಾಸ ಸೀರಿಯಲ್ ಪ್ರೇಕ್ಷಕರ ಪ್ರಾರ್ಥನೆ

Published : Oct 13, 2025, 11:50 AM IST

Lakshmi nivasa Kannada Serial:  'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಆರೇಳು ತಿಂಗಳ ವೀಕ್ಷಕರ ಕಾಯುವಿಕೆಗೆ ತೆರೆ ಬೀಳುವ ಲಕ್ಷಣಗಳು ಕಾಣಿಸುತ್ತಿವೆ. ವಿಶ್ವನ ಮನೆಯಲ್ಲಿ ಜಯಂತ್ ಹಾಗೂ ಜಾಹ್ನವಿ ಕೊನೆಗೂ ಮುಖಾಮುಖಿಯಾಗಿದ್ದು, ಚಿನ್ನುಮರಿಯನ್ನು ನೋಡಿ ಜಯಂತ್ ಆಶ್ಚರ್ಯಚಕಿತನಾಗಿದ್ದಾನೆ.

PREV
15
ಲಕ್ಷ್ಮೀ ನಿವಾಸ ಸೀರಿಯಲ್

ಕಳೆದ ಆರೇಳು ತಿಂಗಳಿನಿಂದ ಲಕ್ಷ್ಮೀ ನಿವಾಸ ಸೀರಿಯಲ್ ವೀಕ್ಷಕರು ಜಯಂತ್ ಮತ್ತು ಜಾಹ್ನವಿ ಮುಖಾಮುಖಿಯಾಗೋದನ್ನು ಕಾಯುತ್ತಿದ್ದಾರೆ. ಜಯಂತ್‌ ಮನೆಯೊಳಗೆ ಜಾಹ್ನವಿ ಹೋಗಿ ಬಂದರೂ ಇಬ್ಬರ ಭೇಟಿಯಾಗಿರಲಿಲ್ಲ. ವಿಶ್ವನ ಮನೆಯಲ್ಲಿ ತನ್ನ ಚಿನ್ನುಮರಿ ಇರೋ ಬಗ್ಗೆ ಜಯಂತ್‌ಗೆ ಅನುಮಾನವಿದೆ.

25
ಜಾನು ಮತ್ತು ಜಯಂತ್ ಭೇಟಿ

ಜಾನು ಮತ್ತು ಜಯಂತ್ ಭೇಟಿಯನ್ನು ವಿಶ್ವ ಪದೇ ಪದೇ ತಡೆಯುತ್ತಿದ್ದಾನೆ. ವಿಶ್ವನ ಮನೆಗೆ ಬಂದಿರುವ ಜಯಂತ್‌ಗೆ ಜಾನು ಕಾಣಿಸಿಕೊಂಡಿದ್ದಾಳೆ. ಅಡುಗೆಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಜಾಹ್ನವಿ, ಅಲ್ಲಿಂದ ಎಸ್ಕೇಪ್ ಆಗುತ್ತಿದ್ದಳು. ಅಷ್ಟರಲ್ಲಿ ಜಯಂತ್‌ ಅಲ್ಲಿಗೆ ಬಂದಿದ್ದಾನೆ. ಜಯಂತ್ ಮತ್ತು ಜಾನು ಮುಖಾಮುಖಿಯಾಗುತ್ತಿರೋದಕ್ಕೆ ವೀಕ್ಷಕರು ಖುಷಿಯಾಗಿದ್ದಾರೆ.

35
ತನುಗೆ ಅನುಮಾನ

ಈ ಹಿಂದೆ ಇದೇ ರೀತಿ ಜಾನು ಮತ್ತು ಜಯಂತ್‌ ಇನ್ನೇನು ಭೇಟಿಯಾಗ್ತಾರೆ ಅನ್ನೋವಷ್ಟರಲ್ಲಿ ಬೇರೆ ಬೇರೆಯಾಗುತ್ತಿದ್ದರು. ಸೂಪರ್ ಮಾರ್ಕೆಟ್‌ನಲ್ಲಿಯೂ ಜಯಂತ್ ಕಣ್ಣಿಗೆ ಸ್ಪ್ರೇ ಮಾಡಿ ಜಾನು ಎಸ್ಕೇಪ್ ಆಗಿದ್ದಳು. ಹೀಗೆ ಇದೇ ರೀತಿ ಇಬ್ಬರ ಭೇಟಿಯನ್ನು ನಿರ್ದೇಶಕರು ಮುಂದೂಡುತ್ತಲೇ ಬಂದಿದ್ದಾರೆ. ಮತ್ತೊಂದೆಡೆ ವಿಶ್ವನನ್ನು ಮದುವೆಯಾಗುತ್ತಿರೋ ತನುಗೆ ಅನುಮಾನ ಬಂದಿದೆ.

45
ದೀಪಕ್ ನಟನಾ ಸಾಮರ್ಥ್ಯ

ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಚಿನ್ನುಮರಿಯನ್ನು ನೋಡಿ ಜಯಂತ್, ಆಶ್ಚರ್ಯದಿಂದ ಖುಷಿಯಾಗಿರೋದನ್ನು ತೋರಿಸಿದ್ದಾರೆ. ಆಶ್ಚರ್ಯ ಮತ್ತು ಸಂತೋಷ ಎರಡೂ ಭಾವನೆಗಳನ್ನು ಏಕಕಾಲದಲ್ಲಿ ತೋರಿಸಿದ್ದು ಜಯಂತ್ ಪಾತ್ರದಲ್ಲಿ ನಟಿಸುತ್ತಿರುವ ದೀಪಕ್ ಅವರ ನಟನಾ ಸಾಮರ್ಥ್ಯವನ್ನು ತೋರಿಸುತ್ತಿದೆ.

ಇದನ್ನೂ ಓದಿ: "ಕಲಿಯುಗ ಕಣ್ರೀ..ಮಾಡಿದ್ ಪಾಪ ಸುಮ್ನೆ ಬಿಡುತ್ತಾ?", ನೋಡಿ ಸಂತೋಷ್ ಹಳ್ಳಕ್ಕೆ ಬೀಳೋ ಸಮಯ ಆಗ್ಲೇ ಬಂದಾಯ್ತು!

55
ನೆಟ್ಟಿಗರ ಕಮೆಂಟ್

ಈ ಪ್ರೋಮೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಇದೇನಾದರೂ ನಿಜ ಆಗದೇ ಹೋದ್ರೆ, ಡೈರೆಕ್ಟರ್ ಈ ಜಯಂತ್ ಕೈ ಅಲ್ಲೇ ಕೊ*ಲೆ ಆಗಿ ಹೋಗಲಿ ಅನ್ನೊದು ನಮ್ಮ ಆಸೆ ಎಂದಿದ್ದಾರೆ. ಜಯಂತ್ ಆಕ್ಟಿಂಗ್ ಸೂಪರ್. ಇವಳು ಬದುಕಿರೋದೊ ಗೊತ್ತಾಗಲು  1ವರ್ಷ ಬೇಕಾಯಿತು. ಮೊದಲು ಅಲ್ಲಿಂದ ದರ ದರ ಎಳೆದುಕೊಂಡೂ ಹೋಗಪ್ಪ ಜಯಂತ್ ಎಂದು ವೀಕ್ಷಕರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಲಕ್ಷ್ಮೀ ನಿವಾಸದಲ್ಲಿ ಅಪ್ಪ ಮಗ... ಗಂಧದಗುಡಿಯಲ್ಲಿ ಮಾವ- ಅಳಿಯ...ಯಾವ ಪಾತ್ರ ನಿಮ್ಮ ಫೇವರಿಟ್?

Read more Photos on
click me!

Recommended Stories